ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ಣಾಟಕ ಗ್ರಂಥಮಾಲೆ

ಮಹಮ್ಮದೀಯರು ದೇವಗಿರಿರಾಜರನ್ನು ಸೆರೆಹಿಡಿದರು. 1310 ರಲ್ಲಿ ದ್ವಾರಸಮುದ್ರದಲ್ಲಿನ ಬಲ್ಲಾಳರಾಜರ ಹೆಸರಡಗಿಸಿದರು. 1323 ರಲ್ಲಿ ಓರಗಲ್ಲಿನ ಪ್ರತಾಪರುದ್ರರಾಜನನ್ನು ದೆಹಲಿಗೆ ಹಿಡಿದೊಯ್ದರು. ಹೀಗೆ ದಕ್ಷಿಣದೇಶದಲ್ಲಿನ ಹಿಂದೂರಾಜ್ಯಗಳೆಲ್ಲವೂ ತಳಹತ್ತಿದ್ದರಿಂದ ಹಿಂದೂಮತಕ್ಕೂ ದೇಶಸ್ವಾತಂತ್ರಕ್ಕೂ ಆಧಾರಸ್ತಂಭವೇ ಇಲ್ಲದೆ ಹೋಯಿತು. ಹಿಂದೂದೇಶಕ್ಕೆ ಅಂತಹ ವಿಪನ್ನಾವಸ್ಥೆಯು ಪ್ರಾಪ್ತವಾದ ಸಂದರ್ಭದಲ್ಲಿ ಅದನ್ನುದ್ಧರಿಸುವುದಕ್ಕೆ ಅವತರಿಸಿದ ರಾಜ್ಯವೇ ಈ ವಿಜಯನಗರಸಾಮ್ರಾಜ್ಯವು. ಆಕಾಲದಲ್ಲಿ ಈ ಪ್ರಭುತ್ವವು ಹುಟ್ಟದೆ ಹೋಗಿದ್ದರೆ ಹದಿನಾಲ್ಕನೆಯ ಶತಾಬ್ದದಲ್ಲಿಯೇ ಅಂದರೆ ಈಗ್ಗೆ 500 ಸಂವತ್ಸರಗಳಿಗಿಂತ ಮುಂಚೆಯೇ ದಕ್ಷಿಣಹಿಂದೂದೇಶವೆಲ್ಲವೂ ಸಂಪೂರ್ಣವಾಗಿ ತುರುಷ್ಕರಪಾಲಾಗಿ ಹಿಂದೂಮುತವೆಲ್ಲವೂ ತಳಹತ್ತಿ ನಾವೆಲ್ಲರೂ ಮಹಮ್ಮದೀಯರಾಗಿ ಹೋಗುತ್ತಿದ್ದೆವೆಂದು ಹೇಳಿದರೂ ಅತಿಶಯೋಕ್ಕೆಯೆನ್ನಿಸದೆಂದು ವಿಜ್ಞಾನಚಂದ್ರಿಕಾ ಗ್ರಂಥಮಾಲೆಯ ಮಹಮ್ಮದೀಯಮಹಾಯುಗದಲ್ಲಿ ಕಂಠಕವಾಗಿ ಉಪಪಾದಿಸಿರುವರು, ಪಠನಿಯ ಚರಿತ್ರಂಥಗಳ ಕೆಲವು ಈ ವಿಷಯವನ್ನು ಬಹುಸಂಕ್ಷೇಪವಾಗಿ ವಿವರಿಸಿರುವುದರಿಂದ ಇದರ ಸಮಗ್ರ ಚರಿತ್ರೆಯನ್ನು ನಾವು ಶೋಧಿಸಿತಿಳಿಯದೆ ಉದಾಸೀನದಿಂದ ಇರುವುದು ತುಂಬಾ ಶೋಚನೀಯವು.

ವಿಜಯನಗರವು ಬಳ್ಳಾರಿ ಡಿಸ್ಟಿಕ್ಕಿನ ಹೊಸಪೇಟೆಗೆ ಸಮೀಪದಲ್ಲಿ ತುಂಗ ಭದ್ರಾನದಿಯ ದಕ್ಷಿಣತೀರದಲ್ಲಿ ಕಟ್ಟಲ್ಪಟ್ಟಿತ್ತು. ಈ ನದಿಯ ಆಚೆನ ದಡದಲ್ಲಿ ರಾಮನ ಕಾಲದಿಂದಲೂ, ಕಿಷ್ಕಿಂಧೆಯೆಂದು ಪ್ರಸಿದ್ಧಿಯನ್ನು ಹೊಂದಿ ಆನೆಗೊಂದಿ ಎಂದು ಹೆಸರುಗೊಂಡ ಪಟ್ಟಣವಿರುವುದು. 700 ವರುಪಗಳಿಂದಲೂ, ಆನೆಗೊಂದಿ ರಾಜ್ಯವನ್ನು ಹಿಂದುಗಳೇ ಆಳುತ್ತಿರುವರು.