ಚಿತ್ಕಳಾವತರಣ ನಿಟ್ಟು ಸುರುಬಿಡುತ್ತಿದ್ದುದನ್ನು ನಾನು ಕಿವಿಯಾರ ಕೇಳಿದೆನು. ಇದನ್ನು ಮಹಾಮಾದದಲ್ಲಿ ಬಿನ್ನಿಸುವುದಕ್ಕಾಗಿಯೇ ನಾನಿಲ್ಲಿಗೆ ಬೇಗದಿಂದ ಬಂದೆ ನು, ಸ್ವಾಮಿ ತಿಳಿಯದ ವಿರಯವೊಂದೊ ಇಲ್ಲ. ಸಕಲ ಜಗದಾಪಾ ರಕ ನೀನೇ ಸೂತ್ರಧಾರ, ಜಗತ್ತನ್ನುದ್ಧರಿಸುವುದಕ್ಕೆ ಇದು ಒಳ್ಳೆಯ ಸಮಯ, ಎಂದು ಬಿತ್ಸೆಸಿದನು. ಆಗ ನಾನು ಭೂಮಿಯಲ್ಲಿ ಸದ್ಧ ರದ್ದಾ ಪನೆಯನ್ನು ಮಾಡಿ ಬರುವುದಕ್ಕೆ ಯಾರನ್ನು ಕಳುಹಬೇಕೆಂದು ಯೋಚಿ ಸುತ್ತಿರುವರಲ್ಲಿ ಪಾರತಿಯು-ಎಲೈ ಸ್ವಾಮಿಯೆ! ಭೂಲೋಕದ ಮನುಜರು ಹುಟ್ಟು ಸಾವುಗಳಿಗೆ ಸಿಕ್ಕಿರುವರೆಂಬುದನ್ನು ನಾನು ಬಲ್ಲೆ; ನಿನ್ನ ಮಹಾಸಭೆಯಲ್ಲಿರತಕ್ಕವರು ಕೂಡ ಆ ಭನದಲ್ಲಿ ಬರುವುದುಂಟೆ? ಎಂದು ಕೇಳಿದಳು. ಆಗ ನಾನು-ಚೆನ್ನಾಯಿತು! ಈ ವಿಷ್ಣು ಬ್ರಹ್ಮಾದಿ ಗಳಗು ಕೂತ ಭವಬಂಧವು ತಪ್ಪಿದುದಲ್ಲವೆಂದು ನುಡಿದೆನು, ದೇವಿಯು ಹಾಗಾದರೆ ಅಂತಹ ಛಬಂಧವನ್ನು ತಪ್ಪಿಸಿಕೊಳ್ಳುವುದಕ್ಕೆ ಯಾರಿಂದಲೂ ಆಗುವುದಿಲ್ಲವೆ? ಎನ್ನಲು, ನಾನು-ಆಗುವುದು; ಪಟ್ಟಲ ರಹಸ್ವಾರ್ಥ ನನ್ನ ತಿಳಿದು ತತ್ಸಾಧನಾಬಲದಿಂದ ನಿತ್ಯ ಸುಖವನ್ನು ಪಡೆದವರಿಗೆ ಭವ ಬಂಧವು ತೊಲಗಿ ಹೋಗುವುದು ಎಂದು ಹೇಳಿದೆನು. ಹಾಗಾದರೆ ನಿತ್ಯಸು ಖವನ್ನು ಕೊಡುವ ಆ ಪಟ್ಟ೮ರಹಸ್ವಾರ್ಥವನ್ನು ನನಗೆ ನಿರೂಪಿಸಿ ಕ ತಾರ್ಥಳಂ ಮಾಡಬೇಕೆಂದು ಕೇಳಿಕೊಂಡಳು. ಹೀಗೆ ಪಾರತಿಯ ಪ್ರಾರ್ಥಿಸಿಕೊಂಡುದು ಸಕಲ ಗಣಕುಲಕ್ಕ ಸಂತೋಷವನ್ನುಂಟುಮಾ ಡಿತು, ಏಕೆಂದರೆ-ಗಟ್ಟಲತತ್ರವನ್ನು ತಿಳಿಯಬೇಕೆಂಬ ಆಸೆಯು ಅವ ರಿಗೂ ಇದ್ದಿತು. ಅವರ ಈ ವಿಧವಾದ ಮನೋಭಾವವನ್ನು ತಿಳಿದುಕೊಂ ಡೆ: ಅವರ ಮೇಲಣ ಕಾರುಣ್ಯದಿಂದ ಪಾರತಿಯು ಆ ರೀತಿಯಲ್ಲಿ ಪ್ರಾ ರ್ಥಿನಿರುವಳೆಂಬುದನ್ನು ನಂದೀಶ್ವರನು ಅರಿದು, ಕೈಮುಗಿದು, ನನ್ನ ಮುಂ ದೆ ನಿಂತು, ಸಾವಿಾ! ಈ ಜಗನ್ಮಾತೆಯು ನಮ್ಮೆಲ್ಲರನ್ನೂ ಉದ್ದಾರವಾ ಡಬೇಕೆಂಬ ದಯಾವಿಶೇಷದಿಂದಲೇ ತಮ್ಮಲ್ಲಿ ಆ ಪ್ರಾರ್ಥನೆಯನ್ನು ಮಾಡಿ ಕೊಂಡಿರುವಳು. ಅದುಕಾರಣ ಈ ಮಾತಾಯಿಯ ಬಿನ್ನಪವನ್ನು ಅವಧಾ ನಕ್ಕೆ ತಂದುಕೊಂಡು, ಪಟ್ಟಿಲರಹಸ್ಯಾರ್ಥವನ್ನು ಬೋಧಿಸಿ, ನಮ್ಮೆಲ್ಲ ರನ್ನೂ ಕಾಪಾಡಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿಕೊಂಡನು, ಆಗ
ಪುಟ:ಚೆನ್ನ ಬಸವೇಶವಿಜಯಂ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.