ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4# ಅನುರ-ಬರೆಯಲ್ಪಟ್ಟಿದ್ದು. ಅರಿಂ-ತಾವು ಸಮಾನವಾಗಿ ಹೇಳುವಿರಾ? ಆಮರ-ಆತನ ಅಕ್ಷರವಿದ್ದ ಹಾಗೆಯೇ ಇರುವುದು. ಅರಿಂ-ಮಣಿಶಂಕರ ರಾಮರತರೆಂಬುವರೇನಾದ ರೂ ಈ ಕೆಲಸದಲ್ಲಿ ಒಳಸಂಚು ಆಗಿದ್ದರೂ ಆಗಿರಬಹುದು. ಅದನ್ನು ನಾನು ತಿಳಿಯಲು ಯತ್ನ ಮಾಡಬಹುದೇ? - ಅಮರ-ಅಗತ್ಯವಾಗಿ ಈ ಗುಮಾಸ್ತರುಗಳಲ್ಲಿ ಯಾರು ದೋಷಿಗಳೋ ಯಾರು ಬಲ್ಲರು, ತಪ್ಪು ಮಾಡಿದವನು ಸಿಕ್ಕಲಿ. ತಪ್ಪಿಗೆ ಶಿಕ್ಷೆಯಾಗಲಿ, ಆದರೆ ಮಾತ್ರ ಅಪರಾಧಿಯು ನಿರಪ ರಾಧಿಯಾಗಬಾರದು; ನಿಲಸಾಧಿಯ, ಅಪರಾಧಿಯಾಗ ಬಾರದು. ಅರಿಂ , ತಾವು ಹೇಳುವಂತೆಯೇ ಆಗಲಿ, ಈ ದಿನ ತಾವು ದೀನೇಂದ್ರಚಂದ್ರ ಮತ್ತು ರಾಮನಾರಾಯಣ ಇವರು ಹೊರತಾಗಿ ಹುತ್ತಾರನ್ನಾದರೂ ಕಂಡು ಮಾತನಾಡಿದಿರಾ? ಅಮರನಾಥನು ಒಂದು ಕ್ಷಣಕಾಲ ಯೋಚನೆಯಲ್ಲಿ ಮಗ್ನನಾದನು. ಹೌಜಿನ ಕಟ್ಟೆಯನ್ನಿಟ್ಟುಕೊಂಡಿರುವ ಜೀ ಮತವಾಹನನಿಗೂ ತನಗೂ ನಡೆದ ಸಂಭಾಷಣೆಯನ್ನು ಅರಿಂದಮನಿಗೆ ತಿಳಿಸಲು ಆತನಿಗೆ ಆತ್ಮನಿರಲಿಲ್ಲ ಆದರೆ ತನಗೆ ಸಹಾಯನಾಗಿ ಬಂದಿರುವ ಪತ್ತೆದಾರನಾದ ಅರಿಂದ ವನಿಗೆ ಆ ಸಂಗತಿಯನ್ನು ತಿಳಿಸದಿರುವುದು ಅಧರ್ಮವೆಂದು ತಿಳಿದು ಸಮಸ್ತವನ್ನೂ ಹೇಳಿಬಿಟ್ಟನು. ಹತ್ತನೆಯ ಅಧ್ಯಾಯ. ಅರಿಂದಮನು ನಡೆದ ಸಂಗತಿಯೆಲ್ಲವನ್ನೂ ಕೇಳಿ-ಈ