ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶ೦ ೧೫ - (3) ಅಧಮನು, (4) ಅಧಮಾಧಮನು, (5) ನೀಚನು ಇವರಯ್ಯರನ್ನು ನೀವು ಕರೆದುಕೊಂಡು ಬಂದರೆ ತಪ್ಪದೆ ನನ್ನ ಮಂತ್ರಿತ್ವವನ್ನು ನಿಮಗೆ ನಿಮಗೆ ಕೊಡುವೆನು, ” ಎಂದು ಹೇಳಿದನು. ಆಗಲಾಪಂಡಿತರು, ಮಹಾಪ್ರ ಭುವೇ ಬುದ್ಧಿಯವರು ಕುಶಾಗ್ರಮದ್ಧಿಯುಳ್ಳವರು, ತಾವು ಹಾಕಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುವುದು ಸುಲಭವಾದ ಕೆಲಸವಲ್ಲ. ಪ್ರಶ್ನೆ ಯು ಸ್ವಲ್ಪ ಕಠಿಣವಾಗಿಯೇ ಇರುವಂತೆ ಕಾಣುತ್ತಿದೆ. ಇದಕ್ಕೆ ತಕ್ಕ ಉತ್ತ ವನ್ನು ಹೇಳಬೇಕಾದರೆ ಕನಿಷ್ಠ ಪಕ್ಷ ಆರುತಿಂಗಳ ಅವಧಿ ಬೇಕಾಗುವು ದೆಂದು ಅರಿಕೆಮಾಡಿಕೊಂಡರು. ರಾಯರು ಆ ಮಾತನ್ನು ಕೇಳಿ ಈ ಪಂಡಿ ತರು “ ನಿತ್ಯವೂ ಏನು ಮಹಾರಾಯ ; ನಮ್ಮ ಮಂತ್ರಿತ್ವದ ವಿಷಯವೇನು ಮಾಡಿದೆ ?” ಎಂದು ಕೇಳುತ್ತಾ ಪೀಡಿಸದಂತೆ ಆರುತಿಂಗಳು ಕಳೆದುಹೋ ಗುವುದಲ್ಲವೆ? ಆ ತರುವಾಯ ನೋಡಿಕೊಳ್ಳೋಣವೆಂದೆಣಿಸಿ ಹಾಗೆಯೇ ಆಗಬಹುದೆಂದು ಅವರಿಗೆ ಅಪ್ಪಣೆಕೊಟ್ಟು ಕಳುಹಿದನು. ತರುವಾಯ ಪಂಡಿತರು ತಮ್ಮ ಮನೆಗೆ ಹೋಗಿ ಎರಡು ಮೂರು ದಿನಗಳು ಕಳೆದಮೇಲೆ ರಾಯರು ಕೊಟ್ಟ ಪ್ರಶ್ನೆಗಳನ್ನು ಬಿಡಿಸುವ ಆಲೋಚನೆಗಾಗಿ ಒಂದು ಮಹಾಸಭೆಯನ್ನು ಸಮಾವೇಶ ಮಾಡಿಸಿದರು. ಆ ಸಭೆಯಲ್ಲಿ ಮೊದಲನೆಯ ಪ್ರಶ್ನೆ ” ಬದುಕಿದರೆ ಬದುಕತಕ್ಕವನು ಯಾವನು ? !” ಎಂದು ಚರ್ಚೆ ಜರುಗಲಾರಂಭಿಸಿತು. ಅದಕ್ಕೆ ಹದಿನೆಂಟು ವರಸದ ಹರೆಯದ ಹುಡುಗನನ್ನು ಏರ್ಪಡಿಸಿ “ ಇವನಿ ಗೇನು ಅಳಿಗಾಲಬಂದೀತೆ ? ಬದುಕಿದರೆ ಬದುಕದೆ ಏನು ? ಇನ್ನೂ ಆರು ಮಾಸಗಳ ಅವಧಿ ಇರುವುದಲ್ಲವೇ ? ಅಷ್ಟರೊಳಗೆ ಅವನನ್ನು ಚೆನ್ನಾಗಿ ಪೋಷಿಸಿ ಇವನಿಂದ ದಂಡೆಗಳುತೆಗಿಸಿ ಒಳ್ಳೇಕಸರತ್ತು ಮಾಡಿಸಿದರೆ ಆರು ತಿಂಗಳವೇಳಗೆ ಕೋಣನಂತೆ ಬಲಿತು ರಾಜರಮುಂದೆ ಇಡಲಿಕ್ಕೆ ತಕ್ಕವ ನಾಗುವನು. ” ಎಂದು ನಿಶ್ಚಯಿಸಿದರು. ಇನ್ನು ಎರಡನೆಯ ಪ್ರಶ್ನೆ.