A # * * * {eb ಚನ್ನಬಸವೇಶವಿಜಯಂ (ಕಾಂಡ ೪) ಅಧ್ಯಾಯ ತಿದ್ದ ಈ ದೊರೆಯನ್ನು ಒಬ್ಬ ಬೇಡನು ಕಂಡು, ಮರುಗಿ ಕರೆದುಕೊಂ ಡುಹೋಗಿ, ಉಣಬಡಿಸೆಂದು ಹೆಂಡತಿಗೆ ಹೇಳಲು, ಮುಂಚೆ ಅವನು ತಂದುಕೊಟ್ಟಿದ್ದ ಬಿದಿರಕ್ಕಿಯನ್ನು ಆಕೆಯು ಬೋನವಾಡಿ, ಜೇನನ್ನೂ ಅದನ್ನ ರಾಜನಿಗೆ ಬಡಿಸಿ ತೃಪ್ತಿ ಪಡಿಸಲು, ಸತಿಪತಿಗಳು ಅವನನ್ನು ಮಲ ಚದಮೇಲೆ ಮಲಗಿಸಿ, ತಾವು ಉಪವಾಸವಾಗಿ ಮಂಚದ ಕೆಳಗೆ ಮಲಗಿ ದರು. ರಾತ್ರಿ ಒಂದು ಹುಲಿಯು ಬಂದು ಆ ಗಂಡಹೆಂಡಿರನ್ನು ಕೊಂದು ತಿಂದುಹೋಯಿತು, ಬೆಳಗಾದಮೇಲೆ ದೊರೆಯು ಎದ್ದು ಮಂಚವನ್ನಿಳಿದು, ಸತ್ತು ತುಂಡಾಗಿ ಬಿದ್ದಿರುವ ಗಂಡಹೆಂಡಿರನ್ನು ನೋಡಿ, ಅತ್ಯಂತವಾಗಿ ಶೋ ಕಿಸಿ, ಆ ಶರೀರದ ತುಂಡುಗಳನ್ನೆಲ್ಲ ಒಟ್ಟಿ, ಅಗ್ನಿಯಿಂದ ಸಂಸ್ಕರಿಸಿ ಹೋ ದನು. ಅಷ್ಟರಲ್ಲಿ ಅವನ ಸೇನೆಯೆಲ್ಲ ತಡಕಿಕೊಂಡು ಬರಲು, ರಾಜನು ಅವ ರೊಡನೆ ಕೂಡಿ ಪಟ್ಟಣಕ್ಕೆ ಹೋಗಿ ಸುಖವಾಗಿರುತ್ತ, ಒಂದುದಿನ ತನ್ನ ಪು ರೋಹಿತನನ್ನು ಕರೆದು, ದಾನಗಳೊಳಗೆಲ್ಲ ಉತ್ತಮವಾದುದು ಯಾವುದು? ಎಂದು ಕೇಳಲು, ಅನ್ನದಾನವೇ ಮುಖ್ಯವೆಂದು ಪುರೋಹಿತನು ಹೇಳಿ, ಅದಕ್ಕೊಂದು ಪೂರಚರಿತ್ರವನ್ನು ಹೇಳಿದನು, ಹೇಗೆಂದರೆ- “ ಗಂಗಾ ವತಿಯೆಂಬ ಪಟ್ಟಣದಲ್ಲಿ ಅನಂತಭಟ್ಟನೆಂಬ ಒಬ್ಬ ಬ್ರಾಹ್ಮಣನಿದ್ದನು. ಅವನು ಪ್ರತಿದಿನವೂ ಊಟವಾಡುವಾಗ ಹೊರಗೆ ಬಂದು, ಯಾರಾದರೂ ಅನ್ನಾರ್ಥಿಗಳಾದ ಬ್ರಾಹ್ಮಣರಿದ್ದಾರೆಯೇ ಎಂದು ನೋಡಿ, ಇದ್ದರೆ ಅವ ರನ್ನು ಕರೆದು ಪಬ್ರಿಯಲ್ಲಿ ಕುಳ್ಳಿರಿಸಿಕೊಂಡು ಭೋಜನ ಮಾಡುತ್ತಿದ್ದನು. ಒಂದುದಿನ ಪದ್ಧತಿಯಂತೆ ಹೊರಗೆ ಬಂದು ನೋಡುವಲ್ಲಿ, ಮಳೆಯಿಂದ ನೆನದು ಕಟಕಟನೆ ನಡುಗುತ್ತ ತನ್ನ ಜಗತಿಯಮೇಲೆ ನಿಂತಿರುವ ಒಬ್ಬನ ನ್ನು ಕಂಡು, ನೀನಾರೆಂದು ಕೇಳಿದನು. ಉತ್ತರವು ಬರದಿರಲು, ಮ ತೊಂದುವೇಳೆ ಕೇಳಿದನು. ಅದಕ್ಯಾಮನುಷ್ಯನು ತಾನು ಚಂಡಾಲ ನೆಂತಲೂ, ಕಟ್ಟಿಗೆಯನ್ನು ಮಾರುವುದಕ್ಕಾಗಿ ಬಂದು, ಅದು ಮಾರದಿರಲು ಮಳೆಯಿಂದ ನನದು ಇಲ್ಲಿ ಹೊರೆಯನ್ನು ಒರಗಿಸಿ ಅನ್ನವಿಲ್ಲದೆ ಸಂಕಟ ಗೊಂಡು ನಿಂತಿರುವೆನೆಂತಲೂ, ತನ್ನ ಮನೆಯು ದೂರದಲ್ಲಿರುವುದರಿಂದ ಹೋಗಲಾರೆನೆಂತಲೂ, ಸಲ್ಪ ಚೇತರಿಸಿಕೊಂಡು ಹೋಗುವವರೆಗೂ ಅ ಟ್ಟಬೇಡಿರೆಂತಲೂ ವಿನಯದಿಂದ ಬೇಡಿಕೊಂಡನು, ಆಗ ಬ್ರಾಹ್ಮಣನು.
ಪುಟ:ಚೆನ್ನ ಬಸವೇಶವಿಜಯಂ.djvu/೩೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.