ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶನ ಪವಾಡವು ಮನೆಗೆ ಬರುವರು; ನೀನು ಮಾಡುವ ಜಂಗಮಾರ್ಚನೆಯು ಅಂತಹುದಲ್ಲ; ನಿನ್ನ ಮನೆಯಲ್ಲಿ ಜಂಗಮರನ್ನು ಲಿಂಗಶೋಭರು ಅಂಗಶೋಭಕು ಎಂಬು ದಾಗಿ ಔದಾಸೀನ್ಯದಿಂದ ಇಟ್ಟುಕೊಂಡಿರಬಾರದು; ಅಲ್ಲಮನು ನಿನ್ನ ಮ ನೆಗೆ ಜಂಗಮಾಕಾರದಿಂದ ಬಂದಾಗ ನಿನಗೆ ಅವರ ಅಘಟಿತ ಘಟನಾಸಾವು ರ್ಥವಿಶೇಪವು ಕಾಣ್ಣರುವುದು; ಅದುಕಾರಣ ಆ ಜಂಗಮರ ಮಹತ್ಯ ಕ್ಕನುಸಾರವಾಗಿ ಮಠಗಳನ್ನು ಕಟ್ಟಿಸಿಕೊಟ್ಟು ಅವುಗಳಲ್ಲಿ ಲಕ್ಷದಮೇಲೆ ತೊಂಭತ್ತಾರು ಸಾವಿರ ಜಂಗಮರನ್ನು ತಂದಿರಿಸಿ, ಅವರಿದ್ದ ಬಳಿಗೆ ನೀನೇ ಹೋಗಿ, ಭಯಭಕ್ತಿಯಿಂದ ಬಿನ್ನಹವಂ ಮಾಡಿ, ನಿನ್ನರಮನೆಗೆ ಕರೆದು ಕೊಂಡು ಬಂದು, ಅವರೇನನ್ನು ಕೇಳಿದರೂ ಕೊಟ್ಟು ಕಳುಹಿಸು ಎಂದು ಬೋಧಿಸಿದನು. ಅದಕ್ಕೆ ಬಸವೆಶನು ಹರ್ಷಗೊಂಡು, ನಾನು ಅಸ್ಸತಂತ್ರ; ನೀವು ಹೇಗೆ ಇರಿಸಿದರೆ ಹಾಗೆ ನಾನಿರತಕ್ಕವನು, ಅಪ್ಪಣೆಯಾದಂತಾಗಲಿ, ಎಂದು ಹೇಳಿ, ಗಣಸಮೇತನಾಗಿ ಆ ಚೆನ್ನಬಸವೇಶನಿಗೆ ನಮಸ್ಕರಿಸಿ, ತನ್ನರಮನೆಗೆ ಹಿಂತಿರುಗಿದನು. ಬಳಿಕ ಚೆನ್ನಬಸವೇಶನು ಬಸವಣ್ಣನವು ನೆಯ ಮುಂದಣ ಬೈಲಿನಲ್ಲಿ ಲಕ್ಷದ ತೊಂಭತ್ತಾರುಸಾವಿರ ಜಂಗಮರಿಗೂ ಅನುಕೂಲಿಸುವಂತೆ ಮನೋಹರವಾದ ಮಠಗಳನ್ನು ಕಟ್ಟಿಸಿ, ಎಲ್ಲ ಜಂಗ ಮರನ್ನೂ ಅಲ್ಲಿರಿಸಿದನು. ಬಳಿಕ ಬಸವೇಶನರಮನೆಯಲ್ಲಿದ್ದ ಲಿಂಗಶೋ ಭರು ಅಂಗಭೋಗರುಗಳೆಲ್ಲರನ್ನೂ ಕುರಿತು-ಮುಂಗಡೆಯಲ್ಲಿರುವ ಮಠ ಗಳಿಗೆ ನಡೆಯಿರೆಂದು ಹೇಳಿದನು. ಅವರು ಏಳುವುದಿಲ್ಲವೆಂದರು. ಆಗ ಆ ಮನೆಗೇ ಬೆಂಕಿಯಿಕ್ಕಿಸಿದನು. ಅದು ಹೊತ್ತಿ ಧಗಧಗನೆ ಉರಿಯುತ್ತಿರಲು, ಎಲ್ಲರೂ ಗಡಬಡನೆ ಎದ್ದು, ಕೈಕಾಲೊಡೆದುಕೊಂಡು ದಿಕ್ಕು ತೋಚದೆ ಓಡುತ್ತಿದ್ದರು. ಅವರಲ್ಲಿ ಮೂವರು ಮಾತ್ರ ಲಿಂಗಾನುಸಂಧಾನದಲ್ಲಿದ್ದ ರು. ಅವರಲ್ಲ ಒಬ್ಬನು ತನ್ನ ಮಗ್ಗುಲಲ್ಲಿದ್ದವನನ್ನು ಕುರಿತು-ಇಗೋ ಇ ಗೋ ಬೆಂಕಿಯು ಉರಿಯುತ್ತಿದೆ ! ಎಂದನು, ಮತ್ತೊಬ್ಬನು ಎಲ್ಲಿ ? ಎಂದನು. ಇನ್ನೊಬ್ಬನು ನಿಮ್ಮ ಸೊಲ್ಲಡಗ ! ಸುಮ್ಮನಿರಿ ” ಎಂದು ಹೇಳಲು, ಮೂವರೂ ಸುಮ್ಮನೆ ಮಲಗಿಕೊಂಡರು. ಚೆನ್ನಬಸವೇಶನು ಆ ಮೂವರನ್ನೂ, ಭಯದಿಂದ ಓಡಿಹೋದ ಇತರರನ್ನೂ ಕರೆತಂದು, ಬೇರೆ ಕಟ್ಟಿಸಿರುವ ಮಠಗಳಲ್ಲಿರಿಸಿ, ಮನೆಯ ಬೆಂಕಿಯನ್ನಾರಿಸಿ, ಮನೆ