ಚನ್ನAಸವೇಶವಿಜಯಲ್ಲಿ. [ಅಧ್ಯಾಯ ಪ್ರಣವವನ್ನೇ ಜನಿಸಬೇಕೆಂದು ಹೇಳಿ ನನ್ನ ಗರ್ಭಕ್ಕೆ ಕಳುಹಿರುವನು, ಎಂದಳು. ದೊರೆಯು ಶಿವನ ವರದಿಂದ ನಿನ್ನ ಗರ್ಭದಲ್ಲಿ ಜ್ಞಾನಪುತ್ರನು ಉದಿಸಿದ್ದರೆ ಒಳ್ಳೆಯದೇ ಸರಿ. ಆ ಮಾತು ನಿಜವಾಗಿದ್ದರೆ ಮಹಿಮಾನ್ವಿತ ನಾದ ಆ ಪುತ್ರನು ತನ್ನ ಸಂಗತಿಯನ್ನು ನನ್ನೊಡನೆ ಹೇಳಲಿ; ಎಂದನು. ಆ ಕೂ ಕೈಲೇ ಗರ್ಭದಿಂದ ಓಹೋ ಸದ್ದನ್ನು ನಿಲ್ಲಿಸಿ, ಎಲೆ ಬಿಜ್ಜಳರಾ ಜನೇ! ಆಕಾಶವು ಭೂಮಿಗಿಳಿದರೂ, ಭೂಮಿಯು ಪಾತಾಳಕ್ಕೆ ಹೋದ ರೂ, ಶಿವಶರಣರ ಮಾತು ಸುಳ್ಳಾಗುವುದೇ? ಶಿವನ ಸುಖಸ್ಥಿತಚಿತ್ಯ ಳೆಯೇ ನಾನಾಗಿರುವೆನಲ್ಲದೆ ರಕ್ರೇತಸ್ಸುಗಳಿಂದ ಹುಟ್ಟಿದ ವಿಂಡವಲ್ಲ ?” ಎಂಬ ಮಾತು ಗಂಭೀರಸ್ಸರದಿಂದ ಹೊರಟಿತು, ಇದನ್ನು ದೊರೆಯು ಕೇಳಿ ಬೆರಗಾದನು. ಬಸವೇಶ ಮೊದಲಾದ ಶಿವಗಣಂಗಳೆಲ್ಲ ಉಲ್ಲಾಸ ಗೊಂಡರು. ಆಗ ರಾಜನು-ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡ ಬೇಕೆಂದು ನೀತಿವಚನವಿರುವುದು ಆದುದರಿಂದ ಅನಿತ್ಯವಾದ ಈ ಶರೀರ ದಲ್ಲಿ ಮಲಮೂತ್ರ ರಕ್ತಮಾಂಸಗಳೊಡನೆ ನಿತ್ಯವಾದ ಶಿವಚಿತ್ತಳೆಯಿರು ವುದು ಹೇಗೆ? ಇದು ಸತ್ಯವೆ? ಎಂದನು. ನಾಗಲಾಂಬಿಕೆಯು ಮೂಢ ರನೆಡಬಡಿಸುವಂತಾಯ್ದೆಂದು ಯೋಚಿಸಿಕೊಂಡು, ಅಹುದು, ನನ್ನ ಶರೀರದಲ್ಲಿ ಆ ಜ್ಞಾನಪುತ್ರನು ಮಲಮೂತ್ರಾದಿಗಳ ಸಂಗವಿಲ್ಲದೆಯೇ ಇದ್ದಾನೆ ಎಂದಳು. ದೊರೆಯಾದರೋಬರಿಯ ಮಾತನ್ನು ನಂಬುವುದು ಹೇಗೆ? ಪ್ರತ್ಯಕ್ಷವಾದರೆ ನಿಜವೆಂದು ಹೇಳಬಹುದು, ಎಂದನು. ಆಗ ನಾಗಲಾಂಬಿಕೆಯು ಶಿವಶರಣರಿಗೆ ಇಂತಹ ದೃಷ್ಟಾಂತವನ್ನು ತೋರಿಸುವು ದೊಂದು ದೊಡ್ಡದೆ? ಎಂದು ಹೇಳಿ, ನಗುತ್ತ, ತನ್ನ ಉಗುರ ಕೊನೆಯಿಂದ ಹೊಟ್ಟೆಯನ್ನು ನೀಳಿದಳು ಆ ಕೂಡಲೆ: ಹೊಟ್ಟೆಯು ಇಬ್ಬಾಗವಾಯಿ ತು ಒಳಗೆ ಕೊಟಬಾಲಸೂರ ತೆ: ಹಸ್ಸಿನಿಂದ ಹೊಳೆಯುತ್ತಲೂ, ಭಸ್ಮ ಲೇಪನದಿಂದ ಶುಕ್ರಾಗನಾ.ಯ, ಕಗ್ಗಕುಂಡಲಯುಗ ದಿಂದ ಅಲಂಕೃತನಾಗಿಯ, ಸಣ್ಣ ಕಿರುಜಡೆಗಳು ಮಸ್ತಕದ ಮೇಲಿಂದ ಇ೪ ದು ಜೋಲುತ್ತಲೂ, ಎದೆಯಮೇಲೆ ಕಲ್ಪವೃಕ್ಷದ ಹೂವಿನ ಸರಗಳ ಮಧ್ಯದಲ್ಲಿ ಶಿವಲಿಂಗದ ಸಜ್ಜಿಕೆಯನ್ನು ಧರಿಸಿಯೂ ಇರುವ ದಿವ್ಯಮೂಲ್ಕಿ ಯು ತೋರಿತು. ನೋಡಿದ ಸಭೆಯವರೆಲ್ಲರ ೧ ಆಕ್ಷ" ಸಮುದ್ರದಲ್ಲಿ
ಪುಟ:ಚೆನ್ನ ಬಸವೇಶವಿಜಯಂ.djvu/೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.