pv ಕನ್ನಬಸವೇಕವಿಜಯಂ (wಂಹ ೪) . [ಅಧ್ಯಾಯ ಡಿಸುತ್ತ ಬಂದುವು. ಶಿವನ ಬೆಂಬಲವು ನನಗಿರುವಾಗ ನನಗೆ ಅಪದ ಯವೆಂದರೇನು ? ಎಂದು ಹೇಳಿಕೊಂಡು, ಒಬ್ಬರನೊಬ್ಬರು ಹುರಿಮಾ ಡುತ್ತ, ದೇವಸೇನೆಯವರು ರೌದ್ರಾವೇಶದಿಂದ ರಕ್ಕಸರನ್ನು ಬಡಿದು ಕಡಿ ದು ಉರುಳಿಸಿ ಬಿರುಗಾಳಿಯು ತರಗುಗಳನ್ನು ಗುಡಿಸಿಕೊಂಡು ಹೋಗು ವಂತ ಸವರಿ ತರುಬಿಕೊಂಡು ಹೋಗುತ್ತಿದ್ದರು. ಕ್ಷಣಕ್ಷಣಕ್ಕೆ ರಾಕ್ಷಸ ಸೋಮವು ಬಯಲಾಗುತ್ತಲೂ, ಉಳಿದವರು ಹಿಮ್ಮೆಟ್ಟುತ್ತಲೂ ಇರು ವುದನ್ನು ಬಲ ನಮುಚಿ ಜಂಭ ದುಂದುಭಿ ಮಹಾನಾಭ ಗಜಶಿರ ಶೂರ ಕ ವೃತ್ರ ಮೊದಲಾದ ಮಹಾದೈತ್ಯರು ಕಂಡು, ಕ್ರೋಧದಿಂದ ಘುಡುಘು ಡಿಸಿ, ಕಾರುಗಿಲುಗಳು ಮುಚ್ಚುವಂತೆ ದೇವಸೇನೆಯನ್ನಾಕ್ರಮಿಸಿ, ಪ ಳಯಕಾಲದ ವೃಷ್ಟಿಯಂತೆ ಅವಿಚ್ಛಿನ್ನವಾಗಿ ಕೂರಬಾಣಗಳನ್ನು ಸುರಿ ಸುತ್ತ ಬಂದರು. ಇಂದ್ರನಮೇಲೆ ನಮುಚಿಯೂ, ಅಗ್ನಿಯಮೇಲೆ ಬಲ ನೂ, ಯಮನಮೇಲೆ ಜಂಭನೂ, ನಿಬ್ಬುತಿಯಮೇಲೆ ಗಜಪಿರನೂ, ವರು ಇನಮೇಲೆ ದುಂದುಭಿಯ, ವಾಯುವಿನಮೇಲೆ ಶೂರ್ಪಕನೂ, ಕುಬೇ ರನಮೇಲೆ ಮಹಾನಾಭನೂ, ಈಶಾನನ ಮೇಲೆ ವೃತ್ರನೂ ಬಿದ್ದು ಕಾದಾ ಡಲುಪಕ್ರಮಿಸಿದರು. ನನುಚಿಯು ಇಂದ್ರನು ಬಿಟ್ಟ ಬಾಣವನ್ನು ಮಧ್ಯ ದಕ್ಕೆ ಖಂಡಿಸಿ, “ ಎಲೆ ಇಂದ್ರನೆ ! ಪತ್ತಾರುಕಡೆ ನೀನು ನನ್ನ ಕೈಗೆ ಸಿಕ್ಕಿದ್ದು ಪ್ರಾಣವನ್ನುಳುಹಿಕೊಂಡು ಗೆದ್ದೆ ; ಅಂದಿನಂತೆ ಈಗಳೂ ಉ೪ ದು ಹೋಗುವೆನೆಂದು ಯೋಚಿಸಬೇಡ ; ಈಗಳೇ ನಿನ್ನ ಹೆಂಡಿರು ಮಕ್ಕ ೪ಗೆ ಬುದ್ದಿ ಹೇಳಿಬಿಟ್ಟು ಬಾ ; ಇಂದಿಗೆ ನಿನ್ನ ಪುಣ್ಯಫಲನೆಲ್ಲ ಮುಗಿದಿ ತೆಂದು ತಿಳ೨” ಎಂದು ಮೂದಲಿಸಿ, ನಿಶಿತವಾದ ಬಾಣವೊಂದನ್ನು ತೊಟ್ಟು ಕರ್ಣಾ೦ತವಾಗಿ ಸೆಳೆದು ಗುರಿಕಟ್ಟಿ ಬಿಟ್ಟು ಬೊಬ್ಬಿರಿದನು, ಅದನ್ನು ಇರಿ ದ್ರನು ನಡುದಾರಿಯಲ್ಲೇಖಂಡಿಸಿ, ಕಿಡಿಕಿಡಿಯಾಗಿ, :) ಎಲೋಖಳನೆ ! ರಾತ್ರಿ ಕುಡಿದ ಹೆಂಡದ ಮತ್ತು ಇನ್ನೂ ನಿನ್ನ ತಲೆಂ.ಎಂದ ಇಳಿದಿರುವಂತೆ ಕಾಣಲಿಲ್ಲ, ಅದರಿಂದಲೇ ಇಷ್ಟು ಹರಟುಯೆ ; ನಮ್ಮ ಬೆಂಬಲವಾಗಿ ರುವವನು ಯಾರು ಬಲ್ಲೆಯಾ ? ಈ ದಿನ ರಾಕ್ಷಸರ ಮಾಂಸವೆಲ್ಲ ವಿಶಾಚ ಗಳಿಗೆ ದೊಡ್ಡ ಔತಣವಾಗಬೇಕಾಗಿದ್ದು, ಮೊದಲು ನಿನ್ನ ಪ್ರಾಣವಾರುತ ವು ನನ್ನ ಬಾಣಸರ್ಪಕ್ಕೆ ಆಹುತಿಯಾಗಬೇಕಾಗಿದೆ ; ಇದೊ ಈ ಬಾಣ
ಪುಟ:ಚೆನ್ನ ಬಸವೇಶವಿಜಯಂ.djvu/೨೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.