ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿನ್ನಸವೇಕವಿಜಯಂ (wwಡ ೪) ಅಧ್ಯಾಯ ಗೊಂಡು, ಬಂದು, ಅವನು ಪೂಜಿಸುತ್ತಿದ್ದ ಲಿಂಗವನ್ನು ಝಾಡಿಸಿ ಕಾಲಿ ನಿಂದೊದೆದನು. ಮಗನಾದರೂ ಬಲುನಿಟ್ಟುಗೊಂಡು, ಪರವಶನಾಗಿ “ ಈ ಶಿವದ್ರೋಹಿ! ಸಾಯಿ! ಸಾಯಿ?” ಎಂದು ಹೇಳುತ್ತ, ಕೈಯಲ್ಲಿದ್ದ ಕೊಡ ಲಿಯಿಂದ ಒಂದೇ ಪೆಟ್ಟಿಗೆ ತಂದೆಯ ತಲೆಯನ್ನು ಕಡಿದುರುಳಿಸಿದನು. ಆಗ ಸುಗನ ನಿಜಭಕ್ತಿಗೆ ಶಂಕರನು ಮೆಚ್ಚಿ, ಪರತೀ ಸಮೇತನಾಗಿ ಆ ಲಿಂ ಗದಿಂದಲೇ ಉದ್ಭವಿಸಿ ನಿಂತನು. ಸಕಲ ಪ್ರಮಥರೂ ಜತೆಯಲ್ಲೇ ನಿಂತಿ ದ್ದರು, ಅಂತರಿಕ್ಷದಿಂದ ಭೂಮಳೆಯು ಕರೆದು ದೇವದುಂದುಭಿಯು ಮೊಳ ಗಿತು, ಆ ಸಮೂಹವನ್ನು ಬಾಲಕನು ನೋಡಿ, ಸಂತೋಷದಿಂದ ಕಣ್ಣೀ ಝುಂಬಿ, ಅಡ್ಡ ಬಿದ್ದು ಕೈಕಟ್ಟಿ ನಿಂತನು. ಶಿವನು ತನ್ನ ಅಮೃತಹಸ್ತವ ನ್ನು ಚಂಡನ ತಲೆಯಮೇಲಿಟ್ಟು, ತನ್ನ ತಾಂಬೂಲಪ್ರಸಾದವನ್ನು ತೆಗೆದು ಅವನಿಗೆ ಕೊಟ್ಟನು. ಅದನ್ನು ಸೇವಿಸಿದ ಕಾರಣದಿಂದ ಚಂಡನು ಮಹಾ ತೇಜೋಮೂರಿಯಾಗಿ ನಿಂತನು. ಹರಿಬ್ರಹ್ಮಾದಿಗಳೆಲ್ಲರೂ ಆತನ ಸಕ್ಷ ತವಿಶೇಷವನ್ನು ಕುರಿತು ಕೊಂಡಾಡಿದರು. ಆ ಶಿವಪ್ರಸಾದಶಕ್ತಿಯಿಂದ ಚಂಡೇಶನ ರೋಮಕೂಪಗಳಲ್ಲಿ ಕೆಲವು ಗಣಾಧೀಶರು ಉದಿಸಿದರು. ಅವರು ಗದ್ಯಪದ್ಘಾತ್ಮ ಕಸ್ತೋತ್ರಗಳಿಂದ ಶಿವನನ್ನು ಕೊಂಡಾಡಿದರು. ಅದಕ್ಕೆ ಮೆಚ್ಚಿದ ಪರಮೇಶನು ಅವರನ್ನು ತನ್ನ ಸ್ತುತಿಪಾಠಕರನ್ನಾಗಿ ಮಾ ಡಿಟ್ಟು ಕೊಂಡನು, ಚಂಡೇಶನನ್ನು ಕುರಿತು ನಿನ್ನಿಷ್ಟಾರ್ಥವೇನೆಂದು ಕೇ। ಳಲು- “ ಸಕಲ ದೇವಾಲಯಗಳಲ್ಲಿರುವ ಲಿಂಗಗಳನ್ನೂ ಆರಾಧಿಸುವ ಮತ್ತೂ ಆ ಲಿಂಗಪ್ರಸಾದವನ್ನು ಪಡೆಯುವ-ಸುವ್ಯವನ್ನು ನನಗೂ ನನ್ನ ಕುಲದವರಿಗೂ ದಯಪಾಲಿಸಬೇಕು; ನಿನ್ನನ್ನು ಪೂಜಿಸುವನಿನ್ನ ಪ್ರಸಾದವನ್ನು ಸೇವಿಸುವ-ಸುಖಕ್ಕಿಂತಲೂ ದೊಡ್ಡ ಸಂಖ್ಯವು ಬೇರೊಂ ದಿಲ್ಲ ” ವೆಂದು ಚಂಡೇಶನು ಕೇಳಿಕೊಂಡನು. ಅದರಂತೆಯೇ ಆಗಲಿ ಎಂದು ಶಿವನು ವರವಿತ್ತು ಅಂತರ್ಹಿತನಾದನು. ಎಂದು ಚೆನ್ನಬಸವೇಶ .ನು ನುಡಿದನೆಂಬಿಲ್ಲಿಗೆ ಹನ್ನೆರಡನೆ ಅಧ್ಯಾಯವು ಸಂಪೂರ್ಣವು. --