೧೦] ಅಂಧಕಾಸುರಸಕ್ಕಾರವು ಎ ಟುಮಾಡಿಲ್ಲ ? ಎಂದು ಮೊದಲಾಗಿ ಹೇಳಿ, ಸಮಾಧಾನಪಡಿಸಿ, ಆಸ್ಕರಾದ ಜನಗಳನ್ನು ಕರೆದು, ಅವರೊಡನೆ_ C ಹಿಂದಾದ ಜಯಾಪಜಯಗಳ ಮಾ ತು ಹಾಗಿರಲಿ, ಮುಂದೆ ಶತ್ರುಗಳನ್ನು ಗೆಲ್ಲುವುದಕ್ಕೆ ಉಪಾಯವೇನೆಂಬುದ ನ್ನು ನೀವೆಲ್ಲರೂ ಚೆನ್ನಾಗಿ ಆಲೋಚಿಸಿ ಹೇಳಿರಿ” ಎಂದು ಕೇಳಿದನು. ಅದ ನ್ನು ಕೇಳಿ ಅವರುಗಳು ಒಬ್ಬರೊಬ್ಬರ ಮುಖವನ್ನು ನೋಡುತ್ತಿರಲು, ಗಗನಮೂರ್ಧಿಯೆಂಬ ರಾಕ್ಷಸನು ಎದ್ದು ನಿಂತು ಬೇಯಾ ! ಈ ನಿಮ್ಮ ಮಹಾಸಭೆಯಲ್ಲಿ ಇನ್ನೂ ಮಹಾವೀರಾಧಿವೀರರೆಷ್ಟೋ ಮಂದಿಗಳ ರುವರು ; ಇವರ ಸಹಾಯವು ದೊಡ್ಡದಾಗಿರುವಾಗ ಶತ್ರುಜಯವು ತಮಗೆ ಅಸಾಧ್ಯವಲ್ಲ ; ಆದರೆ, ನನ್ನ ಮನಸ್ಸಿಗೆ ತೋರಿದ ಒಂದು ಸಂಗತಿಯನ್ನು ಬಿಸಿಕೊಳ್ಳುತ್ತೇನೆ;-ಇದುವರೆಗೂ ನಾವುಗಳು ದೇವತೆಗಳ ಮೇಲೆ ಹಗ ಲಿನಲ್ಲೇ ಯುದ್ಧವನ್ನು ಮಾಡುತ್ತಿದ್ದುದರಿಂದ ಅಪಜಯವನ್ನೇ ಪಡೆಯಬೇ ಕಾಯಿತು ; ನಿಶಾಚರರಾದ ನಮಗೆ ರಾತ್ರಿ ಕಾಲವೇ ಕಾರನಿದ್ದಿಗೆ ಪ್ರಶ ಸ್ಯವಾದುದು ; ಅದುಕಾರಣ, ಈ ರಾತ್ರಿಯೇ ನಾವು ಯುದ್ಧವನ್ನಾರಂಭಿ ಸಬೇಕು. ಈಗ ದೇವತೆಗಳೆಲ್ಲರೂ ಗೆದ್ದೆನೆಂಬ ಅಹಂಕಾರದಿಂದ ಮೈಮು ರೆತು ನಿದ್ರೆಯಲ್ಲಿದ್ದಾರೆ ; ನಮ್ಮ ಸರಶಕ್ತಿಯನ್ನೂ ಉಪಯೋಗಿಸಿ ಕಾ ದಾಡಿದರೆ ಅವರನ್ನು ಈ ದಿನವೇ ನಿಜವಾಗಿಯೂ ಗೆಲ್ಲುವೆವು ; ತಮ್ಮ ಚಿ ತ್ಯಕ್ಕೆ ಸರಿದೋರಿದರೆ ಇದರಂತೆ ಮಾಡಬಹುದು 27 ಎಂದು ಅರಿಕೆ ಮಾಡಿ ದನು. ಕುಂಭ ಶರಭ ಮೊದಲಾದ ದೈತ್ಯನಾಯಕರು ಗಗನಮೂರ್ಧಿಯ ಅಭಿಪ್ರಾಯವೇ ನಮಗೂ ಸಮ್ಮತವೆಂದು ನುಡಿದರು. ಅದಕ್ಕೆ ಪ್ರಹ್ಲಾದನು ನಕ್ಕು- ತಿಳಿದೂ ತಿಳಿದು ಹೀಗೆ ಭ್ರಾಂತರಾಗಬಹುದೆ ? ಪ್ರಭುವೆ ! ಕಂ ಡೂ ಕಾಣದಂತೆ ಆಚರಿಸುವ ಕೋಣನಂತಹ ಈ ಜನಗಳನ್ನು ಬೋಧಿ ಸುವುದಕ್ಕೆ ಶಿವನಿಂದಲೂ ಆಗುವುದಿಲ್ಲ ; ಇದುವರೆಗೆ ನಮ್ಮ ಸೇನೆಯಲ್ಲಿ ಶತಮಾಯ, ಜಂಭ, ನನುಚಿ, ಬಲ ಮೊದಲಾದ ವೀರಾಧಿವೀರ ರಾಕ ಸರೆಷ್ಟೋ ಮಂದಿಗಳು ಹತರಾದರು ; ಉಳಿದ ಸೇನೆಯು ಅಳಿದುದಕ್ಕೆ ಮಿ ತಿಯೇ ಇಲ್ಲ; ದೇವತೆಗಳ ಕಡೆಯಾದರೆ ಪ್ರಮುಖರಾದವರಲ್ಲಿ ಯಾರು ಸತ್ತಿದ್ದಾರೆ ? ಬೆರಲು ಮಡಿಸಿ ಹೇಳು ನೋಡುವ ; ಇದರಿಂದಲೇ ಜಯಾ ಪಜಯಲಕ್ಷ್ಮೀಕಟಾಕ್ಷವು ಎತ್ತೆತ್ತ ಹೇಗಿದೆ ಯೆಂಬುದು ನಿನಗೇ ಗೊ ತಿ
ಪುಟ:ಚೆನ್ನ ಬಸವೇಶವಿಜಯಂ.djvu/೩೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.