ಗಂಗಾಧರ ರೀತಿಯು ܡܸܬܩ ನನ್ನೆಲ್ಲ ಬೆಳಗಿ ಉರಿದುಂಬಿಸಿತು. ಎತ್ತ ನೋಡಿದರೂ ಹೊಗೆ ಕಿಡಿ ದಳ್ಳು ರಿಗಳೇ ಕಾಣುತ್ತಿದ್ದುವು, ಭುಗಿಭುಗಿಲ್ ಛಟಛಟಲ್ ಧಗಧಗಂ ಎಂಬ ಶಬ್ದವೇ ಕೇಳಿಸುತ್ತಿದ್ದಿತು, ಬೆಟ್ಟಗಳು ಸಿಡಿದುವು, ಸಮುದ್ರಗಳು ಕು ದಿದುವು ಭೂಮಿಯು ಬಿರಿದಿತು, ಪಾತಾಳದ ದಿಗ್ಗ ಜಕೂರ ಶೇಷರುಗಳು ಕೈ ಕಾಲು ಬೆನ್ನು ಹೆಡೆಗಳನ್ನು ಕೂಡಹಿಕೊಂಡು ಭೂಮಿಯನ್ನು ನಡು ಗಿನಿದುವು. ಗಗನತಟದ ಮೇಘಗಳೆಲ್ಲ ತುಯ್ಯನೆ ನೀದುಹೋದುವು. ಪಕ್ಷಿಗಳು ಪುರುಪುರನೆ ಉರಿದುಹೋದುವು. ಆನೆ ಸಹ್ಮ ಹುಲಿ ಕರಡಿ ಶರಭ ಮೊದಲಾದ ಮೃಗಗಳೆಲ್ಲ ಬೆಂದು ಕಿರುಚಾಡಿ ಸತ್ತುವು, ದನುಜ ದಿವಿಜ ಮನುಜಾದಿಗಳೆಲ್ಲರೂ ಬೆಂದು ಬಸವಳದು ನಿಕ್ಷೇತನರಾದರು. ಹರಿ ಬ್ರಹ್ಮ ರು ಹಾ ! ಎಂದು ಮೊರೆಯಿಟ್ಟರು. ಶಿವನೇ ರಕ್ಷಿಸೆಂದು ಮನು ಮುನಿಗಳು ಕೂಗಿದರು. ಆಗ ಪಾರತಿಯು ಇದೆಲ್ಲಾ ತನ್ನ ಅಪರಾಧದ ಫಲವಂದು ತಿಳಿದು, ಮುಚ್ಚಿದ್ದ ಕೈಗಳನ್ನು ಥಟ್ಟನೆ ತರೆದಳು, ಪಾರ ತಿಯ ಕೈಗಳಲ್ಲಿ ತುಂಬಿದ್ದ ಶಿವನ ಆನಂದಾಶ್ರುವು ಹತ್ತು ಬೆರಲುಗಳ ಮಾ ರ್ಗವಾಗಿಯೂ ಭೂಮಿಯಮೇಲೆ ಝಲ್ಲನೆ ಸುರಿದು ಹತ್ತು ಹೂಳೆಗಳಾ ಯಿತು. ಹಚ್ಚೆ ಹಜ್ಞೆಗೆ ಸಾವಿರ ಹತ್ತು ಸಾವಿರ ಲಕ್ಷಾನುಲಕ್ಷಭಾಗಗಳಾಗಿ ಭೂಲೋಕವನ್ನೆಲ್ಲ ವ್ಯಾಪಿಸಿ ಭೋರೆಂದು ಮೊರೆದು ಹರಿದಿತು. ಇದರಿಂದ ಬೆಂಕಿಯಲ್ಲಿ ಆರಿಹೋಯಿತು, ಜಗತ್ತೆಲ್ಲ ಜಲಮಯವಾಯಿತು. ಎತ್ತ ನೋಡಿದರೂ ಸುಳ ನೊರೆ ತೆರೆಗಳಿಂದ ಕೂಡಿದ ಪ್ರವಾಹ, ಎಲ್ಲಿ ನೋಡಿ ದರೂ ಕೊಚ್ಚಿ ಬರುವ ಕಲ್ಲು ಗುಂಡುಗಳು ಕಾಣುವಂತಾದುವು. ಮಹಾ ಪ್ರಳಯಕಾಲದಲ್ಲಿ ಏಕಾರ್ಣವವಾಗುವಂತೆ ಲೋಕವೆಲ್ಲ ತೋರಿತು, ಅ ಸ್ಮಿಷ್ಟು ಉಳಿದಿದ್ದ ಸುರನರೋರಗರೆಲ್ಲ ನೀರಿನಲ್ಲಿ ಮುಳುಗಿ ಪ್ರಾಣಬಿ ಟ್ಟರು.” ಹರಿಯು ಆಲದೆಲೆಯಮೇಲೆ ಮಲಗಿ ಮುಳುಗುತ್ತಲೂ ತೇಲು ತಲೂ ಬಾಯ್ದೆ ತುಂಬಿದ ನೀರನ್ನು ಉಗುಳುತ್ತಲೂ, ಭಯದಿಂದ ಕಣ್ಣು ಗುಡ್ಡೆಗಳನ್ನು ದಿಕ್ಕು ದಿಕ್ಕಿಗೆ ತಿರುಗಿಸಿ ಕಂಪಿಸುತ್ತಲೂ ಕಾಲಯಾಪನೆ ಮಾಡುತ್ತಿದ್ದನು. ಈ ಮಹಾಪ್ರಳಯವನ್ನು ಕಂಡು ಶಂಕರಿಯು ಬೆರಗಾ ದಳು. ಜಗತ್ತಿಗೆ ನಾಶವುಂಟಾಯ್ದೆಂದು ತಿಳಿದು, ಅದರ ಉದ್ದಾರಕ್ಕಾಗಿ ಪರಶಿವನು ತನ್ನ ಜಡೆಯ ತುದಿಯನ್ನು ಹಿಡಿದು ಆ ಮಹಾಹಲಕ್ಕೆ ಅದ್ಧ
ಪುಟ:ಚೆನ್ನ ಬಸವೇಶವಿಜಯಂ.djvu/೨೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.