4೪, ಚನ್ನಬಸವೇಶವಿಜಯಂ(ಕಾಂಡ ೫) [ಅಧ್ಯಾಯ ಕರವೂರೆಂಬ ಪಟ್ಟಣದಲ್ಲಿ ಧರ ಚೋಳನೆಂಬ ರಾಜನಿದ್ದನು. ಅವ ನಿಗೆ ಭೀಮಶೋಳನೆಂಬ ಮಗನಿದ್ದನು. ಅವನು ಒಂದುದಿನ ರಥವನ್ನೇರಿ ಹೋಗುತ್ತಿರಲು, ಅದರ ಚಕ್ರಕ್ಕೆ ಒಂದು ಎಳೆಗರುವು ಸಿಕ್ಕಿ ಸತ್ತಿತು. ಅದನ್ನು ದೊರೆಯು ಕೇಳಿ, ಮಗನನ್ನು ಕರತರಿಸಿ, ಅವನಪರಾಧಕ್ಕಾಗಿ ಅವನ ಕತ್ತನ್ನೇ ಛೇದಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನಿನ್ನ ಇಪ್ಸ್ ವೇನೆಂದು ಕೇಳಲು, ಸತ್ತ ಕರುವಿಗೆ ಪ್ರಾಣದಾನಮಾಡೆಂದು ಪ್ರಾರ್ಥಿಸ ಲು, ಹರನು ಆತನ ಮನೋಭಾವಕ್ಕೆ ಸಂತೋಪಿಸಿ, ರಾಜಪುತ್ರನಿಗೂ ಕ ರುವಿಗೂ ಪ್ರಾಣದಾನಮಾಡಿ, ಎಲ್ಲರನ್ನೂ ಕೈಲಾಸಕ್ಕೆ ಕರೆದೊಯ್ದ ನು. ಉತ್ತುಂಗಳನೆಂಬ ರಾಜನು ಶಿವನ ವರದಿಂದ ಐವಡಿಚೋಳ ನೆಂಬ ಮಗನನ್ನು ಪಡೆದಿದ್ದನು. ಅವನು ಒಂದುದಿನ ಬೀದಿಯಲ್ಲಿ ಆಡುತ್ತಿ ರುವಾಗ ಮದವೇರಿದ ಆನೆಯು ಓಡಿಬರುತ್ತಿರಲು, ಅದನ್ನು ತನ್ನ ಅಂಗು ವ್ಯದಿಂದ ಮೆಟ್ಟಿ ಕೊಂದು ಉರುಳಿಸಲು, ಈತನಶೂದ್ಯವನ್ನು ಉಳಿದರಾಜ ರೆಲ್ಲರೂ ಕೇಳ ಭಯಪಟ್ಟು ಪಲಾಯನಗೊಂಡರು. ಇದನ್ನು ಚೋಳನು ಕೇಳಿ, ನಾನು ಅವರನ್ನೋಡಿಸಿ ಮಹಾಪರಾಧಮಾಡಿದೆನೆಂದು ಬಗೆದು, ತತ್ಪರಿಹಾರಕ್ಕಾಗಿ ಒಂದುಕೊಟ ಶಿವಲಿಂಗಗಳನ್ನು ಪ್ರತಿನಿ ಕೈಲಾ ಸವನ್ನು ಪಡೆದನು. ರಾಜೇಂದ್ರಚೋಳನೆಂಬ ರಾಜನು ಕೊಳದೇ ಶದ ಪಾಂಡ್ಯದೇಶದ ಇತರ ರಾಜರನ್ನೆಲ್ಲ ಕೂಡಿಕೊಂಡು ಪ್ರತಿದಿನವೂ ದೇವೇಂದ್ರನ ಸಭೆಗೆ ಹೋಗಿಬರುತ್ತಿರಲು, ಒಂದುದಿನ ಸಭೆಯಿಂದ ಬರುವಾಗ ಬಾಗಿಲಲ್ಲಿ ಬಿ ಟಿದ್ದ ಹಾವುಗೆಗಳಮೇಲೆ ತನ್ನ ಕುದುರೆಯನ್ನು ದಾಟಿಕೊಂಡು ಬಂದ ನು, ಇವನ ಅಹಂಕಾರವನ್ನು ದೇವೇಂದ್ರನು ಕಂಡು, ಅವನ ರಾಜ್ಯದಲ್ಲಿ ಮಳೆಯನ್ನೇ ಹುಯ್ಯದಂತೆ ನಕ್ಷತ್ರಗಳಿಗೆ ಕಟ್ಟುಮಾಡಿದನು. ತನ್ನ ದೇಶ ದಲ್ಲಿ ಅನಾವೃಷ್ಟಿಯುಂಟಾದುದನ್ನು ರಾಜೇಂದ್ರನು ಕಂಡು, ಅಮರಾವ ತಿಗೆ ಹೋಗಿ ಎಲ್ಲಾ ನಕ್ಷತ್ರಗಳನ್ನೂ ಇಂದ್ರನನ್ನೂ ಹಿಡಿತಂದು ಸೆರೆಯಲ್ಲಿ ಟ್ಟನು. ಇಂದ್ರನ ದಂಡು ದೊರೆಯ ಮೇಲೆ ಮುತ್ತಿತು. ಆಗ ಚೊಕ್ಕನ ಯಾರೆಂಬ ಶರಣನು ತನ್ನ ಕ್ರಿಯಾಸಿದ್ದಿ ಯಿಂದ ನರಿಯ ಹಿಂಡನ್ನು ಕುದು ರೆಗಳನ್ನು ಮಾಡಿಕೊಡಲು, ಅವುಗಳ ಸಹಾಯದಿಂದ ರಾಜೇಂದ್ರಚೋ
ಪುಟ:ಚೆನ್ನ ಬಸವೇಶವಿಜಯಂ.djvu/೩೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.