8 - ಟೆಂಟಿನ ಮೇಳಗಳು ಆರಂಭದಲ್ಲಿ ಒಂದೇ ಕಡೆ ಎರಡು, ಮೂರು, ಐದು ಆಟ
ಗಳನ್ನಾಡುತ್ತಿದ್ದುವು. ಈಗ ಹೆಚ್ಚಾಗಿ ಒಂದು ಕ್ಯಾಂಪಿನಲ್ಲಿ ಒಂದೇ ಆಟ. ಇದನ್ನು
ಆರಂಭಿಸಿದವರು ಸುರತ್ಕಲ್ಲು ಮೇಳದ ಕಸ್ತೂರಿ ಪೈ ಸೋದರರು.
9 ಕಳೆದ ಒಂದು ದಶಕದಲ್ಲಿ ಬಡಗುತಿಟ್ಟು ಭಾರೀ ಪುನರುತ್ಥಾನ ಪಡೆದಿದೆ. ಈಗ
ಎಲ್ಲೆಡೆ ಬಡಗಿನ ಮೇಳಗಳಿಗೆ ಪ್ರೋತ್ಸಾಹ ಇದೆ. ಅಮೃತೇಶ್ವರಿ, ಸಾಲಿಗ್ರಾಮ,
ಇಡಗುಂಜಿ ಮೇಳಗಳು ಈ ಪುನರುತ್ಥಾನಕ್ಕೆ ಕಾರಣ. ಉತ್ತರ ಕನ್ನಡದ ಕಲಾವಿದ
ವಿಭಿನ್ನ ಪ್ರಕಾರದ ಕಲಾಭಿವ್ಯಕ್ತಿ ಇದರಲ್ಲಿ ಮಹತ್ವದ ಪಾತ್ರ ವಹಿಸಿದೆ.
ಬಡಗುತಿಟ್ಟಿನ ಮೇಳಗಳ ಯಶಸ್ಸಿನಿಂದ ತೆಂಕುತಿಟ್ಟಿನ ಮೇಳಗಳಲ್ಲೂ
(ಪರಂಪರೆ) ಸಂಪ್ರದಾಯದ' ಎಚ್ಚರ ಕಂಡು ಬಂದುವು. ಪೌರಾಣಿಕ ಪ್ರಸಂಗಗಳು,
ಹಳೆ ಪದ್ಧತಿಯ ವೇಷಭೂಷಣಗಳು ತೆಂಕುತಿಟ್ಟಿನಲ್ಲಿ ಕಂಡು ಬಂದುವು. ಆದರೆ, ಈ
ಪ್ರವೃತ್ತಿ ಅಲ್ಲಿಗೇ ತಣ್ಣಗಾಗುತ್ತಿದೆ.
10 ಮಾತುಗಾರಿಕೆಗೆ ಆಟಗಳಲ್ಲಿ ಬಹಳ ಮಹತ್ವ ಬಂದಿತ್ತು. ಇದಕ್ಕೆ ಮುಖ್ಯವಾಗಿ
ಹರಿದಾಸತ್ರಯರು - (ಸರ್ವಶ್ರೀ ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರ
ನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗ) ಕಾರಣರು. ಆದರೆ ಇವರಲ್ಲಿ
ಬ್ಬರು ನೃತ್ಯವನ್ನು ತಿಳಿದವರಲ್ಲ. ಇವರ ಯಶಸ್ಸು ರಂಗದಲ್ಲಿ ಯಶಸ್ಸು ಕಡೆಗಣಿ
ಸಲ್ಪಡಲು ಕಾರಣವಾದುದು ಒಂದು ದುರಂತ. ಇದೀಗ ಹಿತಮಿತ ಮಾತುಗಾರಿಕೆ,
ಜತೆಗೆ ನೃತ್ಯವನ್ನೂ ಬಲ್ಲ ತರುಣರು (ಉದಾ: ಕೆರೆಮನೆ ಬಂಧುಗಳು, ಗೋವಿಂದ
ಭಟ್,) ರಂಗದಲ್ಲಿದ್ದಾರೆ.
11 ತೆಂಕುತಿಟ್ಟಿನಲ್ಲಿ ಪದ್ಯಾಭಿನಯದ ಪುನರುದಯ ಇನ್ನೊಂದು ಮಹತ್ವವ
ಬೆಳವಣಿಗೆ, ದಿ| ಕುರಿಯ ವಿಠಲ ಶಾಸ್ತ್ರಿಗಳ ಮತ್ತು ಉತ್ತರ ಕನ್ನಡದ ಕಲಾವಿದರ
ಯಶಸ್ಸು ಇದಕ್ಕೆ ಒಂದು ಕಾರಣವಾದರೆ, ಉತ್ತರ ಕನ್ನಡದ ಪ್ರಸಿದ್ಧ ಭಾಗವತ
ಶ್ರೀ ಕಡತೋಕ ಮಂಜುನಾಥರು ಧರ್ಮಸ್ಥಳ ಮೇಳದಲ್ಲಿ ಒಂದು ದಶಕಕ್ಕೂ ಮಿಕ್ಕಿ
ಭಾಗವತರಾಗಿದ್ದುದು ಇನ್ನೊಂದು ಕಾರಣ. ಭಾಗವತಿಕೆಯಲ್ಲಿ ರಸಾಭಿವ್ಯಕ್ತಿಗೂ
ಇವರಿಂದ ಬಲು ದೊಡ್ಡ ಕೊಡುಗೆ ಸಂದಿದೆ. ಇವರ ಭಾಗವತಿಕೆ ತೆಂಕು -ಬಡಗು
ತಿಟ್ಟುಗಳಲ್ಲಿ ವ್ಯಾಪಕ ಪ್ರಭಾವ ಬೀರಿದೆ.
12 ಮೇಳಗಳಲ್ಲಿನ ಪೀಠಿಕೆವೇಷ, ಎರಡನೇ ವೇಷ, ಬಣ್ಣದ ವೇಷ, ಪುಂಡುವೇಷ
ಎಂಬ gradation ಮತ್ತು ತದನುಸಾರವಾದ ಪಾತ್ರ ವಿತರಣೆ, ಇವು ಈಗ ಇಲ್ಲ.
ಪ್ರಸಿದ್ಧ ಮಾತುಗಾರರ ಪ್ರವೇಶ ಇದಕ್ಕೆ ಕಾರಣ.
ಪುಟ:ಜಾಗರ.pdf/೫೩
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಮೇಳಗಳು / ೪೫