ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಜೀಮ ತನು ಯತ್ನವಿಲ್ಲದೆ -ಅದೇನು ? ಎಂದನು. ಅರಿಂದಮ-ತಾವು ಅಮರನಾಥನ ಒಂದು ಲಕ್ಷ ರೂಪಾಯಿ ಗಳನ್ನು ಅಪಹರಿಸುವುದಕ್ಕೆ ಮಾಡಿದ ಉಪಾಯವನ್ನು ರಾವರತ್ನನು ನನ್ನ ಮುಂದೆ ವಿಶದವಾಗಿ ಹೇಳಿದನು.

  • ಜೀಮತನು ಈ ಮಾತನ್ನು ಕೇಳಿದ ಕೂಡಲೆ ಅಲ್ಲಿ ನಿಲ್ಲದೆ ಮನೆಯೊಳಗೆ ವೇಗವಾಗಿ ಪಲಾಯನವಾದನು, ಅರಿಂದಮನೂ ಕೊಂಚ ಯೋಚಿಸದೆ ಅವನ ಹಿಂದೆಯೇ ಓಡಿಹೋದನು.

ಜಿಮತನ ಮನೆಯು ಘೋರಾಂಧಕಾರದಿಂದ ತುಂಬಿಹೋ ಗಿದ್ದಿತೆಂದು ನಾವು ಮೊದಲೇ ತಿಳಿಸಿರುವೆವು. ಇಂತಹ ಮನೆಯಲ್ಲಿ ಜೀವತನು ಕ್ಷಣಮಾತ್ರದಲ್ಲಿಯೇ ಮಾಯವಾಗಲು, ಹಿಂದೆಯೇ ಓಡಿಬರುತಿದ್ದ ಅರಿಂದಮನಿಗೆ, ಆ ಅಂಧಕಾರದಲ್ಲಿ ಅದು ಗೊತ್ಯಾಗ ಲೆ ಇಲ್ಲ. ಎಲ್ಲೆಲ್ಲಿ ಹೋಗಿನೋಡಿದರೂ ದಾರಿಗಾಣದೆ ತಲ್ಲಣಿಸುತ್ತಿ ರುವ ಅರಿಂದಮುನಿಗೆ, ತಾನು ಮತ್ತೆ ಬಲೆ ಯಲ್ಲಿ ಸಿಕ್ಕಿಬಿದ್ದೆನೆಂಬುದು ಮಾತ್ರ ಗೋಚರಕ್ಕೆ ಒಂದಿತು. ಅರಿಂದಮನು ದಿಕ್ಕು ತೋರದೆ ಯಾವ ಕೋಣೆಯಲ್ಲಿ ಸಿಂತಿ ದ್ದನೋ, ಅದು ಕಾರ್ಗತ್ತಲೆಗೆ ತರುಮನೆಯಾಗಿದ್ದಿತು. ಅರಿಂದ ಮನು ಅಲ್ಲಿರುವುದು ಸರಿಯಲ್ಲವೆಂದು ಬಂದ ದಾರಿಯನ್ನು ಹಿಡಿದು ಹಿಂದಿರುಗಲು ಯತ್ನ ಮಾಡಿದನು, ಆದರೆ ಕತ್ತಲೆಯಲ್ಲಿ ಆ ದಾರಿಯೆ ಗೊತ್ತಾಗಲಿಲ್ಲ. ಬಳಿಕ ಅರಿಂದಮನು ಶೂನ್ಯಮನಸ್ಕನಾಗಿ ನಿಂತಿ ರಲು, ತಾಸಿದ್ದ ಪಕ್ಕದ ಕೋಣೆಯಲ್ಲಿ ಜೀವತನು ಯಾರೊಡ ನೆಯೋ ಮಾತನಾಡುತಿದ್ದಂತೆ ಕೇಳಿ ಬಂದಿತು. ಅದೇನೆಂದರೆ :- ಜೀಮತ-ಸಿಡಿದೆಯ, ಎಂತಹ ಭಯಂಕರವಾದ ವಿಷ ಯ ! ನನ್ನೊಡನೆ ಮಾತನಾಡುತಿದ್ದ ವನು ತನ್ನ ವಿಪತ್ತನ್ನು ಹೇಳುವ ವ್ಯಾಸದಲ್ಲಿ ನನ್ನ ಮರ್ಮವನ್ನೇ ಕತ್ತರಿಸಲಾರಂಭಿಸಿದನು.