ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܧܦܘ MMM FAN ಜಗನ್ನೋಹಿನಿ. ಬಗೆಯ ಹೂವಿನ ಗಿಡಗಳಿಗೆ ಹೂಜಿಗಳಿಂದ ನೀರೆರೆಯುತಿದ್ದರು. ಈವೇಳೆಯಲ್ಲಿ ರಾಣಿವಾಸದ ಪರಿಚಾರಿಕೆಯರು ಒಬ್ಬೊಬ್ಬರಾಗಿ ಹೊರಹೊರಟು ಅಲ್ಲಲ್ಲಿ ಮರೆಮರೆಯಾಗಿ ನಿಂತು ಗುಸುಗುಸನೆ ಏನೋ ಮಾತನಾಡಿಕೊಳ್ಳುತಿದ್ದರು. ಅಷ್ಟರಲ್ಲಿ ಮಹಾರಾಣಿಯ ಕಾಸಾ ಪರಿವಾರದವರಲ್ಲಿ ಒಬ್ಬಳು ಉಪ್ಪರಿಗೆಯ ಸೋಪಾನಮಾರ್ಗದಿಂದ ಸರಸರನೆ ಕೆಳಕ್ಕೆ ಇಳದು ಮಹಾದ್ವಾರದ ಹತ್ತಿರಕ್ಕೆ ಬಂದಳು. ಅಲ್ಲಿ ಗುಂಪುಗಟ್ಟಿ ಕೊಂಡು ಮಾತನಾಡುತಿದ್ದ ಪರಿಚಾರಿಕೆ ಯರು ಅವಳನ್ನು ಕಂಡು ತಟ್ಟನೆ ಮುಂದರಿದು ಅವಳ ಹತ್ತಿರಕ್ಕೆ ಹೋಗಿ ಕೌತುಕದಿಂದ, 'ಎಲೇ, ಮನ್ನಾರಿಕೆ, ಅದೇನೇ ನೀನಿಂದು ಕಣ್ಣಿ ದಿರಿಗೆ ನಿಂತಿರುವ ನಮ್ಮನ್ನು ಕಂಡೂ ಕಾಣದಹಾಗೆ ಮಾತನಾಡದೆ ಹೋ ಗುತ್ತಿರುವೆ ? ಕೊಂಚ ನಿಲ್ಲಬಾರದೆ ?” ಎಂದರು. ಮನ್ದಾರಿಕೆ:- ಅವರನ್ನು ಕಣ್ಣೆತ್ತಿ ಕೂಡಾ ನೋಡದೇ, « ಕೊಂಚತಾಳಿ; ಕೊಂಚತಾಳಿ 'ಎಂಬಂತೆ ಎಡಗೈಯಿಂದ ಸೈಗೆಮಾಡಿ, ನಡಾಕಟ್ಟಿಕೊಂಡು ನಿಂತಿದ್ದ ಕಂಚುಕಿಯನ್ನು ನೋಡಿ, “ ಎಲೈ, ನೀನು ಜಾಗ್ರತೆಯಾಗಿ ಅರಮನೆಯ ಕುದುರೆಯ ಗಾಡಿಯನ್ನು ಕಟ್ಟಿಸಿ ಕೊಂಡು ಹೋಗಿ, ನಮ್ಮ ಮಂತ್ರಿಯ ಹೆಂಡತಿಯಾದ ಚಿತ್ರಲೇಖೆ ಯನ್ನು ಮಹಾರಾಣಿಯ ಅಪ್ಪಣೆಯಾಗಿದೆ ಎಂದು ಹೇಳಿ, ಕರದು ಕೊಂಡು ಬಾ' ಎನ್ನು ಹೇಳೆ ಹಿಂದಿರುಗಿ ಹೋಗುತ್ತಿದ್ದ ಮನ್ನಾ ರಿಕೆಯನ್ನು ಆಹೆಂಗಸರು ಕೈಹಿಡಿದು ನಿಲ್ಲಿಸಿ, ವಿಶೇಷವರ್ತಮಾನವೇನು ? ಎನ್ನು ಕೇಳಿದರು, ಮನಃರಿಕೆ-ಅಯ್ಯೋ! ಏನುಹೇಳಲಿ ! ನಮ್ಮ ಮಹಾರಾ