ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*] ಅಂಧಕಹಾ ಕಯಾತುಯು ಎv4 ದನು. ಅವರೊಳಗೆ ಪ್ರಮಥಸೇನೆಯ) ಪ್ರಾಕಾರದಂತೆ ಆವರಿಸಿದ್ದಿ ತು. ಶಿವನ ಎರಡುಪಕ್ಕಗಳಲ್ಲಿ ಹರಿಬ್ರಹ್ಮರ ಸೇನೆಯು ನಿಂತಿತು. ಶಂಕರನು ಎಲ್ಲ ಸೇನೆಯ ಒಟ್ಟುಗಾವಲನ್ನು ಕಾಲಭೈರವನಿಗೆ ವಹಿಸಿದನು. ಪಣ್ಣು ಖನಿಗೆ ಸೇನಾಧಿಪತ್ಯವನ್ನು ಕೊಟ್ಟನು. ವೀರಭದ್ರೇಶನಿಗೆ ಇತರರಮೆ ಲೆಲ್ಲ ಯಜಮಾನಿಕೆಯನ್ನು ಕೊಟ್ಟನು, ಅತ್ತ ರಾಕ್ಷಸಸೇನೆಯಲ್ಲಿ ಒಟ್ಟು ಗಾವಲು ಜಂಭಾಸುರನಿಗೂ, ಶತಮಾಯನಿಗೆ ಸೇನಾಪತಿತೃವೂ, ಉಳಿದ ಯಜಮಾನಿಕೆಯು ಶುಂಭಾಸುರನಿಗೂ ಅಂಧಕಾಸುರನಿಂದ ಕೊಡಲ್ಪ ಟಿತು. ನಾಳೆಯ ದಿನ ದೊಡ್ಡ ಯುದ್ಧ ವಾಗುವುದೆಂದು ಎರಡುಕಡೆಯವ ರೂ ತಮ್ಮ ತಮ್ಮ ಸೇನೆಯಲ್ಲಿ ಸಾರಿದರು. ಎಲ್ಲರೂ ಉಂಡು ನಿದ್ರಾಗತ ರಾದರು. ಬಳಿಕ ಬೆಳಗಿನ ಕೋ೪ನು ಕೂಗಿತು. ಉಭಯ ಸೇನೆಯ ಪ್ರತಾಪಾಗ್ನಿಯು ಈ ದಿನ ಇಷ್ಟುಮಟ್ಟಿಗೆ ಪ್ರಇಲಿಸುವುದೆಂದು ಕಾಲ ಪುರುಷನು ಜಗತ್ತಿಗೆ ಸೂಚಿಸುವಂತೆ ಮೂಡಣದಿಕ್ಕಿನಲ್ಲಿ ಕೆಂಪು ಮೂಡಿ ತು, ತಾವರೆಗಳು ಅರಲಿದುವು, ಸನು ಉದಿಸಿದನು. ಕಳೆಗಳೂ ಭೇರಿಗಳೂ ಧ್ವನಿಗೈದುವು. ಎಲ್ಲರೂ ಎದ್ದ ರು. ನಿತ್ಯಕ್ರಿಯೆಗಳನ್ನು ತೀರಿ ಸಿದರು, ತಮ್ಮ ತಮ್ಮ ವಾಹನಗಳನ್ನು ಅಣಿಮಾಡಿಕೊಂಡು, ಸೇನಾನಿ ಯ ಅಪ್ಪಣೆಯ ಮೇಲೆ ಹತ್ತಿ ನಿಂತರು. ರಕ್ಕಸನ ದಂಡೂ ನಿದ್ದ ವಾಯಿತು. ಆನೆಗಳು ಕುದುರೆಗಳು ತಮ್ಮ ತಮ್ಮ ನೆಳಲನ್ನೇ ಪ್ರತಿಗಜತುರಗಗಳೆಂದು ತಿಳಿದು, ಹೂಂಕರಿಸಿ ಘಾತಿಸುತ್ತಿದ್ದುವು ವೀರರು ಕೌರೋದ್ರೇಕದಿಂದ ಗರ್ಜಿಸುತ್ತಿದ್ದರು. ಅತ್ತ ಅಂಧಕಾಸುರನು ಸಜ್ಜಾಗಿ ನಿಂತು, ತನ್ನ ಬಲ ದಲ್ಲಿರುವ ಶುಕ್ರಾಚಾನನ್ನು ಕುರಿತು, ಗುರುವೆ ! ಇದಿರುಸಕ್ಷದಲ್ಲಿ ನಿಂತಿರುವ ದೇವಪ್ರಮುಖರು ಯಾರು ಯಾರೆಂಬುದನ್ನು ವಿವರಿಸಿ ತಿಳಿಸಿ ಕೊಡು, ಎಂದು ಬಿನ್ನಿಸಲು, ಶುಕ್ರಾಚಾನು- ಅದೋ ಸಾವಿರ ಕಣ್ಣುಗಳಿಂದ ಕೂಡಿ ವಜ್ರಾಯುಧವನ್ನು ವಿಡಿದು ಬಿಳಿಯಾನೆಯಮೇಲೆ ಕುಳಿತಿರುವವನೇ ದೇವೇಂದ್ರನು; ಹಂಸವನ್ನೇರಿ ನಾಲ್ಕು ಮುಖಗಳಿಂದ ಕೂಡಿರುವವರೇ ಬ್ರಹ್ಮನು; ಅವನ ಪಕ್ಕಗಳಲ್ಲಿರುವವರೇ ಉಳಿದ ಎಂಟು ಮಂದಿ ಬ್ರಹ್ಮರು; ಗರುಡನನ್ನೇರಿ ನಾಲ್ಕು ಕೈಗಳಲ್ಲಿ ಶಂಖ ಚಕ್ರ ಗದಾ ಕಾರ್ಬಗಳನ್ನು ಹಿಡಿದು ಪೀತಾಂಬರಧಾರಿಯಾಗಿ ಕಪ್ಪು ಬಣ್ಣದಿಂದೊಪ್ಪು