೪n ಕನ್ನಬಸವೇಳವಿಜಯಂ (pಂಡ) [ಅಧ್ಯಾಯ ತಿಗಳ ಕುರುಹನ್ನು ಅಪ್ಪಣೆ ಕೊಡಿಸಬೇಕೆಂದು ಬೇಡಲು, ತ್ರಿಕಾಲಜ್ಞೆ ನಿಯಾದ ಚೆನ್ನಬಸವೇಶನು ಆ.ಭವಿಷ್ಯತ್ತನ್ನು ನಿರೂಪಿಸಿದನೆಂತೆಂದರೆ... ಎಲೆ ಸಿದ್ದರಾಮನೆ, ಈ ಪ್ರಭುವು ಇಲ್ಲಿಂದ ತೆರಳಿದ ಬಳಿಕ ಅಖಿಲದೇಶ ವನ್ನೂ ಸಂಚರಿಸಿಕೊಂಡು, ಶಿವಭಕ್ತರಿಪ್ಟಾರ್ಥವನ್ನು ಕೊಡುತ್ತ, ತನ್ನ ಪಾದಸ್ಪರ್ಶದಿಂದ ಗಿರಿಗುಹಾನದೀವನಾದಿಗಳನ್ನೆಲ್ಲ ಪವಿತ್ರವನ್ನಾಗಿ ಮಾ ಡುತ್ತ, ದ್ರಾವಿಡದೇಶಕ್ಕೆ ಬಂದು, ಕಂಚಿ ಕಾಳಹಸ್ತಿ ಅರುಣಾಚಲ ಮೊದಲಾದುವುಗಳನ್ನೆಲ್ಲ ಸಂಚರಿಸಿ, ಅಲ್ಲಿಂದ ರಾಮೇಶ್ವರಕ್ಕೂ ಗೋಕ ರ್ಣಸೌರಾಷ್ಟ್ರಗಳಿಗೂ ಕಾಶಿಕೇದಾರಗಳಿಗೂ ಹೋಗಿ, ಬಳಿಕ ಹಿಮ ವತ್ಪರ್ವತವನ್ನು ದಾಟ, ಸವಾಲಕ್ಷಪರತಕ್ಕೆ ಬರುವನು. ಅಲ್ಲಿದ್ದ ಮುನಿ ಗಳಿಗೆಲ್ಲ ತತ್ವಾರ್ಥವನ್ನು ಬೋಧಿಸಿ ಮುಕ್ಕರಂ ಮಾಡಿ, ಅಲ್ಲಿನ ಗುಹೆ ಯೊಳಗೆ ರಾಜಯೋಗದಲ್ಲಿ ೧೨ ವರ್ಷಗಳಿದ್ದು, ಅದುವರೆಗೆ ಶೂನ್ಯಪೀಠದ ಆಡಳತವನ್ನು ಬಸವೇಶನು ಸಾಗಿಸುತ್ತಿರುವುದನ್ನು ಅರಿತು, ಬಸವೇಶಾದಿ ಗಳನ್ನು ವರಿಸುವುದಕ್ಕಾಗಿ ಇಲ್ಲಿಗೆ ಬರುವನು. ಅವನ ಬರುವಿಕೆಯನ್ನು ಇವರೆಲ್ಲರೂ ತಿಳಿದು ಇದಿರ್ಗೊಳ್ಳಲು, ಪ್ರಭುವು ಬಂದು ಶೂನ್ಯವಿಜ್ಞಾಸ ನವಾರೋಹಿಸುವನು. ಅದನ್ನು ಕಂಡು ಅಲ್ಲಿದ್ದ ಚರಮರಿಗಳೆಲ್ಲ ಕೋಪಿಸಿಕೊಂಡು ಹೊರಟುಹೋಗುವರು. ಇದಕ್ಕೇನು ಮಾಡಬೇಕೆಂ ದು ಬಸವೇಶನು ಭಯದಿಂದ ನಡುಗಿ ಚಿಂತಿಸುತ್ತಿರಲು, ಪ್ರಭುವು- ಅವ ರೆಲ್ಲರಿಗೂ ಮಾಡಿದ ಆಹಾರವನ್ನೆಲ್ಲ ತರಿಸಿ ನಮಗೆ ನೀಡಿಸು ಎಲ್ಲವನ್ನೂ ನಾವು ಆರೊಗಿಸುವೆವು, ಎಂದು ನುಡಿಯುವನು. ಅದನ್ನು ಕೇಳಿದ ಬ ಸವೇಶನು ಅತ್ಯಂತ ಭಕ್ತಿಯಿಂದ ಲಕ್ಷದ ತೊಂಭತ್ತಾರು ಸಾವಿರದ ಜಂಗ ಮರಿಗಾಗಿ ಮಾಡಿಸಿದ್ದ ಭಕ್ಷ್ಯಭೋಜಾದಿಗಳನ್ನೆಲ್ಲ ತರಿಸಿ ನೀಡಿಸುತ್ತಿರ ಲು, ಎಲ್ಲವನ್ನೂ ಪ್ರಭುವು ಆಕಾಶವೇ ಬಾಯ್ದೆರೆದಂತೆ ಸಲಿಸುತ್ತಿರುವನು. ಹಿಂದೆ ಸರತಿಯು ಶಿವಗಣಕ್ಕೆ ಔತಣವನ್ನು ಮಾಡಿಸಿದಾಗ, ಅಂಗು ಗಣಪತಿಯೊಬ್ಬನು ಮುಂದಾಗಿ ಬಂದು ಎಲ್ಲವನ್ನೂ ಭುಂಜಿಸಿಬಿಡ ಲು, ಸಕಲ ಶಿವಗಣರೂ ಅವನೊಬ್ಬನ ತೃಪ್ತಿಯಿಂದಲೇ ತಾವೂ ಪರಿತೃ ಸ್ಥರಾಗಿದ್ದಂತೆ ಈ ನಿರಾಯಗಣೇಶನೇ ಅಲ್ಲಮನೆನಿಸಿಬಂದು, ಅದಪ್ಪ ನ್ಯೂ ಒಬ್ಬನೇ ಸಲಿಸಿದುದರಿಂದ ಮುಳಿದುಹೋಗಿದ್ದ ಹಂಗಮರೆಲ್ಲರೂ ತೃ
ಪುಟ:ಚೆನ್ನ ಬಸವೇಶವಿಜಯಂ.djvu/೪೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.