ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vs

  • //೧” * * * * * * * * *

ಭೈರವಾನಂದ. ಪಾರುಪತ್ಯಗಾರ.-ಆ ದಿನ ಆ ಹೊತ್ತಿಗೆ ಸರಿಯಾಗಿ ನಿನ್ನ ಪ್ರಿಯಳಾದ ಗಂಧರ್ವಕುಮಾರಿಯು ಅಲ್ಲಿಗೆ ಬರುತ್ತಾಳೆಂದು ನನಗೆ ಚೆನ್ನಾಗಿ ಗೊತ್ತಿದ್ದಿ ತು. ಭೈರವಾನಂದ.-ಮೊಲಕ್ಕೆ ಅಂಜಿ ನಾಯಿಯು ಬಿಲಕ್ಕೆ ಸೇರಿಕೊಂಡಹಾಗಾಯಿತು, ಆ ರಾಜಪುತ್ರರಿಗೆ ಅಂಜಿ ನೀನು ಆ ಅಬಲೆಯನ್ನು ಮೊರೆಹೊಕ್ಕೆಯೋ ? ಪಾರುಪತ್ಯಗಾರ.-ಹಾಗಲ್ಫ್ ; ಆ ರಾಜಪುತ್ರರನ್ನು ರಾತ್ರಿ, ಏನಾದರೂ ಒಂದು ಪಾಯದಿಂದ ಬೋನಿನೊಳಕ್ಕೆ ಸೇರಿ ಸುವಂತೆ ಆಕೆಯನ್ನು ಕೇಳಿಕೊಂಡು ಆಕೆಗೆ ನಾನು ಬೆಂಬಲವಾಗಿ ನಿಂತುಕೊಂಡೆನು. ಭೈರವಾನಂದ.-ಮತ್ತೂ ಸೊಗಸಾಯಿತು, ಯಾವ ಊರಿಗೆ ಯಾವ ದಾರಿ? ಪರಶುರಾಮ ಕ್ಷೇತ್ರವಿರುವುದೆಲ್ಲಿ ? ರಾಜ ಪುತ್ರರು ಪಯಣಮಾಡುತ್ತಿರುವುದೆಲ್ಲಿಗೆ ? ಪಾರುಪತ್ಯಗಾರ.-ಆ ರಾಜಪುತ್ರರು ತಾವಾಗಿಯೇ ನಾವು ಒಡ್ಡಿದ್ದ ಬೋನಿನ ಸವಿಾಪಕ್ಕೆ ಹೋಗಿಸೇರುವಹಾಗೆ ಮಾಡಿದೆನು. ಭೈರವಾನಂದ-ಭಲಾ : ಭಲಾ !! ಅದು ಹೇಗೆ ? ಪಾರು ಪತ್ಯಗಾರ.-ಆ ರಾಜಪುತ್ರರು ಆದಾರಿಯಲ್ಲಿ ಅದೇ ಮೊದಲನೆಯ ಸಲ ಪಯಣ ಮಾಡುವುದೆಂದು ನನಗೆ ಚೆನ್ನಾಗಿ ಗೊತ್ತಾಗಿದ್ದು ದರಿಂದ ಅವರು ಸ್ವಾಭಾವಿಕವಾಗಿ ಮೂರು ದಾರಿ ಗಳು ಸೇರುವ ಸ್ಥಳದಲ್ಲಿ ದಾರಿಯನ್ನು ವಿಚಾರಿಸದೇ ಮುಂದರಿ ಯಲಾರರೆಂದು ಯೋಚಿಸಿಕೊಂಡು ಆ ಸಮಯದಲ್ಲಿ ಪರಶು ರಾಮ ಕ್ಷೇತ್ರ ದಿಂದ ಬರುತ್ತಿದ್ದ ಒಬ್ಬ ದಾಸೈಯ್ಯನನ್ನು ಕಂಡು ಅವನನ್ನು ಕೈಕಾಲು ಕಟ್ಟಿ ಒಂದು ಹಳ್ಳದಲ್ಲಿ ಕೆಡಹಿ ಅವನ