ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

 ಗೋಳೇ ಹೆಣ್ಣಾಯಿತೊ ಎನೆ ರೂಪು;
 ಮಂದಿ ಬಂದು ಇವಳನು ನೋಡಿದರು;
 ಹಿಂದಕೆ ಬಂದಳು ಎಂದಾನಂದಿಸಿ
 ಒಳಗೆ ಬಾರ ಎನೆ ಬಾರೆನು ಎಂದಳು,
 ಹೊಲಸಾಗಿದೆ ನನ್ನೊಡಲಿದು ಎಂದಳು.
ಮಲ್ಲಮ್ಮಾ ಮಲ್ಲಮ್ಮಾ
ಹೊಲ್ಲೆ ಹವಾಯಿತೆ ಮಲ್ಲಮ್ಮಾ.


 ಮತ್ತೆ ಹೇಳಿದಳು ನಮ್ಮ ಮಲ್ಲಮ್ಮ
 ಸತ್ಯದ ಮಾತನು ಗಂಡಗೆ ಮಂದಿಗೆ ;
 ಕೆಟ್ಟು ಹೋದೆ ನಾ ಎನ್ನಾಸೆಯನು
 ಬಿಟ್ಟುಬಿಡಿರಿ ನಾ ಬಾಳೆನು ಎಂದಳು ;
 ಕೊಂಡುಹೋದ ಪಾಷಂಡರ ಹೆಸರ
 ಭಂಡ ಮಕ್ಕಳ ಗುರುತನು ಹೇಳಿ
 ಎಂಜಲಾದ ಈ ಮೆಯ್ಯನು ನಾನು
 ಸಂಜೆಯ ಮೊದಲೇ ಸುಡಬೇಕೆಂದಳು ;
 ಕೆಡಕರ ಚಾತಿಯ ಕೇಳುವೆಯಣ್ಣ;
 ಬಿಡು ಬಿಡು ಕೆಡಕಿಗೆ ಜಾತಿಯೆ ಮತವೆ?
 ಹುಟ್ಟಿದ ಜಾತಿ ಮತಗಳ ಹೆಸರು
 ಕೆಟ್ಟ ಚೇತನಕೆ ಸಲ್ಲವು ಅಣ್ಣಾ.
ಮಲ್ಲಮ್ಮಾ ಮಲ್ಲಮ್ಮಾ
ಇಲ್ಲವಾದೆಯಾ ಮಲ್ಲಮ್ಮಾ,

೪೫