ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18+ ಚನ್ನ ಬಸವೇಶವಿಜಯಂಕಾಂಡ ೫) [ಅಧ್ಯಾಯ ಕಾಣದೆ ಹಸಿದು ಬಳಲುತ್ತಿದ್ದನು. ಆತನ ಕುದುರೆಯೂ ಮಾಯವಾಯಿ ತು, ನಂದೀಶನು ಅವನಿಗೆ ಪೂರಜನ್ಮದಲ್ಲಿ ಕೊಟ್ಟಿದ್ದ ವರವನ್ನು ನೆರವೇರಿ ಸುವುದಕ್ಕಾಗಿ ಆ ಅರಣ್ಯಕ್ಕೆ ಬಂದನು, ಅವನನ್ನು ಅನಿಮಿಷನು ಕಂಡು ಲಿಂಗವನ್ನು ಕೇಳಿದನು, ನಂದೀಶನು ಅವನಿಗೆ ಲಿಂಗದೀಕ್ಷೆಯನ್ನಿತ್ತು ಪ್ರಾ ಣಲಿಂಗಿಯನ್ನಾಗಿ ಮಾಡಿದನು. ಬ೪ಕ ಲಿಂಗೈಕ್ಯನಾದ ಅನಿಮಿಪಯ್ಯನಿಗೆ ಆತನ ಮಂತ್ರಿವರ್ಗದವರು ಕ್ರಮವಾಗಿ ಸಮಾಧಿಯನ್ನು ಮಾಡಿದರು. ನಂ ದೀಶನು ತನ್ನಲಿಂಗವನ್ನು ಅನಿಮಿಷನಿಗೆ ಕೊಟ್ಟು ಬಿಟ್ಟನೆಂಬ ಸುದ್ದಿಯ ನ್ನು ನಾರದನು ಮುಂದಾಗಿ ಕೈಲಾಸಕ್ಕೆ ಹೋಗಿ ಹೇಳಿದನು. ಕೈಲಾಸ ದ್ವಾರದಲ್ಲಿದ್ದ ಸಿಕ್ಕ ಕೇಸರಿ, ದ್ರವಿಡ ಎಂಬುವರು ಲಿಂಗವಿಲ್ಲದ ಭವಿಯೆಂದು ನಂದೀಶನನ್ನು ಒಳಕ್ಕೆ ಬಿಡದೆ ತಡೆಯಲು, ಇದನ್ನು ಶಿವನು ಕೇಳಿ, ಆ ನಂ ದಿಶನು ಸಾಂಗಲಿಂಗಿಯು, ಅಂಥವನನ್ನು ನೀವುಗಳು ಭವಿಯೆಂದು ತಿರ ಸ್ಕರಿಸಿದ ಕಾರಣ, ಭೂಮಿಯಲ್ಲಿ ಭವಿಗಳಾಗಿ ಹುಟ್ಟಿ, ಆ ನಂದೀಶನ ಮ ಹಿಮೆಯನ್ನು ತಿಳಿದು, ಜ್ಞಾನೋದಯಗೊಂಡು, ಮರಳಿ ಕೈಲಾಸಕ್ಕೆ ಬನ್ನಿ ರಿ ಎಂದು ಆಜ್ಞಾಪಿಸಿದನು. ಅದರಂತೆ ಕನ್ನೇಶ, ಬಿಜ್ಜಳ ಎಂಬ ಹೆಸರಿನಿಂ ದ ಅವರು ಅವತರಿಸಿದರು. ಶಿವನು ಎಂದಿನಂತೆ ಕೈಲಾಸದಲ್ಲಿರಲು, ನಾರದ ನು ಭಿಕವಾರೆಯನ್ನು ತಂದು ಹೇಳುವಾಗ್ಗೆ, ಅಲ್ಲಿ ಶಿವಭಕ್ತಿಯು ಅತಿ ವಿರಳವಾಗಿರುವುದೆಂಬುದನ್ನು ತಿಳಿಸಲು, ಶಂಕರನು ನಂದೀಶನನ್ನು ಕರೆದು, ವೀರಶೈವಾಚಾರವನ್ನುದ್ದರಿಸಿ, ಬಿಜ್ಜಳನಿಗೆ ನಿನ್ನ ಮಹತ್ವ ವನ್ನು ತೋರ್ಪಡಿಸುವುದಕ್ಕಾಗಿ ಭೂಮಿಯಲ್ಲಿ ನೀನು ಅವತರಿಸು ಎಂದು ಬೆಸಸಿ ಕಳುಹಿಕೊಟ್ಟನು. ನಂದೀಶನು ಅಮರಗಣದೊಡನೆ ಕೂಡಿ ಭೂಮಿಗೆ ಬಂದು, ಮಾದರಸನ ಪತ್ನಿ ನಾದಾಂಬೆಯ ಗರ್ಭದಲ್ಲಿ ಬಸವನೆಂಬ ಹೆಸರಿ ನಿಂದ ಅವತರಿಸಿದನು. ಬಾಲಲೀಲೆಯ ಕಾಲದಲ್ಲೆ ಒಡನಾಡಿಯಾದ ಬ್ರಾ ಹ್ಮಣಕುಮಾರನೊಬ್ಬನು ಕಾಲ್ದಾರಿ ಬಾವಿಯಲ್ಲಿ ಬಿದ್ದು ಸಾಯಲು, ಅವ ನ ತಾಯ್ತಂದೆಗಳು ಬಸವನೇ ಈ ಕೃತ್ಯವನ್ನು ನಡಸಿದನಂದು ಬೆನ್ನಟ್ಟಿ ಬರಲು, ತಾನು ಸಂಗಮನಾಥನಲ್ಲಿಗೆ ಹೋಗುತ್ತ, ಅಡ್ಡಲಾಗಿದ್ದ ಪ್ರವಾಹ ವನ್ನು ಎರಡುಭಾಗವಾಡಿ, ನಿಲ್ಲಿಸಿ, ಆಚೆಗೆ ಹೋಗಿ, ತಾನು ಆ ಹುಡುಗ ನನ್ನು ಕೊಲ್ಲಲಿಲ್ಲವೆಂಬ ಸಂಗತಿಯನ್ನ ಸಂಗಮನಾಥನಿಂದ ಸಾಕ್ಷವಾಗಿ