ಸಾನಂದಗಣೇಶನ ಚರಿತ್ರವು &th ಕಲ್ಲುಮುಳ್ಳುಗಳನ್ನೆಳೆದವನು, ಇವನು ಸೂಳೆಯೊ ಡನುಂಡವನು, ಇವನು ಸಾಲುಮರಗಳನ್ನು ತರಿದವನು, ಇವನು ಕಳ್ಳನು, ಇವನು ಯುದ್ಧದಲ್ಲಿ ಹಿ ಮೈಬ್ಬೋಡಿದವನು, ಇವನು ವಿಷಯಲಂಪಟನು, ಇವನು ಭಕ್ತಿಹೀನನ್ನು, ಇವನು ತನ್ನ ಕುಟುಂಬವನ್ನು ಸಾಕಲಾರದೆ ಬಿಟ್ಟೋಡಿದವನು, ಇವನು ಮೃಗ ಪಕ್ಷಿ ಜಲಚರಾದಿಗಳನ್ನು ಕೊಂದವನು, ಇವನು ಸಾಲವನ್ನು ತೀ ರಿಸದಿದ್ದವನು, ಇವನು ಬೆಟ್ಟಕ್ಕೆ ಬೇಗೆಯನ್ನಿಕ್ಕಿದವನು, ಇವನು ಜಗಳವ ನ್ನು ತಂದಿಕ್ಕಿ ನೋಟನೋಡುತ್ತಿದ್ದವನು, ಇವನು ದಾರಿಕಾಯ್ದು ತಲೆಯೊ ಡೆದವನು, ಇವನು ಕೊಟ್ಟ ದಾನವನ್ನು ನೆನೆದು ವ್ಯಥೆಪಟ್ಟವನು, ಇವನು ಮಾಡಿದ ದಾನವನ್ನು ಹೊಗಳಿಕೊಂಡವನು, ಇವಳು ಗಂಡನು ಮಾಡುತ್ತಿ ದ್ದ ದಾನಕ್ಕೆ ಅಡ್ಡಿ ಮಾಡಿದವಳು, ಇವಳು ಭಿಕ್ಷೆಗೆ ಬಂದವರನ್ನು ಗಜರಿ ಅ ಟ್ಟಿದವಳು, ಇವಳು ಮಾವ ಅತ್ತೆಯರನ್ನು ನೊಣೆದು ಗೋಳಾಡಿಸುತ್ತಿದ್ದ ವಳು, ಇವಳು ಪತ್ತಿಭೇದವನ್ನು ಮಾಡಿದವಳು, ಇವಳು ಹಾದರಕ್ಕೆ ಹೇ ಸದವಳು, ಇವಳು ಅನಾಚಾರಕ್ಕೆ ತವರಾದವಳು, ಇವಳು ಭಕ್ತಿಯ ಗುರು ತನ್ನು ಕಾಣದವಳು, ಇವಳು ಎಂದೂ ಶಿವಕಥಾಶ್ರವಣವನ್ನು ಮಾಡದವ ಳು, ಇವಳು ಗಂಡನನ್ನು ಹೀಯಾಳಿಸುತ್ತಿದ್ದವಳು, ಇವಳು ಪರರ ಮ ಕಳನ್ನು ವಿಷವಿಕ್ಕಿ ಕೊಂದವಳು, ಇವಳು ಅತ್ತಿಗೆ ನಾದಿನಿಯರೊಡನೆ ಕಾ ಯುತ್ತಿದ್ದವಳು, ಇವಳು ಗಂಡನ ತಲೆಯಮೇಲೆ ಕಲ್ಲನ್ನು ಹಾಕಿ ಕೊಂ ದು ಮಿಂಡನನ್ನು ಕೂಡಿದವಳು, ಎಂದು ಮೊದಲಾಗಿ ಅವರವರ ಕೃತ್ಯವನ್ನು ವಿವರಿಸಿ ನುಡಿಯುವರು, ಇದೆಲ್ಲವನ್ನೂ ಯಮಧರ್ಮನು ಕೇಳಿ, ಕೋಪ ವೇರಿ ಗರ್ಜಿಸಿ, ಈ ಪಾಪಿಗಳನ್ನೆಲ್ಲ ಮುಂದಲೆಹಿಡಿದು ಎಳೆದೊಯ್ದು, ಮ ಹಾನರಕಗಳಲ್ಲಿ ಕಡ , ಕಾಲುಗಳನ್ನು ಕಡಿದು, ಕೈಗಳನ್ನು ಕತ್ತರಿಸಿ, ನಾಲಿಗೆಗಳನ್ನು ನೀ೪, ಕಣ್ಣುಗಳನ್ನು ಕಿತ್ತು, ಮೂಗುಗಳನ್ನು ಕೊಯ್ದು, ಹೊಟ್ಟೆಗಳನ್ನು ಬಗಿದು, ಚರಗಳನ್ನು ಸುಲಿದು, ಮೂಳೆಗಳನ್ನು ಮುರಿ ದು, ಶೂಲಕ್ಕೇರಿಸಿ, ಕೆಂಚದಮೇಲೆ ಉರುಳಿಸಿ, ಚಾಟಗಳಿಂದ ಹೊಡೆದು, ದೊಣ್ಣೆಗಳಿಂದ ಬಡಿದು, ಗರಗಸದಿಂದ ಕೊಯ್ದು, ಕಾದಕಂಬವನ್ನು ತ ದೈನಿ, ಇಕ್ಕಳದಿಂದ ಕಚ್ಚಿಸಿ, ಸಲಾಕಿಗಳಿಂದ ಚುಚ್ಚಿಸಿ, ಪರಿಪರಿಯಾಗಿ ಶಿಕ್ಷೀಸಿರಿ ಹೋಗಿ, ಎಂದು ಅಪ್ಪಣೆ ಮಾಡಿ ಕಳುಹುವನು, ದೂತರಾದ 46
ಪುಟ:ಚೆನ್ನ ಬಸವೇಶವಿಜಯಂ.djvu/೩೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.