ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ಊರಿಗಾಗಿ ಜೀವವಿತ್ತ
 ವೀರನೆಂದು ಗ್ರಾಮವೆಲ್ಲ
 ಸೇರಿ ಮೆಚ್ಚಿ ಅತ್ತು ಮರುಗಿ;
 ಶೂರನೆಂದು ಹಾತಿ, ಹೂವ
 ಹಾರಗಳನ್ನು ಹೇರಿ, ಬಳಿಯ
 ಊರುಗಳಲಿ ಹೊಗಳಿ ಮೆರೆಸಿ ;
 ಇಲ್ಲಿ ಮಣ್ಣು ಮಾಡಿ, ಹೆಸರು
 ನಿಲ್ಲಲೆಂದು ಕತೆಯ ಕೆತ್ತಿ,
 ಕಲ್ಲ ನೆಲಸಿ, ಒಲವಗುಡಿಯ
ಅಂದೆ ಸಮೆದರು.


ಒಡಲ ಮುರುಕು ಮನೆಯೊಳಸುವ
 ಸೊಡರು ಗಾಳಿ ಮಳೆಯೊಳೆಂದೊ
 ಕೆಡುವುದೆಂದು ಅರಿವೆವೆಲ್ಲ ;
 ನಡುವೆ ಒಮ್ಮೆ ಅದನು ಜಗದ
 ಒಡೆಯಗಾರತಿಯನು ಬೆಳಗೆ
 ಕೊಡುವ ಸಮಯ ಬಹುದು ಪುಣ್ಯ ;
 ಇಂಥ ವೇಳೆ ಬಹಳ ಜೀವ
 ಹಿಂತೆಗೆವುದು ; ಭೀತಿಯುಳಿದು
 ನಿಂತು ಕೊಡುವ ಧೃತಿ ಒದಗುವ
ಪುಣ್ಯಮಿಕ್ಕುದು.

2
೧೭
F