ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯತು ಭಗರ್ವಾ ಚೆರಚಕ್ರವರ್ತಿ (ಪ್ರಥಮಖಂಡ) ಒಂದನೆಯ ಅಧ್ಯಾಯ ಅಮರಾವತಿಯೆಂಬ ನಗರದಲ್ಲಿ ಅಮರನಾಥನೆಂಬ ಹಣ ಗಾರನಿದ್ದನು, ಅವನು ವಿಶೇಷವಾಗಿ ಹಣದ ಲೇವಾದೇವಿ ಯನ್ನು ಮಾಡುತಿದ್ದನು, ಕೋಟ್ಯಂತರ ಜನಗಳು ಈತನ ಬಲೆಗೆ ಬಿದ್ದು ತಮ್ಮ ತಮ್ಮ ದೇಹವನ್ನೇ ಮಾರಿಬಿಟ್ಟಿದ್ದ ರು. ಅಮರನಾಥನು ಈ ವ್ಯಾಪಾರದಿಂದ ಕುಬೇರನಾಗಿ ಹೋಗಿ ದನು, ಹಣಗಾರನಾದ ಅವರನನ್ನು ಕಂಡರೆ ಸಮಸ್ತರೂ ಹೆದರಿಹೆದರಿ ಸಾಯುತ್ತಿದ್ದರು. ಇದರ ಮೂಲತತ್ವವೇ ನೆಂದರೆ-ಈತನಲ್ಲಿ ವಿಶೇಷವಾಗಿ ಹಣವಿದ್ದಿತು. ಈತನಿಗೆ ವಿಶ್ವಾಸಕ್ಕೆ ಪಾತ್ರನಾದ ಶರಚ್ಚಂದ್ರನೆಂಬ ಯುವಕನೊಬ್ಬನು ಕೆಲಸಕ್ಕೆ ಇದ್ದನು. ಅವರನಾಥನು ಶರ ಚಂದ್ರನನ್ನು ತನ್ನ ಪ್ರಾಣಕ್ಕಿಂತಲೂ ಅಧಿಕವಾಗಿ ಪ್ರೀತಿ ಸುತ್ತಿದ್ದನು, ಶರಚ್ಚಂದನ ಅಮೂಲ್ಯವಾದ ಗುಣಗಳೇ ಅವನ ವಿಶ್ವಾಸಕ್ಕೆ ಮೂಲಕಾರಣಗಳಾಗಿದ್ದವು. ಹೀಗಿರಲೊಂದು ದಿನ ಅಮರನಾಥನು ತನ್ನ ಅಂಗಡಿ