ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀಮತ-ಬೇಸರದಿಂದ) ನಾನು ಕೇಳುವುದಕ್ಕಾಗಿಯೇ ಸಿದ್ದನಾಗಿರುವೆನು ; ಹೇಳುವುದಕ್ಕೇನು ಅಡ್ಡಿಯಿರುವುದು ? ಅರಿಂದಮ-ತಾವು ಬೇಸರ ಪಡಬಾದು, ತಮ್ಮ ವಿಷಯ ವನ್ನು ನಾನು ಮೊದಲೇ ಕೇಳಿ, ನಿಮ್ಮಲ್ಲಿ ಸಹಾಯವನ್ನು ಬೇಡುವು ದಕ್ಕಾಗಿ ಬಂದಿರುವೆನು, ನನ್ನಲ್ಲಿ ನೀವು ವಿಶ್ವಾಸಘಾತುಕತೆಯನ್ನು ತೋರಿಸಬಾರದು. ಜೀವ-( ಹುಬ್ಬು ಗಂಟಿಕ್ಕಿ) ಆಶ್ರಿತರಲ್ಲಿ ವಿಶ್ವಾಸಘಾ ತುಕತೆಯೆಂದರೇನು ? ಹೇಳಣಾಗಲಿ. ಅರಿಂದಮು ಸಪ್ರಯೋಜನವಾಗುವುದಾದರೆ, ವಿಶ್ವಾಸಘಾ ತುಕತೆಯು ದೊಡ್ಡ ವಿಷಯವಲ್ಲ ; ಇದನ್ನು ತಾವು ಚೆನ್ನಾಗಿಯ ಬಲ್ಲಿರಿ. - ಜಿಮತಹಾಗೆಂದರೇನು ? ಅರಿಂದಮಹೇಳುವೆನು. ತಾವು ರತ್ನಾಕರದಲ್ಲಿ ದ್ರವ್ಯ ವನ್ನು ಸಂಪಾದಿಸುವುದಕ್ಕೋಸ್ಕರ, ಯಾವ ಒಲೆಯನ್ನು ಬೀರಿರು ಏರೋ, ಅದು ನಿಮಗೆ ಗೊತ್ತಿಲ್ಲವೆ ? ಅವರನಾ ಧನ ಸಸ್ಥಾಪಹರ ಇವಲ್ಲಿ ನೀವು ತೋರಿಸುತ್ತಿರುವ ಇಂದ್ರಜಾಲದ ವಿದ್ಯೆಯನ್ನು ಯಾರು ತಾನೇ ಕಾಣರು. ನಿಮ್ಮ ಬಲೆಯಲ್ಲಿ ಯಾರುಯಾರು ಸಿಕ್ಕಿಕೊಂಡು ನರಳುತ್ತಿರುವರೋ ನಾ ಕಾಣೆನು. ಜಿಮತನು ಅರಿಂದಮನ ಮರ್ಮಭೇದಿಯಾದ ಮಾತನ್ನು ಕೇಳಿ ಚಕಿತನಾಗಿ, ಎರಡು ಮೂರು ಹೆಜ್ಜೆ ಹಿಂದಕ್ಕೆ ಹೋಗಿ ನಿಂತ ಕೊಳ್ಳಲು, ಅರಿಂದಮನು ಮಂದಹಾಸವನ್ನು ತೋರ್ಪಡಿಸಿ-ತಾವು ಹೆದರಬೇಕಾದ್ದಿಲ್ಲ. ನೀವು ಯತ್ನ ವಿಾರಿ ಸಾಹಸ ಮಾಡಿರುವಿರಿ. ಮೊದಲು ನನ್ನ ವಿಷಯವನ್ನು ಕೇಳಿ, ಬಳಿಕ ಓಡಿಹೋಗಲು ಯತ್ನ ಮಾಡಿರಿ, ಎಂದನು.