44೪ ಚೆನ್ನಬಸವೇಶವಿಜಯಂ (ಕಾಂಡ ೪) [ಅಧ್ಯಾಯ ಕೆದರಿತು. ಮೈ ಮಣ್ಣಾಯಿತು. ಇವರೀರರ ಮಹಾಯುದ್ಧವನ್ನು ನೋ ದಿ ದೇವತೆಗಳೂ ಪ್ರಮಥರೂ ಪರಮಾಶ್ಚರಗೊಂಡರು, ಆಗ ಅರ್ಜುನನು ಕಡುಬೇಸತ್ತು, ಕೋಪವು ಮಿತಿಮೀಾರಿ, ಎಲೋ ಬೇಡನೆ ! ಇದೇ ನಿನ ಗೆ ಕೊನೆಯೇಟು, ನನ್ನ ಬಾಣಗಳನ್ನೆಲ್ಲ ನುಂಗಿದ ನಿನ್ನ ರೋಗಕ್ಕೆ ಇದೇ ಮದ್ದು, ನನ್ನ ದಿವ್ಯಾಸ್ತ್ರವನ್ನು ಖಂಡಿಸಿದ ಕೌರಕ್ಕೆ ಇದೇ ಮೃತ್ಯು ನಿನ್ನ ಅಹಂಕಾರವಚನಗಿರಿಗೆ ಇದೇ ವಗ್ರ, ಎಂದು ಹೇಳುತ್ತ, ಬಲವಾ ಗಿ ಮುಷ್ಟಿಯಿಂದ ಶಿವನ ಎದೆಗೆ ತಿವಿದು, ಆರ್ಭಟಿಸಿದನು, ಶಿವನು ಲೀಲೆ ಯಿಂದ ಒಂದೇಟನ್ನ ಸ್ಪಳಿಸಲು, ಎದೆ ಮೇಲಾಗಿ ಭೂಮಿಯಮೇಲೆ ಅ ರ್“ನನು ಬಿದ್ದನು. ಅಂಗುಷ್ಠದಿಂದ ತುಳಿದ ವಗ್ರದಿಂದಲೇ ರಕ್ತವನ್ನು ಕಾರಿ ಕಣ್ಣು ಗುಡ್ಡೆಯನ್ನು ತೇಲಿಸಿ ಮೂರ್ಛಾಗತನಾದನು, ಕರುಣಾಕರ ನಾದ ಶಿವನು ತನ್ನ ಭಕ್ತನಿಗುಂಟಾದ ಆ ಅವಸ್ಥೆಯನ್ನು ನೋಡಿ, ಅ ಯೋ ! ಹೊಡೆದೆನಲ್ಲ ! ಎಂದು ಮರುಗಿದನು. "ಅಪ್ಪರಲ್ಲಿ ಧನಂಜಯ ನಿಗೆ ಎಚ್ಚರುಂಟಾಯಿತು. ಆದರೇನು ? ಶಕ್ತಿಯು ತಗ್ಗಿತು; ಉತ್ಸಾಹವು ಕುಗ್ಗಿತು. ಶೌಗ್ಗರಸವು ಬತ್ತಿತು, ಮುಖವು ಬೆವರೇರಿತು: ಚಿಂತೆಯು ಹೆಚ್ಚಿತು; ಬೇಡನಿಗೆ ತಾನು ಸೋತುಹೋಗಬೇಕಾಯ್ತಲ್ಲ ! ಎಂಬ ಕೊರೆತವು ಹುಟ್ಟಿತು; ಅಯ್ಯೋ ! ನಾನು ಯಾವ ಜನ್ಮದಲ್ಲಿ ಏನು ಪಾಪ ವನ್ನು ಮಾಡಿದ್ದೆನೊ ! ಶಿವನಿಂದೆ ಶಿವಭಕ್ಕದೋಹಗಳನ್ನು ಮಾಡಿದ್ದೆ ನೋ ! ಶಿವವ್ರತವನ್ನು ಕೆಡಿಸಿದ್ದೆನೋ ! ಶಿವಮತವನ್ನು ರೂಪಿಸಿದ್ದೆ ನೋ ! ಶಿವಭಕ್ತರಿಗೆ ತೇಜೋವಧೆಯನ್ನು ಮಾಡಿದ್ದೆನೋ ! ಕಾಣಿನ ಲ್ಲ ! ಅಂತಹ ಯಾವ ಪಾಪವನ್ನೇ ಮಾಡಿದ್ದು ದರಿಂದಲೇ ಈ ಸಾಮಾನ್ಯ ಮನುಷ್ಯನಿಂದ ನಾನು ಪರಾಭವಗೊಳ್ಳಬೇಕಾಯಿತು; ಎಲ್ಲಿಯ ಅರ್ಜನ! ಎಲ್ಲಿಯು ಬೇಡ ! ಇದೇನು ಜಗದಾಶ್ಚರ ! ಇದುವರೆಗೂ ಜಗತ್ತಿನಲ್ಲೆಲ್ಲ. ಹರಡಿಕೊಂಡಿದ್ದ ನನ್ನ ಪರಾಕ್ರಮದ ಕಿರಿಯು ಈಗ ಹಾಸ್ಯಾಸ್ಪದವಾ ಗುವಂತಾಯ್ತಲ್ಲ ! ಅಯ್ಯೋ ! ಇದೆಲ್ಲಿಯ ಹಂದಿ : ನಾನೇಕೆ ನೋಡಿ ಗೆ ! ಬಾಣವನ್ನೇಕೆ ಬಿಟ್ಟೆ ! ಈ ಶಬರನೆಲ್ಲಿಬಂದ ! ನಾನು ಬಂದ ಕಾ ಈವೇನು ! ಆದ ಪರಿಣಾಮವೇನು ! ನಾನು ಸ್ಪಷ್ಟವನ್ನೇನಾದರೂ ಕಾ ಇುತ್ತಿರುವೆನೋ ? ನಾನೇ ಬೇಡನೊ ? ಈತನೇ ಅರ್ಜನನೊ? ಇದೇನು
ಪುಟ:ಚೆನ್ನ ಬಸವೇಶವಿಜಯಂ.djvu/೩೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.