ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪರಿಚಿತ_ಏನು ! ಆತನು ಓಡಿಹೋದನೆ ! ಅಮರನಾಥಅಪರಿಚಿತನ ಈ ಮಾತುಗಳನ್ನು ಕೇಳಿ ವಿಸ್ಮಿತನಾಗಿ - ಆತನು ನನ್ನಿಂದ ವಿರಾಮವನ್ನು ಪಡೆದು ಮಧುವನಕ್ಕೆ ಹೋಗಿರುವನು. ಅಲ್ಲಿ ಆತನ ಅಣ್ಣನಿಗೆ ಆರೋ ಗ್ಯವಿಲ್ಲವಂತೆ. ಆದಕಾರಣ ಆತನನ್ನು ನೋಡಿಕೊಂಡು ಬರ ಲು ಹೋಗಿರುವನು, ಎಂದನು. ಅಪರಿಚಿತ-ಸರ್ವನಾಶ ! ಸರ್ವನಾಶ ! ಓಡಿಯೇ ಹೋದನು, ಮಧುವನವಾವುದು? ಆತನ ಅಣ್ಣನೆಂದರೇನು? ಎಲ್ಲವೂ ಸುಳ್ಳು. ಆತನು ಓಡಿಯೆ ಹೋದನು. ಆಮಗ ತಾವು ಮಾತನಾಡುವುದೇನು? ತಮಗೆ ಬ ದ್ವಿಯು ಸ್ವಾಧೀನದಲ್ಲಿರುವಂತೆ ಕಾಣುವುದಿಲ್ಲ.

  • ಅಪರಿಚಿತ-ನನ್ನ ಬುದ್ದಿಯು ಸ್ವಾಧೀನದಲ್ಲಿಯೇ ಇ ರುವುದು, ತಾವು ಮಾತ್ರ ಮೋಸಹೋಗಿರುವಿರಿ, ಆತನು ತಮ್ಮನ್ನು ವಂಚಿಸಿ ಪಲಾಯನವಾಗಿರುವನ್ನು ಆತನು ಹಿಂ ದಿರುಗಿ ಬರುವ ಸಂಭವವಿಲ್ಲ. ತಾವು ಆತನ ಆಶೆಯನ್ನೇ ಬಿ ಡುವುದು ಒಳ್ಳೆಯದು, ಆತನು ತನ್ನನ್ನು ನಂಬಿಸಿ ಮೋಸ ಮಾಡಿ ಓಡಿಹೋಗಿರುವನು.

೧. ಎರಡನೆಯ ಅಧ್ಯಾಯ. - ಅಮರನಾಥನು ಅಪರಿಚಿತನ ಮಾತನ್ನು ಕೇಳಿ ಮ ಕನಂತಾಗಿಬಿಟ್ಟನು, ಆತನ ಮುಖವು ಬಾಡಿಹೋಯಿತು. ಕ್ಷಣಕಾಲವೆನ್ನುವುದರೊಳಗಾಗಿಯೇ ಅವುರನ ಮುಖದಲ್ಲಿ ಕೋಪವು ತಲೆದೋರಿ ಕಣ್ಣುಗಳಲ್ಲಿ ಕಿಡಿಗಳು ಸುರಿಯಲಾ