ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

 ಆಗ ಮಲ್ಲಮ್ಮ ಹಿರಿಯರೆಲ್ಲರಿಗು
 ಕೈಗಳ ಮುಗಿದು ಅಪ್ಪಣೆ ಕೇಳಿ,
 ಬರುವೆನೆಂದು ಗೆಳತಿಯರಿಗೆ ಹೇಳಿ
 ಮರುಗಬಾರದೆಂದೆಲ್ಲರ ಬೇಡಿ,
 ಗಂಡ ಬಳಿಯೊಳಿರೆ ಅವನ ಕಾಲಿಗೆ
 ಮಂಡೆಯನಿಟ್ಟು ಮುತ್ತು ಕೊಟ್ಟು,
 ಅಳುತಿಹ ಕಂದನ ಸನಿಯಕೆ ಹೋಗಿ
 ಒಲವಿನಿಂದವನ ಮುದ್ದಿಸಿ ಬಂದು,
 ವೆಂಕಟರಮಣಾ ಸಿರಿಮಲ್ಲೇಶಾ
 ಬಿಂಕದ ದೇವರೆ ಸಲಹಿರಿ ಎಂದು,
 ಕೊಕ್ಕರೆ ನೀರನು ಹೊಗುವಂದದಲಿ
 ಹೊಕ್ಕಳು ಬೆಂಕಿಯ ಹೊಕ್ಕರಣೆಯನು.
ಮಲ್ಲಮ್ಮಾ ಮಲ್ಲಮ್ಮಾ
ಮಲ್ಲಿಗೆ ಬೆಂದೆಯ ಮಲ್ಲಮ್ಮಾ.

 ಅಣ್ಣ ಇನ್ನು ನಾನೇನ ಹೇಳಲಿ
 ಅನ್ನೆಯವಾಯಿತು ಎನಿಸುವುದೊಮ್ಮೆ ;
 ಅಂಕೆಯ ಬಾಳನು ನೆನೆವೆನೆ ಮರಳಿ
 ಬೆಂಕಿ ಬೆಂಕಿಯನ್ನು ಸೇರಿತು ಎಂಬೆನು ;
 ಹೇಳುತ ನಾನು ನಡುಗುವೆನಿಂದು ;
 ಕೇಳಣ್ಣ ಅವಳು ನಡುಗಳು ಅಂದು ;
 ನೊಂದು ಹೋಯಿತು ನಂಟು ಎಲ್ಲವೂ

೫೨