೩೦೦ ಚನ್ನ ಬಸವೇಶಓಜಯಂ (Fಂಡ ೪) [ಅಧ್ಯಾಯ ಗರ್ಜನೆಯಿಂದ ದೇವತೆಗಳ ಬಲವೆಲ್ಲ ಗಡಗಡನೆ ಕಂಪಿಸಿತು. ರಥವನ್ನೇರಿ ತನ್ನ ಹತ್ತಿರದ ಸೈನ್ಯವೆಲ್ಲಕ್ಕೂ ಪ್ರಯಾಣಸೂಚನೆಯ ತುತ್ತುರಿಯನ್ನು ಹಿಡಿ ಸಿದನು, ವಾದ್ಯಗಳು ಮೊಳಗಿದುವು. ಮಾರುದೂರದಲ್ಲಿಯೇ ರಕ್ಕಸನ ಚತು ರಂಗಸೈನ್ಯಕ್ಕೂ ದೇವಸೈನ್ಯಕ್ಕೂಮತ್ತೆಯುದ್ದವು ಹತ್ತಿತು. ಒಬ್ಬರಮುಖ ವನ್ನು ಒಬ್ಬರು ಕಾಣದೆ ಇದಿರುಮುಖಕ್ಕೆ ಉಭಯಪಕ್ಷದ ವೀರರೂಎಡೆಬಿ ಡದಂತೆ ಬಾಣಗಳನ್ನು ಬಿಡುತ್ತಿದ್ದರು. ಸತ್ತವರಾರೋ ಉಳಿದವರಾರೋ ಒಬ್ಬರಿಗೂ ಗೊತ್ತಾಗಲಿಲ್ಲ. ಆಯುಧಗಳ ಪ್ರಹಾರದಿಂದ ಹುಟ್ಟಿದ ಬೆಳಕು ಬಿಡುವಿಲ್ಲದೆ ಮಿಂಚಿನಂತೆಹೊಳೆಯುತ್ತಿದ್ದಿತು; ವೀರನಾದವೇ ಮೇಘಗರ್ಜ ನೆಯಂತೆ ಕೇಳಿಸುತ್ತಿದ್ದಿತು; ರಕ್ತದ ಹಾರಾಟವೇ ಬಿರುಮಳೆಯಂತಿದ್ದಿ ತು; ಕವಿದ ಕತ್ತಲೆಯೇ ಕಾರುಗಿಲಿನಂತಿದ್ದಿತು; ಹಾರಾಡುವ ತಲೆಗಳೇ ಆ ಲಿಕಲ್ಲಿನಂತಿದ್ದು ವು ; ಇದರಿಂದ ಮಹಾಪ್ರಳಯ ವೃಕಾಲದಂತೆ ಆ ಸ ಮಯವು ಭೀಕರವಾಗಿ ತೋರುತ್ತಿದ್ದಿತು. ಅಷ್ಟರಲ್ಲಿ ಉಭಯಸೇನೆ ಯವರೂ ಪಂಜಗಳು ಹತ್ತಿ ಬೆಳಕುಮಾಡಿದರು. ಅಂಧಕಾಸುರನಿಗೂ ವೀರೇಶನಿಗೂ, ಗಗನಮೂರ್ಧಿಗೂ ಕುಮಾರಸ್ವಾಮಿಗೂ ಯುದ್ಧವು ನಡೆ ದಿತು ಅಂಧಕನು ವೀರೇಶನನ್ನು ಕುರಿತು_ ನೀನೆಯೊ ವೀರಭದ್ರನೆಂ ಬುವನು ? ಅಂಧಕಾಸುರನ ಬಾಣದ ಬೆಸೆಯು ಹೇಗಿದೆ ಯೆಂಬುದನ್ನು ತಿಳಿದುಕೊಂಡು ಹೋಗಿ ನಿಮ್ಮಪ್ಪನಿಗೆ ತಿಳಿಸು ?” ಎಂದುಹೇಳಿ, ಮಹಾ ತೀಕ ಬಾಣಗಳನ್ನು ಒಂದೇ ಸಮನಾಗಿ ವೀರೇಶನಮೇಲೆ ಸುರಿಸಿದನು. ಕಾಳಪತಿಯು ನಿಮಿಷಮಾತ್ರದಲ್ಲಿ ದನುಜನ ಬಾಣಗಳನ್ನು ಖಂಡಿಸಿ, “ ಎಲೋ ಮದಾಂಧನೆ : ನಮ್ಮಪ್ಪನಬಳಿಗೆ ಹೇಳಿಕೊಳ್ಳುವುದಕ್ಕೆ ನಾನು ಹೊಗುತ್ತೇನೋ ? ಪರಲೋಕದಲ್ಲಿರುವ ನಿಮ್ಮಪ್ಪನಬಳಿಗೆ ನೀನು ಹೋ ಗುತ್ತೀಯೋ ? ಅದು ಉತ್ತರಕ್ಷಣದಲ್ಲೇ ಗೊತ್ತಾಗುತ್ತದೆ; ಈ ನನ್ನ ಬಾಣದ ರುಚಿಯನ್ನು ನೋಡು ?” ಎಂದು ಹೇಳಿ, ೧೨ ಬಾಣಗಳನ್ನು ದೈತ್ಯನಮೇಲೆ ಪ್ರಯೋಗಿಸಿದನು, ಅವುಗಳನ್ನೆಲ್ಲ ಅಂಧಕನು ಮಧ್ಯದಲ್ಲಿ ಖಂಡಿಸಿ, ೨೦೦ ಬಾಣಗಳನ್ನು ಬಿಟ್ಟನು. ಅವನ್ನು ವೀರೇಶನು ಕತ್ತರಿಸಿ, ಪ್ರತಿಬಾಣಗಳನ್ನು ಬಿಟ್ಟನು, ಅವನ್ನು ರಾಕ್ಷಸನು ಕತ್ತರಿಸಿದನು. ಹೀಗೆ ಇಬ್ಬರೂ ಸಮನಾಗಿ ಕಾಡುತ್ತಿರಲು, ವೀರಭದ್ರನು ಅತ್ಯಂತವಾಗಿ ಕೆರ
ಪುಟ:ಚೆನ್ನ ಬಸವೇಶವಿಜಯಂ.djvu/೩೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.