ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೀಲಗಾರ ಮಾದ ಕಟ್ಟೆಮಳಲವಾಡಿ ನೀಲಗಾರ ಮಾದಣ್ಣ ಕತೆಯ ಹೇಳ್ತಿನಿ ಕೇಳಣ್ಣ; ಶಿಟ್ಟಾದ ಸುಲ್ತಾನು ಅವನ ನಡತೀ ನೋಡಿ ಸುತರಾಮು ಮೆಚ್ಚಿಕೊಂಡದನ. ಹೈದ್ರಾಲಿ ಸುಲ್ತಾನು ಕಟ್ಟೆಮಳಲ್ವಾಡೀಗೆ ಬಂದರಣ್ಣ ಒಂದು ಕಾಲ್ದಾಗ; ಆ ದಿನಕೆ ಬಂದೀತು ಬಾಬಯ್ಯಗಳ ಹಬ್ಬ ಚಂದಾಗಿ ಚಂದು ಮಡ್ಡಾಗಿ, ಯಲ್ಲಾರು ಬಂದಾರು ಯಾಸಗಳು ಹಾಕ್ಕಾರು ಕಟ್ಟಾಳು ಮಾದ ಬರನಿಲ್ಲ; ಮುಲ್ಲಾನ ಸಾಹೇಬ್ರು ಹೇಳಿಕಳಿಶಿದರವಗೆ ; ನೆಟ್ಟನೇ ಬಂದ ಮಾದಣ್ಣ. ಯಾತಕ್ಕೆ ನೀ ಯಾಸ ಹಾಕೋಲ್ಲ ಅಂದರೆ ಮಾದ ಅಂದ, ನಾ ನೀಲಗಾರ, ಜಾತೀಯ ಜನವೆಲ್ಲ ಬಂದೈತೆ, ಕಳಿಶಿನ್ನಿ, ನಾ ದೇವರಿಗೆ ಮೀಸಲಂದ.