ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ © ® ಕರ್ಣಾಟಕ ಗ್ರಂಥಮಾಲೆ ame ಚಂದ್ರೋದಯ ಎಂಬೆರಡು ಗ್ರಂಥಗಳನ್ನು ತೆಲುಗಿಸಿದರು. ಈ ನರಸಭೆ ಶಾಲನಿಗೆ ತಿಪ್ಪಾಣಿ, ನಾಗಲಾಂಬಿಕೆ, ಓಬಾಂಬಿಕೆ, ಎಂಬ ಮೂವರು ಪತ್ನಿಯ ರಿದ್ದರು. ಇವರಲ್ಲಿ ತಿಪ್ಪಾಜೆಯಿಂದ ವೀರನರಸಿಂಹರಾಜನೂ, ನಾಗಲಾಂಬಿಕೆ ಯಿಂದ ಕೃಷ್ಣರಾಯನೂ, ಓಬಾಂಬಿಕೆಯಿಂದ ಅಚ್ಯುತರಾಜನೂ ಜನಿಸಿದರು. ಈ ನರಸರಾಜನ ತರುವಾಯ ಇವನ ಹಿರಿಯಮಗನಾದ ವೀರನರಸಿಂಹ ರಾಯನು ಕೆಲವು ಕಾಲ ರಾಜ್ಯವನ್ನಾಳಿದನು. ಈ ನರನಾಥನು ಪೂಜ್ಯವಾದ ರಾಜ್ಯವನ್ನಾಳುತ್ತಿದ್ದು ತನ್ನ ಅವಸಾನ ಕಾಲವು ಸವಿಾಪವಾಗಲು, ತನ್ನ ತರುವಾಯ ಈ ರಾಜ್ಯವನ್ನು ಎಂಟು ವರುಷದವನಾದ ತನ್ನ ಮಗನಿಗೆ ಆಗಗೊಳಿಸದೆ ಸಹೋದರನಾದ ಕೃಷ್ಣ ರಾಯನು ಆಕ್ರಮಿಸಿಕೊಳ್ಳುವನೆಂದೆಣಿಸಿ, ಸಕಲವಿಧಗಳಲ್ಲಿಯ ತನಗೆ ಸಹಾಯಕನಾಗಿಯೂ, ಪರಮ ವಿಧೇಯನಾಗಿಯ, ಅನುಚಾತನಾಗಿಯ ಇದ್ದ ಕೃಷ್ಣರಾಯನ ಮೇಲೆ ಅಸೂಯೆಗೊಂಡು, ತನ್ನ ಮಂತ್ರಿ ಶ್ರೇಷ್ಠನಾದ ತಿಮ್ಮರಸನನ್ನು ಕರೆಯಿಸಿ, ಕೃಷ್ಣರಾಯನ ಎರಡು ಕಣ್ಣುಗಳನ್ನು ತಂದು ಕೊಟ್ಟಹೊರತು ಈ ಪಾಣಗಳು ಶಾಂತವಾಗಿ ಹೋಗಲಾರವೆಂದು ಹೇಳಿ ದುಃಖಿಸಲು, ಆ ಮಂತ್ರಿ, ಪುಂಗವನು ಪಟುಪರಾಕ್ರಮ ಧುರಂಧರನಾದ ಕೃಷ್ಣರಾಯನನ್ನು ಕೊಲ್ಲಿಸಿ ರಾಜ್ಯಲಕ್ಷ್ಮಿಯು ಪಡುವ ಸಂಕಟವನ್ನು ನೋಡಲೊಲ್ಲದೆ, ಕೃಷ್ಣರಾಯನನ್ನು ಗುಟ್ಟಾಗಿ ಮರಸಿಟ್ಟು, ಹುಲ್ಲೆಯ ಕಣ್ಣುಗಳೆರಡನ್ನು ತರಿಸಿ ಆ ರಾಜನಿಗೆ ತೋರಿಸುಲು ಅವು ತನ್ನ ತಮ್ಮನ ನೇತ್ರಗಳೇ ಎಂದು ನಂಬಿ ರಾಜನು ಸ್ವರ್ಗಸ್ಥನಾದನು. ಕೃಷ್ಣದೇವರಾಯನು (ಕೃಷ್ಣರಾಯ) ದಕ್ಷಿಣ ಹಿಂದೂದೇಶವ ಸ್ನಾಳಿದ ರಾಜರುಗಳಲ್ಲೆಲ್ಲ ಶ್ರೇಷ್ಠನೆನ್ನಬಹುದು. ಆತನ ಜನ್ಮ ದಿನವು ಇಂತಹುದೆಂದು ಹೇಳಲು ಆಧಾರಗಳು ಯಾವುವೂ ದೊರೆತಿಲ್ಲ ವಾದರೂ ಕ್ರಿ. ಶ 1465 ಕ್ಕೆ ಸರಿಯಾದ ಶಾಲಿವಾಹನಶಕೆ 1387 ನೇ ವಿಕೃತಿಸಂವತ್ಸರ