ಚನ್ನ ಬಸವೇಕವಿಜಯುಂ (ಕಾbದ ೫) [ಅಧ್ಯಾಯ ಲ್ಲಿಂದ ನಿನ್ನ ಪಟ್ಟಣಕ್ಕೆ ಬಂದು, ನಿನ್ನ ಕೃತ್ಯವನ್ನೆಲ್ಲ ನೋಡಿ, ತಿರಸ್ಕರಿ ನಿ, ಶಿವತತ್ತೊ ಪ್ರದೇಶವನ್ನು ಮಾಡಿ, ಇಲಿಂಗಸರೂಪವನ್ನು ನಿನಗೆ ತಿಳಿಯಪಡಿಸಬೇಕೆಂದುದ್ದೇಶಿಸಿ, ಇಲ್ಲಿಗೆ ಕರೆದುಕೊಂಡು ಬಂದಿ ರುವನು. ಈ ಮಹಾಮಹಿಮನ ಅದ್ಭುತಲೀಲೆಯು ಪವಿತ್ರವಾದು ದು, ಈ ಜಗತ್ತಿನಲ್ಲಿರುವ v3 ಲಕ್ಷ ಜೀವರಾಶಿಗಳಲ್ಲಿ ಗೊಜನ್ನ ವು ಉತ್ತಮವಾದುದು, ಅದಕ್ಕಿಂತಲೂ ಮಾನವಜನ್ಮ ವಧಿಕವು, ಅವರ ಲೆಲ್ಲ ಶಿವಭಕ್ತರು ಉತ್ತಮರು, ಅವರೊಳಗೆಲ್ಲ ವೀರಶೈವರು ಶ್ರೇಷ್ಠ ರು, ಅವರಲ್ಲೂ ಪಟ್ಟ ಲತತ್ತ್ವವನ್ನರಿತವರು ಅಧಿಕರು. ಆ ಪಟ್ಟಲ ಬ್ರಷ್ಟಿಗಳಾದ ನಿರಾಭಾರಿಗಳಿಗಿಂತಲೂ ಅಧಿಕರಾದವರು ಮೂರು ಲೋಕ ದಲ್ಲಿ ಯಾರೂ ಇಲ್ಲ, ಅದುಕಾರಣ, ಅಂತಹ ಪಟೂಲಬ್ರಷ್ಟಿಗಳನ್ನಲ್ಲದೆ ಇತರರನ್ನು ಈ ಬಾಗಿಲಿನಿಂದೊಳಗೆ ಹೋಗಗೊಳಸರು, ಎಂದು ನುಡಿದ ನು, ಇದನ್ನು ಕೇಳಿದ ಅಲ್ಲಿದ್ದ ಶರಣರಲ್ಲಿ ಕೆಲರು,- ( ಅದು ನಿಜ, ಇಪ್ಪ ಲಿಂಗವಿಲ್ಲದವರ ಮುಖವನ್ನು ಕೂಡ ನೋಡಬಾರದು ?” ಎಂದು ಹೇಳಿದ ರು. ಆಗ ಅಲ್ಲಮಪ್ರಭುವು- ಈ ಸಿದ್ದರಾಮನಂತಹ ಸರಾಂಗಲಿಂಗಿಗೆ ಇ ಲಿಂಗಧಾರಣವೇತಕ್ಕೆ ? ಆಕಾಶವನ್ನೇ ಹತ್ತುವವನಿಗೆ ಊರುದೊಣ್ಣೆ ಯೇತಕ್ಕೆ ? ಸಮುದ್ರವನ್ನು ದಾಟುವವನಿಗೆ ಹರಿಗೋಲೇತಕ್ಕೆ? ಎನ್ನಲು, ಚೆನ್ನಬಸವೆಶನು ಪ್ರಭುವನ್ನು ಕುರಿತು ಮುಖ್ಯವಾದ ಇಮ್ಮಲಿಂಗಧಾರ ಣೆಯಯಿಲ್ಲದ ಈ ಸಿದ್ದರಾಮನು ಅದು ಹೇಗೆ ಸಾಂಗಲಿಂಗಿಯಾದನು? ಅದನ್ನು ಅರುಹಬೇಕು' ಎಂದು ಬೆಸಗೊಂಡನು. ಆಗ ಸಿದ್ದರಾಮೇಶನು Cಇಲ್ಲಿ ನೋಡು ?” ಎಂದು ಹೆ೪, ತನ್ನ ದೇಹವೆಲ್ಲ ಲಿಂಗಗಳ ಗೊಂಚ ಲಾಗಿರುವುದನ್ನು ತೋರ್ಪಡಿಸಿದನು. ಅದನ್ನು ಚೆನ್ನಬಸವೇಶನು ನೋಡಿ ನಕ್ಕು, ಇಂತಹ ಇಂದ್ರಜಾಲದ ಸಾಂಗಲಿಂಗಿತವು ನಿಸ್ಸಯೋಜಕ ವು, ನಿನಗೆ ಏಕಲಿಂಗನಿಷ್ಟೆಯ ಅಳವಟ್ಟಲ್ಲಿ ಮನೆಗೆ ಅಲ್ಲಮನು ಬರಲಾಗಿ, ಅವನನ್ನು ಸುಡಬೇಕೆಂದು ನೀನು ಉರಿಗಣ್ಣನ್ನು ಬಿಟ್ಟೆ; ಅದುಕಾರಣ ನೀ ನು ಜಂಗವದ್ರೋಹಿ, ಹೋಗು, ಎಂದು ತಿರಸ್ಕರಿಸಿದನು, ಮತ್ತೂ ಅಲ್ಲ ಮನ ಕಡೆಗೆ ತಿರುಗಿ, ನೀನು ಈ ಜಂಗಮದ್ರೋಹಿಯನ್ನು ಇಲ್ಲಿಗೆ ಕರೆತಂ ದು, ಇವನ ಸಾಂಗಲಿಂಗಿತ್ವದ ಪ್ರಭಾವವನ್ನು ಮೆರೆಯಿಸುತ್ತಿರುವೆ! ಗು
ಪುಟ:ಚೆನ್ನ ಬಸವೇಶವಿಜಯಂ.djvu/೩೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.