ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ઉમ ತಾವು ಯಾವ ಕೆಲಸವನ್ನು ನಿಮಿತ್ತ ಮಾಡಿಕೊಂಡು ನನ್ನಲ್ಲಿಗೆ ದಯಮಾಡೋಣಾಗಿದೆಯೋ ತಿಳಿಸಬೇಕು, ನಾನು ಸಿದ್ದ ನಾಗಿರುವೆನು, ಎಂದು ಹೇಳಿದನು. ಅರಿಂದಮನು ಕೋಣೆಯೊಳಗೆ ಹೋಗಿ ಒಂದು ಆಸ ನದ ಮೇಲೆ ಕುಳಿತುಕೊಂಡು ಒಂದು ಕ್ಷಣಕಾಲ ಸುತ್ತಲೂ ನೋಡಿ ಅಲ್ಲಿ ತಾವಿಬ್ಬರು ಹೊರತಾಗಿ ಮಾರೂ ಇಲ್ಲದಿ ರುವುದನ್ನು ಕಂಡು ಜೀಮೂತವಾಹನನನ್ನು ನೋಡಿ-ದೇವರು, ತಮ್ಮ ಕೆಲಸಕ್ಕೆ ನಾನು ಕುಂದನ್ನುಂಟುಮಾಡಲಿಲ್ಲವ? ಎಂದು ಕೇಳಿದನು. ಜೀವತಇಲ್ಲ, ಇಲ್ಲ, ತಾವು ಈ ರೀತಿಯಾಗಿ ತಿಳಿಯಕೂಡದು ಅರಿಂ-ತಮ್ಮೊಡನೆ ಏಕಾಂತವಾಗಿ ಆರಾರೋ ಮಾ ತನಾಡಿಕೊಂಡಿರುವರೆಂದು ತಮ್ಮ ಮನೆಯ ದಾಸಿಯು ನನಗೆ ತಿಳಿಸಿದ್ದಳಾದಕಾರಣ ನಾನು ತಮ್ಮನ್ನು ಈ ರೀತಿಯಲ್ಲಿ ಪ್ರ ಶೈಮಾಡಬೇಕಾಯಿತು. ಜೀವತ-ಅವಳು ಮೊದಲೇ ದಾಸಿ, ಚಾಕರರಸ ಭಾವವೇ ಹೀಗಿರುವದು ಹೊಸಬರಣ ರಾದರೂ ಬಂದರೆ ಚಾಕರ ಗೆ ಇಲ್ಲದ ಬಿಗುಮಾನ ಬರುವುದು ತಮಗೆ ಗೊತ್ತಿ ಲ್ಲದೇ ಇಲ್ಲ, ಆಕೆಯು ಏತಕ್ಕೆ ಹಾಗೆ ಹೇಳಿದಳೋ ನನಗೆ ಗೊತ್ತಿಲ್ಲ, ಅಂತೂ ಆಕೆಯು ಸುಳ್ಳು ಹೇಳಿರಬೇಕು. ತೀಹ್ಮಬುದ್ದಿ ಯುಳ್ಳ ಅರಿಂದಮನು ದಾನಿಯು ಹೇಳಿ ದ್ದು ಸುಳ್ಳೋ, ಯಜಮಾನನು ಹೇಳುವುದು ಸುಳ್ಳೋ ಎಂ ಬುದನ್ನು ತನ್ನ ಮನದಲ್ಲಿಯೆ ನಿರ್ಧರಿಸಿಕೊಂಡು,-ಆಮಾ ಕು ಹೋಗಲಿ, ಪಕೃತ ನಾನು ತಮ್ಮಲ್ಲಿ ಒಂದು ಕೆಲಸಕ್ಕಾಗಿ