owಕಿ ಅಂಧಕಸಕ್ಕಾ ರಯಾತ್ರೆಯು ಶಿವನರಮನೆಯ ಬಾಗಿಲಲ್ಲಿ ನಿಂತು ಗೋಳಾಡುತ್ತಿದ್ದರು. ಅದನ್ನು ಶಿವನು ಕೇಳಿ ರಕ್ಕಸನಮೇಲೆ ಕೋಪಗೊಂಡು, ಅವನ ವಧೆಗಾಗಿ ಸಕಲ ದೇವ ಸೇನೆಯೂ ಸಿದ್ಧವಾಗಲಿ ಯೆಂದು ನಂದೀಶನೊಡನೆ ಅಪ್ಪಣೆಮಾಡಿದನು. ಅದರಂತೆಯೇ ನಂದೀಶನು ಸರಿಸಲು, ನಿದ್ದ ವಿದ್ಯಾಧರ ಗರುಡ ಗಂಧರ ಯಕ್ಷ ಭೂತ ವಿಶಾಚ ಸಾಧೂ ಗುಡ್ಡಕ ವಸು ಮಯೂರೊರಗ ದಿಕ್ಕಾಲ ನವಗ್ರಹ ಮನು ಮುನಿ ಮೊದಲಾದವರೆಲ್ಲರೂ ಸನ್ನಾಹಗೊಂಡು ನಿಂತರು. ಅನಂತ ಬ್ರಹ್ಮರು ಅಗಣಿತವಿಸ್ಸುಗಳು ತಮ್ಮ ತಮ್ಮ ವಾಹನವನ್ನೇರಿ ಸಿದ್ದ ರಾದರು, ವೀರೇಶ ಗಣೇಶ ಕುಮಾರ ನಂದಿ ಭೈರವ ನೃಂಗೀಶರುಗಳು ತಮ್ಮ ತಮ್ಮ ಬಲದೊಡನೆ ಕೂಡಿ ಅಣಿಯಾದರು. ಕೂರಾಸ್ಟ್ ವಜ ದಂಸ್ಕೃತಿ ಅನಿಲವೇಗ ಮೊದಲಾದ ಅಸಂಖ್ಯಾಕರುದ್ರರಗಣವೂ, ಘಂಟಾ ಕರ್ಣ ಧೂಮಾಂಗ ವಿರೂಪಾಕ್ಷ ವಿಕಲಾಂಗ ಮೊದಲಾದ ಅಪರಿಮಿತಪ ಮಥರಗಣವೂ, ಆಯತ್ತವಾಗಿ ನಿಂತಿತು. ಎಡಗಡೆಯಲ್ಲಿ ಪಾರತಿಯು ಸಕಲ ಶಕ್ತಿಗಣದೊಡನೆ ಕೂಡಿ ಸಿಕ್ಕ ವಾಹಿನಿಯಾಗಿ ಸಜ್ಜುಗೊಂಡಳು. ಸಪ್ತರ್ಮಿಗಳು ಯೋಗಾತಾರರುಗಳು ಒಲಗಡೆಯಲ್ಲಿ ಸನ್ನದ್ಧರಾದರು. ಮುಂದೆ ವೇದಪುರುಷರು ಉದ್ಧೋ ವಿಸುತ್ತಿದ್ದರು. ಆಗ ಶಂಕರನು ಮಹಾ ವೃಷಭವನ್ನೇರಿ ಮಧ್ಯದಲ್ಲಿ ವಿರಾಜಿಸುತ್ತಿದ್ದನು, ಛತ್ರಚಾಮರಗಳ ಉಪ ಚಾರವು ನಡೆಯುತ್ತಿದ್ದಿತು. ಬಿರದಮ್ಮ ಟೆ, ಕಹಳೆ, ದುಂದುಭಿಗಳು ಮಹಾಶಬ್ದಗೊಂಡುವು. ಶಿವನಪ್ಪಣೆಯಮೇರೆ ಸೇನೆಯು ನಡೆಗೊಂಡಿ ತು, ದುರ್ಗಗಳನ್ನಿಳಿದು ಬೀಡನ್ನು ಬಿಟ್ಟಿತು. ಮಳೆಯ ಹನಿಯನ್ನೆಣಿಸಿ ದಿರೂ ಎಣಿಸಬಹುದು, ನಕ್ಷತ್ರಗಳನ್ನು ಗಣಿಸಿದರೂ ಗಣಿಸಬಹುದು, ಈ ಮಹಾಸೈನ್ಯವನ್ನು ಮಾತ್ರ ಶಿವನ ಹೊರತು ಮತ್ತಿನ್ನಾರೂ ಲೆಕ್ಕವಿಡಲಾ ರರೆಂಬಂತೆ ಅಪರಿಮಿತವಾಗಿದ್ದಿತು. ಇಂತಹ ಶಿವಸೈನ್ಯವು ಬರುತ್ತಿರುವು ದೆಂಬ ವಾರೆಯನ್ನು ಕೇಳಿ ರಾಕ್ಷಸಸೈನ್ಯವೂ ಬೇಗಬೇಗನೆ ಇದಿರಾಗಿ ಹೋಯಿತು, ಉಭಯಸೇನೆಯೂ ಒಂದನ್ನೊಂದು ಸಂಧಿಸಿದುವು. ಚೂ ಣಿಯವರು ಒಬ್ಬರನ್ನೊಬ್ಬರು ನೋಡಿ ತೊಳ್ಕೊಡೆಗಳನ್ನು ತಟ್ಟಿದರು. ವೀರನಾದವು ವಿಜೃಂಭಿಸಿತು, ಕೈ ಕೈ ಮಸಗಿತು. ಬಿಲ್ಲುಗಾರರು ಬರಸೆ ಳೆದು ಬಾಣಗಳನ್ನು ಬಿಡುತ್ತಲೂ, ಕೈಗಾರರು ಕತ್ತಿಯನ್ನು ಬಳಸಿ 86
ಪುಟ:ಚೆನ್ನ ಬಸವೇಶವಿಜಯಂ.djvu/೨೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.