ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ರಾಮನಾರಾಯಣನು ಈ ಮಾತನ್ನು ಕೇಳಿ ರೋಪ ಕಷಾಯಿತಲೋಚನನಾಗಿ, ಅರಿಂದಮನನ್ನು ರಪ್ಪೆ ಹಾಕದೆ ನೋಡುತ್ತಾ-ಹಾಗಾದರೆ ನಾನೇ ಈ ಕೆಲಸವನ್ನು ಮಾಡಿದವ ನೆಂದು ತಾವು ಹೇಳುವಂತಿದೆ, ಎಂದನು. ಅರಿಂದಮ-ನಾನು ತಮ್ಮ ಮೇಲೆ ತಪ್ಪನ್ನು ಹೊರಿಸ ಬೇಕೆಂದಿಲ್ಲ. ತಾವೇ ತಪ್ಪಿಗೆ ಸಿಕ್ಕಿಕೊಳ್ಳುವಿರಿ, ಆತನು ತ ಮಗೆ ಹಣ ಕೊಟ್ಟಿರುವನು; ತಾವೇ ಹಣವನ್ನು ತೆಗೆದುಕೊಂ ಡಿರುವಿರಿ, ಇಷ್ಟು ಮಾತ್ರ ನಿಜವೆಂದು ನಾನು ಕಂಡುಹಿಡಿದಿ ರುವೆನು, ಈ ಆಧಾರದ ಮೇಲೆಯೇ ನಾನು ಕೆಲಸಮಾಡ ಬೇಕಾಗಿರುವುದು, ನಾನು ಈ ಮೊಕದ್ದಮೆಯನ್ನು ನ್ಯಾಯ ಸ್ಥಾನಕ್ಕೆ ಕಳುಹಿಸಿಕೊಡುವೆನು. ಅಲ್ಲಿ ತಾವು ಹಣ ತೆಗೆದಿ ರುವದೂ ಇಲ್ಲದ ಇತ್ಯರ್ಥವಾಗುವುದು, ಬಳಿಕ ಯಾರು ಅಪರಾಧಿಯೋ ತಾನಾಗಿಯೇ ಗೊತ್ತಾಗುವುದು, ಇದಕ್ಕಾಗಿ ನಾವು ಈಗಿನಿಂದಲೂ ವಿಚಾರವಾಡಬೇಕಾದ ಕಾರಣವಿರು ವುದಿಲ್ಲ. ಹಿ ಒಂಬತ್ತನೆಯ ಅಧ್ಯಾಯ. ರಾಮನಾರಾಯಣನು ಯಾವ ಮಾತನ್ನೂ ಆಡಲಿಲ್ಲ. ಪತ್ತೇದಾರನು ಹೇಳಿದ ಮಾತನ್ನು ಕೇಳಿದ ಕೂಡಲೇ ಅವ ನಿಗೆ ಸಂಶಯಕ್ಕಿಟ್ಟಿತು. ಈ ವಿಲಕ್ಷಣವಾದ ಘಟನೆಯಿಂದ, ಅವನ ಹೃದಯದಲ್ಲಿ ನಾನಾ ಭಾವಗಳು ಏಕಾಧಿಪತ್ಯವಾಡ ಲಾರಂಭಿಸಿದವು, ರಾಮನಾರಾ ಗುಣವು ದಿಕ್ಕು ತೋರದ ವನಾಗಿ ಯಾವ ಮಾತನ್ನೂ ಆಡದೆ ಸುಮ್ಮನಿದ್ದು ಬಿಟ್ಟನು.