ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܪܩ ಶಿವಶರಣರ ಕಥೆಗಳು | ೩ಳ ನಿದನು, ಅದನ್ನು ಈತನು ಕೇಳಿ ಶಾಪವನ್ನು ಕೊಡಲಾಗಿ, ಸದ್ಭನ ಬ ೪ಗೆ ಹೋಗುತ್ತಿದ್ದ ಬಟ್ಟಲುಗಳು ಎಂದಿನಂತೆ ಹೋಗದೆ ನಿಂತುಬಿಟ್ಟವು. ಆಗ ಸೂರನು ತಡೆಯಾಗಿರುವುದರ ಕಾರಣವನ್ನು ತಿಳಿದು, ಪ್ರಭಾಕರ ಚೋಳನ ಬಳಿಗೆ ತಾನೇ ಇಳಿದು ಬಂದು, “ ಅಯ್ಯಾ ! ನೀನು ಶಿವಭ ಕರೊಡನೆ ವಿರೋಧವನ್ನು ಕಟ್ಟಿಕೊಳ್ಳಬಹುದೆ? ಅದರಿಂದಲೇ ಈ ಆಹಾ ರದ ಬಟ್ಟಲುಗಳು ನನ್ನ ಬಳಿಗೆ ಬರದಂತಾದುವು; ಈಗಳೇ ನೀನು ಕರಿ ಕಾಲಚೋಳನ ಬಳಿಗೆ ಹೋಗಿ, ಕಟ್ಟೆಯ ಕೆಲಸವನ್ನು ಮುಗಿಸಿ ಬಾ ?” ಎಂದು ಹೇಳಿ ಕಳುಹಿಕೊಟ್ಟನು, ಅದೇ ಕಣ್ಣಿಗೆ ಮಣ್ಣನ್ನು ಏರು ಹಾಕು ವುದಕ್ಕಾಗಿ ಆ ವೂರಿನ ಪಿಟ್ಟ ವೈ ಯೆಂಬುವಳ ಮನೆಯಲ್ಲಿ ಗಂಡುದಿಕ್ಕಿಲ್ಲದಿ ರಲು, ಶಿವನು ಅವಳ ಮನೆಗೆ ಹೋಗಿ, ಆಕೆಯಿಂದ ಕೂಲಿಗಾಗಿ ಆಹಾರ ವನ್ನು ಪಡೆದು, ಮಣ್ಣನ್ನು ಹೊತ್ತು, ಅವಳನ್ನು ಕೈಲಾಸಕ್ಕೆ ಕರೆದು ಕೊಂಡು ಹೋದನು. ಆ ಸಂದರ್ಭದಲ್ಲಿ ಶಿವನು ಕೂಲಿಗಾರರಿಗೆ ಸರಿಯಾ ಗಿ ಕೆಲಸ ಮಾಡದೆ ಯಿರಲು, ರಾಜನ ಕಡೆಯ ಭಟರು ಬಂದು ಹೊಡೆ ಯಲಾಗಿ, ಆ ಪೆಟ್ಟುಗಳೆಲ್ಲವೂ ರಾಜನ ಪರಿವಾರದವರಿಗೆ ತಗುಲುತ್ತಿರಲು, ಆಗ ಈತನೇ ಶಿವನಂದು ತಿಳಿದು, ಗೆರೆಯು ಶಂಕರನನ್ನು ಸ್ತೋತ್ರ ಮಾಡಿ ಮೆಚ್ಚಿಸಿ, ತನ್ನ ರಾಜ್ಯದಲ್ಲಿ ಹೊನ್ನಿನ ಮಳೆಯು ಸುರಿವಂತೆ ಮಾ ಡಬೇಕೆಂತಲೂ, ತನ್ನ ಮನೆಯಲ್ಲಾದ ನೈವೇದ್ಯ ಪದಾರ್ಥಗಳನ್ನು ಪ್ರತಿದಿ ನವೂ ನೀನು ಸತಿಸಬೇಕೆಂತಲೂ ಪ್ರಾರ್ಥಿಸಲು, ಅದರಂತೆಯೇ ಆಗಲಿ ಯೆಂದು ಶಿವನು ವರವಿತ್ತನು, ಕರಿಕಾಲಚೋಳನು ಕಳುಹಿಕೊಟ್ಟ ಪತ್ರ ಸಾನ್ನವನ್ನು ಪರಿಗ್ರಹಿಸಿ ಶಂಕರನು ತೆರೆಯ ಮರೆಯಲ್ಲಿ ಸವಿಯುತ್ತಿದ್ದನು. ಒಂದಾನೊಂದು ದಿನ ಆಹಾರವನ್ನು ಸಲಿಸದೆ ಶಿವನು ಸುಮ್ಮನಿರಲು, ದೊ ರೆಯು ಆ ಸಂಗತಿಯನ್ನು ತಿಳಿದು, ದೇವಾಲಯಕ್ಕೆ ಬಂದು, ಕತ್ತಿಯನ್ನು ಹಿರಿದು ನಿಂತು, ಅದೇಕೆ ಸವಿಯುವುದಿಲ್ಲವೆಂದು ಶಿವನನ್ನು ಕೇಳಲು, ನಾ ನು ಈದಿನ ಮಾದರಚೆನ್ನಯ್ಯರೊಡನೆ ಭುಂಜಿಸಿ ಬಂದೆನಾದಕಾರಣ ಹೊ ವೈಯು ತುಂಬಿ, ಇಲ್ಲಿನ ಉಪಹಾರಗಳನ್ನು ಸವಿಯುವುದಕ್ಕಾಗಲಿಲ್ಲವೆಂ ದು ಶಂಕರನು ನುಡಿದನು, ನಿಮ್ಮೊಡನೆ ಊಟಮಾಡಿದ ಚೆನ್ನಯ್ಯನೆಂಬ ಆ ಮಹಾತ್ಮನಾರು ? ತೋರಿಸಬೇಕೆಂದು ಕೇಳಲು, ಸಂಶಿವನು ಆತನನ್ನು