ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೈರವಾನಂದ. ೪೭ wr\n- ** * ** * h ur, rs *** • - ಪಾರುಪತ್ಯಗಾರ..- ಒಡೆಯನೇ! ಆಮೇಲೆ ನಡೆದ ಸಂಗತಿ ಯನ್ನು ಏನೆಂದುಹೇಳಲಿ; ಹೇಳು ವದಕ್ಕೆ ನನಗೆ ಬಾಯಿಯೇ ಬರು ವುದಿಲ್ಲವಲ್ಲಾ ಏನು ಮಾಡಲಿ ? ಹೇಗೆ ಹೇಳಲಿ ? ಭೈರವಾನಂದ.--ಎಲೈ [ ನೀನಂಜಬೇಡ, ಏನಾದರೂ ಆಗಲಿ, ನಡೆದಸಂಗತಿಯನ್ನು ಯಥಾರ್ಥವಾಗಿ ಹೇಳು. ಪಾರುಪತ್ಯಗಾರ.- ಒಡೆಯನೇ , ಆ ರಾಜಕುಮಾರನ ಆಳುತನವನ್ನು ಏನು ಹೇಳಲಿ ? ರೆಪ್ಪೆ ಬಡಿಯುವಷರೊಳಗಾಗಿ ನಮ್ಮ ಇಪ್ಪತ್ತು ಮರು ಸವಾರರನ್ನು-ಎಂದು ಸುಮ್ಮ ನಾದನು. ಭೈರವಾನಂದ-ಏನುಮಾಡಿದನು? ತಡಮಾಡದೇ ಹೇಳು. ಕತ್ತರಿಸಿಬಿಟ್ಟ ನೋ ? ಪಾರು ಸತ್ಯಗಾರ-ಅಹುದು; ಬುದ್ದೀ ! ಅಹುದು. ಭೈರವಾನಂದ-ಮುಟ್ಟಾಳಾ ! ಅವನು, ಎದ್ದು ಕತ್ತಿ ಎತಿ ಕಡಿಯುವವರೆಗೂ ನೀವು ಮಾಡುತ್ತಿದ್ದು ದೇನು ? ಕುರಿಗ ಳಂತೆ ತಲೆಬೊಗ್ಗಿಸಿಕೊಂಡು ನಿಂತಿದ್ದಿರೋ ? ಅಥವಾ ಬಾಳೆಯ ಹಣ್ಣು ತಿನ್ನು ತಿದ್ದಿರೋ ? ನಿಮ್ಮ ಕೈಯಲ್ಲಿ ಆಯುಧಗಳು ಇರ ಲಿಲ್ಲ ವೋ ? -೧ ಪಾರುಪತ್ಯಗಾರ-ಆಯುಧಗಳನ್ನು ಉಪಯೋಗಿಸುವ ಹಾಗೆ ಇದ್ದಿದ್ದರೆ, ಈ ಅನರ್ಥಗಳು ಸಂಭವಿಸುತ್ತಿರಲಿಲ್ಲ. ಭೈರವಾನಂದ.-ನೀವು ಆಯುಧಗಳನ್ನು ಉಪಯೋಗಿ ಸದೇ ಇದ್ದು ದೇಕೆ ? ನಿಮ್ಮ ಆಯುಧಗಳಿಗೆ ಯಾರಾದರೂ ಪಂಪು ಮಾಡಿದ್ದರೋ ?