ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ. ಸಮಾಗಮು. ಪ್ರಾಚೀನ ಕಾಲದಲ್ಲಿ ಸಾಮಾನ್ಯವಾಗಿ ನದಿಗಳು ಪೂರ್ಣ ವಾಗಿ ಪ್ರವಹಿಸಿದರೆ, ನದೀ ತೀರವಾಸಿಗಳಿಗೆ ಅದೊಂದು ದೊಡ್ಡ ಮಹೊತ್ಸವವಾಗಿದ್ದಿತು. ಅದ್ಯಾಪಿ, ಈ ಮಹೋತ್ಸವವನ್ನು ವಿಶೇಷವಾಗಿ, ಮಹಾನದೀ ತೀರವಾಸಿಗಳು ಬಹು ಶ್ರದ್ದೆ ಯಿಂದ ಲೂ ವೈಭವದಿಂದಲೂ ಮಾಡುತ್ತಾರೆ. - ಈ ಉತ್ಸವವು ವರ್ಷಂಪ್ರತಿಯಲ್ಲಿ ಯ ನಡೆಯುವುದಿಲ್ಲ. ಏತಕ್ಕೆಂದರೆ, ಅಂತಹ ಪೂರ್ಣ ಪ್ರವಾಹವು, ಕೇವಲ ಅತಿವೃಷ್ಟಿ ಯಾದ ವರ್ಷಗಳಲ್ಲಿ ಮಾತ್ರ ಬರುವುದಲ್ಲದೆ ಸಾಧಾರಣವಾದ ಮಳೆಗಳಿಗೆಲ್ಲಾ ಬರು ವುದಿಲ್ಲ. ಅತಿವೃಷಿಯು ಬಹು ತರವಾಗಿ ಸಸ್ಯವರ್ಗಕ್ಕೂ ಪ್ರಾಣಿ ವರ್ಗಕ್ಕೂ ಅಪಾಯಕರವಾದಾಗ್ಯೂ ಆರ್ಯರು ಅದನ್ನು ಸಾಕ್ಷಾ ದ್ವರುಣನ ಪ್ರತಿನಿಧಿಯೆಂದು ಅಷ್ಟು ಶ್ರದ್ದಾ ಭಕ್ತಿಯಿಂದ ಪೂಜಿಸು ವುದೇನೂ ಅಯುಕ್ತವಲ್ಲ, ಅದೇತಕ್ಕೆಂದರೆ, “ ಲೋಕಕ್ಕುಪ ಕರಿಸುವನೊಳ್ಳೋಷಮುಂ ಸ್ಕೂತ್ಯಮಲೈ ? ಪ್ರತಿಯೊಂದು ನದೀ ತೀರ ಪಟ್ಟಣಗಳಲ್ಲಿ ಯ ಪೂರ್ಣ ಪ್ರವಾಹಕ್ಕೆ ಒಂದೊಂದು ಗುರುತು ಉಂಟು, ಆಯಾ ಗುರು ತುಗಳಿಗೆ ನೀರುಹತ್ತಿದ ಹೊರತು ಪೂರ್ಣ ಪ್ರವಾಹವೆನ್ನುವುದಿಲ್ಲ.