ಈ ಪುಟವನ್ನು ಪ್ರಕಟಿಸಲಾಗಿದೆ
ಒಂದು ಸಂಜೆ

ಸಂಜೆಯಾಗಸದಾಳವನು ಚೆಲ್ವ, ಲೇಪದೊಲು
ತಿಳಿಯ ನೀಲದ ವರ್ಣ ಸವರಿರುವುದು ;
ರಂಜಿಸುತಲಿಹುದು ನೀಲದ ಪಟದಿ ಚಿತ್ರವೆನೆ
ಎಲೆಯಲುಗದೊಲು ನಿಂತ ಮರದ ಸಾಲು,

ಜೇಯೆಂದು ಚಿಟ್ಟೆ ಬೇಲಿಯಲಿ ಮೊರೆಯುತಲಿಹುದು ;
ಮಳೆರಾಯ ಬಾರೆಂಬ ಊರ ಕೂಗು
ಗಾಯನದಿ ಕಳವಳವ ಮರೆಸಿ ಕೇಳುತಲಿಹುದು ;
ಇಳಿಯುತಿಹುದಿಳೆಗೆ ಹುಣ್ಣಿಮೆಯ ಇರುಳು.

ದೇವಾಲಯದ ಓಲಗದ ಮಂಜುಳಾರಾವ
ತೇಲುತಿಹುದೆರಿನಲಿ; ನಭವ ನೀಲ,
ಆವೇಶ ಕವಿಯ ಗೆಲುವಂತೆ ಗೆಲುತಿರೆ ಇನಿಸು
ನೀಲಿಮೆಯನಾಂತುದು ಶರಚ್ಚಂದ್ರಿಕೆ.


_____

೫೮