ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶನ ಪವಾಡವು ಮನು ನೊಂದು ಹಿಂತಿರುಗಿ ಹೋದಕೂಡಲೇ ಈ ಬಸವೇಶನ ಪ್ರಾಣ ವೂ ಅವನ ಸಂಗಡ ಹೋಗಿರುವುದೆಂದು ನುಡಿದನು. ಆಗ ದೊರೆಯ ಕಾ ವಲುಗಾರರನ್ನು ಕರೆಸಿ “ಯಾರಾದರೂ ಬಾಗಿಲಿಗೆ ಬಂದಿದ್ದು ಹಿಂತಿರುಗಿ ಹೋದರೆ ? ನಿಜವಾಗಿ ಹೇಳು, ಹೆದರಬೇಡ ” ಎನಲು, ಪ್ರಭುವೇ ! ಯಾರೊ ದೂರದೇಶದಿಂದ ಜಂಗಮರೊಬ್ಬರು ಬಂದಿದ್ದರು; ನಾನು ತಡೆ ಯಲಾಗಿ ಹೊರಟುಹೋದರು, ಎಂದನು. ಆಗ ಚೆನ್ನಬಸವೇಶನಪ್ಪಣೆಯ ಮೆರೆ ಚಾರರನ್ನು ತ್ರಿಪುರಾಂತಕೇಶ್ವರ ದೇವಾಲಯಕ್ಕೆ ಕಳುಹಿ, ಅಲ್ಲಿ ಕುಳಿತಿದ್ದ ಜಂಗಮರನ್ನು ಬರಮಾಡಿದನು (ಆಗ ನಡೆದಾಶ್ಚರೈವನ್ನೇನು ಹೇಳುವ!) ಜಂಗಮನು ಬಾಗಿಲನ್ನು ಮೆಟ್ಟಿದ ಕೂಡಲೇ ಬಸವೇಶನ ಪ್ರಾಇಮಾರುತವು ಮೂಗಿನಲ್ಲಾಡಲಾರಂಭಿಸಿತು! ಸವಿಾಪಕ್ಕೆ ಬರುವುದ ರೊಳಗಾಗಿ ಸಾಂಗವಲ್ಲ ನಾಡಿಯು ಆಯಾಯ ಸ್ಥಲದಲ್ಲಿ ಆಡುವುದು ಕಾಣಿಸಿತು! ಆಗ ಬಸವೆಶನು ಥಟ್ಟನೆ ಜಂಗಮನೋರಿಗೆ ನಮಸ್ಕಾ ರಮಾಡಿದನು, ಬಿಜ್ಜಳನು ಆ7ಪಟ್ಟು ಚನ್ನಬಸವೇಶನನ್ನು ಕೊಂ ಡಾಡಿ ತನ್ನ ಮನೆಗೆ ತೆರಳಿದನು. ಇತ್ತ ಸಕಲಗಣಂಗಳ ಬಸವೇಶ ಚೆನ್ನಬಸವೇಶರಿಬ್ಬರನ್ನೂ ಹೊಗಳಿದರು. ಬಳಿಕ ಚೆನ್ನಬಸವೇಶನು ಬಸವರಾಜನನ್ನು ಕುರಿತು-ವ್ಯರ್ಥವಾಗಿ ಹಿಗೆ ಪ್ರಣವನ್ನು ಬಿಡುವು ದು ಯೋಗ್ಯವಾದುದೆ ? ಯಾವಾಗಲೂ ಲಿಂಗವಲ್ಲಿ ಅಥವಾ ಜಂಗಮದಲ್ಲಿ ಪ್ರಾಣವನ್ನು ಸಮರ್ಪಿನಿರುವವನು ಆ ಲಿಂಗಜಂಗಮಗಳ ಅಳಿವಿನಲ್ಲಿ ತನ್ನ ಪ್ರಾಣವನ್ನೂ ಸಮರ್ಪಿಸುವುದು ಲಿಂಗಜಂಗಮಪ್ರಾಣಿಗಳ ನೀತಿ, ಹೇಗೆ? ದರೆ- ಆ ಪ್ರಾಣಲಿಂಗಿ ಲಿಂಗಪಣಿ ಜಂಗಮವಾಣಿಗಳ ಚರಿತ್ರವನ್ನು ಹೇಳುತ್ತೇನೆ ಕೇಳು- ಲಿಂಗಣ್ಣನೆ ಒಬ್ಬ ಶಿವಶರಣರ ಮಗನು ಆಡು ತಿರುವಾಗ ಅವನ ಕೊರಲಿನಲ್ಲಿದ್ದ ಲಿಂಗವು ಎಲ್ಲೋ ಕಳಚಿ ಬಿದ್ದು ಹೋ ಯಿತು. ತಾಯಿಯು ಮಗನ ಬರಿಯ ಕೋರಲನ್ನು ನೋಡಿ, ಲಿಂಗವೆಲ್ಲೆಂ ದು ಕೇಳಿದಳು, ಘಟ್ಟಸಿ ಆ ಹುಡುಗನ ಪ್ರಾಣವು ಹೋಯಿತು. ತಾಯ್ತಂ ದೆಗಳೂ ಬಂಧುಗಳೂ ಸೇರಿ ಹುಡುಗನನ್ನು ಮಲಗಿಸಿಕೊಂಡು ಅಳುತ್ತಿ ದ್ದರು, ಚಿಕ್ಕಲಿಂಗಣ್ಣನೆಂಬೊಬ್ಬಾತನು ಆ ಹುಡುಗನ ಲಿಂಗವನ್ನು ತಡಕಿ ತಂದು ಕೊರಳಿಗೆ ಕಟ್ಟಿದನು. ಕೂಡಲೇ ಅವನ ಪ್ರಾಣವು ಬಂದಿತು.