ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಒಂದು ಧನಿಯು ಕೇಳಬರಲು, ಅರಿಂದಮನು ಸಮೀಪದಲ್ಲಿ ದ್ದ ಒಂದು ಬಾಗಿಲಬಳಿಯಲ್ಲಿ ನಿಂತು ಆಲಿಸಿ ಕೇಳತೊಡಗಿ ದನು. ಜೀವ ಇತನು ಮೃತ್ಯುಂಜಯನನ್ನು ಕುರಿತು-ಅಯ್ಯಾ! ಆ ಆಗಂತುಕನು ನಿನ್ನ ವೇಷದಲ್ಲಿ ಸಂದೇಹ ಪಟ್ಟವನಾದರೂ, ನೀನೇ 'ಮರತ್ನನೆಂದು ಆತನು ತಿಳಿಯಲಾರದೇ ಹೋದನು, ಎಂದನು, ಇದನ್ನು ಕೇಳಿದ ಕೂಡಲೆ ಅರಿಂದಮನಿಗಿದ್ದ ಸಂ ಶಯವು ಪೂರ್ತಿಯಾಗಿ ನಿವೃತ್ತಿಯಾಯಿತು. ಶರಶ್ಚಂದ್ರನು ತಪ್ಪಿತಸ್ಥನಲ್ಲವೆಂಬುದಕ್ಕೆ ಅನೇಕ ಪ್ರಮಾಣಗಳು ಒದಗಿದವು. ಆತನ ಪ್ರಕೃತದ ಉದ್ದೇಶವು ಬೇರೆಯಾಗಿದ್ದಿತು. ಶರಚ್ಚಂ ದ್ರನ ಸ್ಥಿತಿಗತಿಗಳನ್ನು ವಿಚಾರಿಸುವುದಕ್ಕೆ ಆತನು ಜೀವ ತನ ಮನೆಗೆ ಬಂದುದು, ಅಲ್ಲಿ ರಾಮರತ್ನನು ವೇಷಾಂತರ ವನ್ನು ಧಾರಣವಾಡಿಕೊಂಡು ಜಿಮತನೊಡನೆ ಗೋಪ್ಪ ವಾಗಿ ವ್ಯವಹರಿಸುತಿದ್ದನು. ಇದನ್ನು ನೋಡಿದ ಕೂಡಲೆ ಅಮರನಾಥನ ಅರ್ಥಾಪಹರಣದಲ್ಲಿ ರಾಮರತ್ನನು ಬಹುತರ ವಾಗಿ ಕಾರಣನಾಗಿರಬೇಕೆಂದು ಅರಿಂದಮನ ಮನದಲ್ಲಿ ವಿಚಾ ರಕ್ಕಿಟ್ಟಿತು. ನ್ಯಾಯಪರನೂ, ಧರ್ಮೈಕದೃಷ್ಟಿಯುಳ್ಳವನೂ ನೈಜವಾದ ರೂಪವನ್ನು ಬದಲಾಯಿಸಿಕೊಂಡು ತಿರುಗಬೇಕಾ ದುದಿಲ್ಲ, ಯಾವನ ಹೃದಯದಲ್ಲಿ ಕಳಂಕವು ಅಂಕುರಿಸುವು ದೋ ಅಂತಹವನು ಕಳಂಕವನ್ನು ಮರೆಮಾಚುವು ದಕ್ಕಾಗಿ ಇಲ್ಲದ ವೇಷವನ್ನು ಧಾರಣಮಾಡಬೇಕು, ರಾವತ್ರನು ವೇಷವನ್ನು ಧಾರಣಮಾಡಿರುವುದರಿಂದ, ಅವನಲ್ಲಿ ಗುರುತರ ವಾದ ದೋಷವಿದ್ದಿರಬೇಕು ಅದನ್ನು ಯಾರು ತಾನೆ ಇಲ್ಲ ವೆಂದು ಅಪರೂಪವಾಡುವರು, ಪ್ರತ್ಯಕ್ಷವಾದರೂ ಪರೀಕ್ಷಿಸಿ ನೋಡಬೇಕೆಂದು ಶಾಸ್ತ್ರವಿರುವುದರಿಂದ ದುಡುಕುವುದು