ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫v ಅರಿಂದಮನು ಮತ್ತೆ ಪ್ರಶ್ನೆ ಮಾಡಲಿಲ್ಲ, ಏಕೆಂದರೆಪ್ರಶ್ನೆ ಮಾಡಲು ಕಾಲವಿರಲಿಲ್ಲ, ಹೆಂಗಸು ಕೊಂಡದೂರ ಹೋಗಿ ಹಿತ್ತಲ ಬಾಗಿಲನ್ನು ನೋಡಿ-(ಕಂಪಿತವಾದ ಸ್ವರ ದಿಂದ) ಸುಮಿ, ಈ ಬಾಗಿಲ ಹಾಕಿದೆ. ತೆರೆಯಲಾಗು ವುದಿಲ್ಲ. ಈಗ ನಾನೇನು ಮಾಡಲಿ ? ತಮ್ಮನ್ನು ನಾನೆಲ್ಲಿಗೆ ಕರೆದುಕೊಂಡು ಹೋಗಲಿ, ಕೆಲಸವು ಬಹಳ ತೊಂದರೆ ಗಿಟ್ಟಿತು, ಎಂದಳು. - ಅರಿಂದಮು-ಬಾಗಿಲು ಬಂದಾದ ಮಾತ್ರಕ್ಕೆ ಮನೆ ಯಿಂದ ಹೊರಗೆ ಹೋಗಲು ಆಗಲಾರದೆ? ಹೆಂಗಸು-( ಉತ್ತರವಿಲ್ಲ) ಅರಿಂದಮನು ಖಿನ್ನನಾಗಿ ಬಾಗಿಲನ್ನು ಒದೆದು ನೋ ಡಿದನು, ಬಾಗಲಿಗೆ ಹೊರಗಡೆಯಿಂದ ಚಿಲುಕ ಹಾಕಿದ್ದಿತು. ಅರಿಂದಮನು ದಿಕ್ಕು ತೋರದೆ ರೋಪಪರವಶನಾಗಿ ಕಣ್ಣು ಗಳಿಂದ ಕೆಂಡಗಳನ್ನೇ ಸುರಿಸುತ್ತಾ ಹೆಂಗಸನ್ನು ಕುರಿತು ಹೊರಗೆ ಹೋಗಲು ನಿನಗೆ ದಾರಿ ಗೊತ್ತಿದ್ದರೂ, ನನಗೆ ನೀನು ತೋರಿಸಲೊಲ್ಲೆ, ನನ್ನನ್ನು ಸಂಕಟಕ್ಕೆ ಈಡಮಾ ಡಬೇಕೆಂದು ನಿನ್ನ ಅಭಿಪ್ರಾಯವಿರುವ ಹಾಗೆ ತೋರುತ್ತದೆ. ಈ ಸಮಯದಲ್ಲಿ ನೀನು ನನಗೆ ಸರಿಯಾದ ದಾರಿಯನ್ನು ತೋರಿಸು, ಅದರಿಂದ ನಿನಗೆ ಪ್ರಯೋಜನವ್ರಂಟು, ಎಂದು ಸುರಿದನು. - ಹೆಂಗಸು ಖಂಡಿತವಾಗಿಯೂ ನನಗೆ ಗೊತ್ತಿಲ್ಲ ಯಾವ ದಿನವೂ ಈ ಬಾಗಿಲಿಗೆ ಹೊರಗಿನಿಂದ ಚಿಲುಕ ಹಾಕಿ ದಿಲ್ಲ, ಈ ದಿನ ಮಾತ್ರ ಬಾಗಿಲು ಬಂದಾದದ್ದು ನೋಡಿದರೆ ನನಗೇ ಆಶ್ಚರ್ಯವಾಗುವುದು. ಗಿ