44 ಸಾನಂದಗಣೇಶನ ಚರಿತ್ರವು ಮದೊಡನೆ ಒಳನುಗ್ಗಿ ದನು. ಯಮರಾಜನು ಋಮ್ಮೇಶ್ವರನನ್ನು ಕಂಡು, ಕಾಣೆಯನ್ನು ಮುಂದಿಟ್ಟು, ದೀರ್ಘವಾಗಿ ನಮಸ್ಕರಿಸಲು, ಮುನೀಶನು ಕರುಣದಿಂದ ಅವನ ಮಂಡೆಯನ್ನು ಹಿಡಿದೆತ್ತಿ, ಯಮರಾಜನೆ ಕುಶಲವೆ? ಎಂದು ಕೇಳಿದನು. ಯಮನಾದರೋ- ಸ್ವಾಮಿಯ ಅನುಗ್ರಹದಿಂದ ಆ ಷ್ಟು ಮಟ್ಟಿಗೆ ಕುಶಲಿಯಾಗಿರುವೆನು, ಬಹುಕಾಲಕ್ಕೆ ನನ್ನ ಮೇಲೆ ಕೃಪೆಯಿ ಟ್ಟು ತಾವು ದಯೆನಾಡಿಸಿದುದರಿಂದ ನನ್ನ ಆನಂದವು ಮಿತಿಮೀರಿರುವುದು; ಈ ಅಲ್ಪನು ಮಾಡುವ ಸೇವೆಯನ್ನು ಪರಿಗ್ರಹಿಸಿ, ಧನ್ಯನನ್ನು ಮಾಡುವು ದಕ್ಕಾಗಿ ಅರಮನೆಗೆ ಚಿತ್ತೈಸಬೇಕೆಂದು ಪ್ರಾರ್ಥಿಸಿದನು, ಅದಕ್ಕಾಗಿಯೇ ನಾವು ಬಂದೆವೆಂದು ಮಸೀಶನು ನುಡಿಯಲು, ಯಮನು ಹಸ್ತಾವಲಂಬನ ವನ್ನು ಕೊಟ್ಟು, ಕರೆದುಕೊಂಡು ಹೋಗುತ್ತಿರಲು, ಸುನಂದಗಣೇಶನು ಯಮನಗರಿಯ ಸಂದರವನ್ನೆಲ್ಲ ನೋಡಿಕೊಂಡು ಹೋಗುತ್ತಿದ್ದು ,ಯ ಮರಾಜನೆ ! ನಿನ್ನ ಪಟ್ಟಣದಲ್ಲಿರುವ ನರಕಸಗಳ ವಿಸ್ತಾರವನ್ನೆಲ್ಲ ಸ ಲ್ಪ ತೋರಿಸು, ಎಂದು ನುಡಿಯಲು, ಯಮನು ಸ್ವಾಮಿ, ಪರಶಿವನ ಪ ರಾವತಾರರಾದ ತಮ್ಮಂಥವರು ಸಾವಿಗಳಿರುವ ಆ ವೈತರಣಿಯ ಬಳಿಯ ನ್ನು ಅವಲೋಕಿಸಬಾರದು, ಅಲ್ಲಿರುವ ಮಹಾನಾರಕಿಗಳ ದರ್ಶನಭಾಷಣ ಗಳಿಂದ ಇತರರಿಗೂ ಮಾಸಸಂಘಟನವಾಗುವುದು, ಎಂದು ಬಿನ್ನೈಸಿದನು. ಗಣೇಶ ನಾದರೊ- ಹರಹರಾ ! ಮಹಾಗೇವಾ ! ನಾವು ಇಷ್ಟು ದೂರ ಬಂ ದು, ಆ ದೀನನಾತಕಿಗಳನ್ನು ನೋಡದೆ ಹೋಗಬಹುದೆ? ಅದರಿಂದೇನಾ ದರೂ ಆಗಲಿ ; ನಿನು ಅವಶ್ಯಕವಾಗಿ ನನಗೆ ತೋರಿಸಲೇ ಬೇಕು, ಎಂ ದು ನುಡಿದನು. ಅದಕ್ಕೆ ಪ್ರತ್ಯುಪಾಯವನ್ನು ಯಮನು ಕಾಣದೆ, ಸ್ವಾಮಿ ಯ ಚಿತ್ರವಿದ್ದಂತಾಗಲಿ, ಎಂದು ಬಾಹ್ಯದಲ್ಲಿ ನುಡಿದು, ಮನದಲ್ಲಿ ನೋಂ ದು, ಮುಂದೆ ಸಾಗಿ, ನರಕಗಳ ಕೇರಿಗೆ ಕೈ ಹಿಡಿದು ಕರೆದುಕೊಂಡು ಹೋ ದನು. ಅಲ್ಲಿ ದೂತರು ಘುಡುಘುಡಿಸಿ, ನಾರಕಿಗಳನ್ನು ನೀಳುತ್ತಲೂ ಮುಂದಲೆಯನ್ನು ಹಿಡಿದು ಎಳೆಯುತ್ತಲೂ, ಕುಸುರಿ ಬಿಸುತ್ತಲೂ, ಚಾಟಿಯ ಹೊಡೆತದಿಂದ ಬಾಯ್ಸಡಿದುಕೊಂಡರೆ ಮುಳ್ಳುಗಳನ್ನು ಗಂಟಲಿ ಗೆ ತುಂಬುತ್ತಲೂ, ಗರಗಸದಿಂದ ಕೊರೆದು ಕಿವಿಮೂಗುಗಳನ್ನು ತರಿದು, ಅಲಗುಗಳನ್ನು ಮರಸ್ಥಾನಗಳಿಗೆ ಚುಚ್ಚಿ, ಕಲ್ಲುಗಾಣಗಳಲ್ಲಿ ಆರೆದು, ಈ
ಪುಟ:ಚೆನ್ನ ಬಸವೇಶವಿಜಯಂ.djvu/೩೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.