ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದಶFo ೪೭ MM ಈ ತಳಹದಿಗೆ ಈಶಾನ್ಯದಲ್ಲಿ “ ಜನಾನಾ ” ಎಂಬ ಕಟ್ಟಡವಿದೆ. ಇದರ ಒಳಭಾಗದಲ್ಲಿ ಸುತ್ತಲೂ ಕಮಾನುಗಳು ಕಟ್ಟಲ್ಪಟ್ಟಿವೆ. ಇದು ಆಯಾಕೃತಿಯಾಗಿದೆ, ಈ ಪ್ರಕಾರದಲ್ಲಿ ಇನ್ನೂ ಎಷ್ಟೋ ಅರಮನೆ ಗಳು ಇದ್ದಂತೆ ಅಲ್ಲಿ ಬಿದ್ದಿರುವ ಕಲ್ಲುಗಳ ರಾಶಿಯಿಂದ ತಿಳಿದುಕೊಳ್ಳ ಬಹುದು. ಈ ಅಂತಃಪುರ ಪಕಾರಕ್ಕೆ ಹೊರಗಡೆ ರಾಜನನಗರ, ಟಂಕ ಸಾಲೆ, ಸೇನಾಪತಿಗಳ ಮತ್ತು ಸಾಮಂತರಾಜರ ಸೌಧಗಳ, ಮನೋಜ್ಞ ಗಳಾದ ಮನೆಗಳು ಇದ್ದವಂತೆ ! ಅವುಗಳ ಮಧ್ಯದಲ್ಲಿರುವ ಚಾವಡಿಗೆ ಮಹಡಿಯ, ಮೇಲಕ್ಕೆ ಹೋಗಲು ಮೆಟ್ಟಿಲುಗಳ ಇರುವುವು. ಇದು ಬಹುಶಃ ಪಟ್ಟದಾನೆಯನ್ನು ನಿಲ್ಲಿಸುವಸ್ಥಳವಾಗಿರಬಹುದು. ಈ ಗಜಶಾಲೆಯ ಹತ್ತಿರವೇ ಪಶ್ಚಿಮದಿಕ್ಕಿನಲ್ಲಿ ನಾಟ್ಯ ಶಾಲೆ ಇರು ವುದು, ಮುಂಭಾಗದಲ್ಲಿ ಎರಡು ಕಡೆಗಳಲ್ಲಿಯ ಎರಡುದೊಡ್ಡ ಜಗುಲಿ ಗಳಿರುವುವು. ಪ್ರತಿ ಜಗುಲಿಯಮೇಲೆಯೂ ಇದರಂತೆ ಹತ್ತು ಕಂಭಗಳುಳ್ಳ ಪಡಸಾಲೆ ಇರುವುದು, ಒಳಗಡೆ ಕೂಡ ನಾಲ್ಕು ಕಡೆಗಳಲ್ಲಿಯೂ ಜಗಲಿ ಯಂತಹ ದಿಣ್ಣೆಗಳಿರುವುವು, ಅವುಗಳಲ್ಲಿ ಕೂಡ ಮುಂಭಾಗದಹಾಗೆಯೇ ಕಮಾನುಗಳುಳ್ಳ ಪಡಸಾಲೆ ಇರುವುದು, ಮಧ್ಯದಲ್ಲಿ ಚಚ್‌ಕವಾಗಿ ಹಳ್ಳದಪ್ರದೇಶವಿರುವುದು ಬಹುಶಃ ಈ ಸ್ಥಳದಲ್ಲಿ ಇಟ್ಟಿಗಳ, ಮಲ್ಲರೂ ಮಲ್ಲಯುದ್ಧವನ್ನು ಮಾಡುತ್ತಿದ್ದರೆ ಸುತ್ತಲೂ ಇರುವ ವಸಾರೆಯಲ್ಲಿ ರಾಜರು ಕುಳಿತು ನೋಡಲು ಅನುಕೂಲವಾಗಿರಬಹುದು. ಈ ನಾಟ್ಯಶಾ' ಗೆ ಉತ್ತರಕಡೆ ಎರಡು ಫಲಾಂಗುಗಳ ದೂರದಲ್ಲಿ ಚಿಕ್ಕ ಬೆಟ್ಟದಸಾಲೊಂದಿರುವುದು, ಈ ಬೆಟ್ಟ ಸಾಲಿನಮೇಲೆ ಅಲ್ಲಲ್ಲಿ ಅನೇಕ ಕಟ್ಟಡಗಳೂ ಗುಹೆಗಳೂ ಇರುವುವು. ಈಬೆಟ್ಟದ ಸಾಲನ್ನು ಹತ್ತಿ ದರೆ ಅಲ್ಲಿ ಒಂದು ಕೊಠಡಿಯಂತಹ ದೊಡ್ಡ ಗವಿ ಇರುವುದು; ಅದು ಋಷ್ಯಾ ಇಮವಾಗಿರಬಹುದೆಂದು ತೋರುತ್ತದೆ." ೧