ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಕರ್ಣಾಟಕ ಗ್ರಂಥಮಾಲೆ m ಲ ಣ ಇದರಲ್ಲಿ ನಗೋಡೆಗಳ ಮೇಲೆ ನಾನಾವಿಧಗಳಾದ ವಿಗ್ರಹಗಳನ್ನು ಕೆತ್ತಿರು ವುದರಿಂದ, ಇದರಲ್ಲಿ ಅಲ್ಲಲ್ಲಿ ಹಳೆಗನ್ನಡದ ಅಕ್ಷರಗಳಲ್ಲಿ ಬರೆದಿರುವ ಶಾಸನಗಳನ್ನು ನೀಡಲಾಗುವುದು. ಗರ್ಭಗೃಹಕ್ಕೆ ಹತ್ತಿಕೊಂಡು ಮುಂದೆ ಇರುವ ಮಂಟಪದಲ್ಲಿ ಕುಯ ಸ್ಥಂಬಗಳ ಮೇಲೆ ಭಕ್ತಿಯನ್ನುಂಟುಮಾ ಡುವ ಅನೇಕ ವಿಗ್ರಹಗಳು ಅತಿ ಮೃದುವಾಗಿ ಕೆತ್ತಲ್ಪಟ್ಟು, ಪೂರ್ವಕಾ ಲದ ಶಿಲೆನ್ನತ್ಯವನ್ನು ತಿಳಿಸುವುದರಿಂದ ಇದನ್ನು ನೋಡಿ ಅಚ್ಚರಿಗೊಳ್ಳ ದವರಿಲ್ಲ, ಗರ್ಭಾಲಯದ ಉತ್ತರಭಾಗದಲ್ಲಿ ಒಂದು ದೊಡ್ಡ ಮಂಟಪ ವಿರುವುದು, ದಕ್ಷಿಣಾಭಿಮುಖವಾದ ಇದರ ದ್ವಾರಕ್ಕೆ ಬಲಗಡೆಯ ಗೋಡೆ ಯಮೇಲೆ ( ತಾಲೀವಾ ಹನಶಕೆ ೧೪೩೫ ನೇ ಮುಖಸಂವತ್ಸರ ಚೈತ್ರ ಶುದ್ಧ ಪಂಚಮಿಯ ದಿನ ಈ ಆಲಯವು ಶ್ರೀ ಕೃಷ್ಣರಾಯರಿಂದ ಕಟ್ಟಿಸಲ್ಪ ಟ್ಟಿದೆ” ಎಂದು ಸ್ಥಿರಪಡಿಸುವ ಶಾಸನ ಒಂದಿರುವುದು, ಈ ಮಂಟಪದಲ್ಲಿ ರಾಮಾಯಣದ ಕಥಾವಿಶೇಷಗಳನ್ನು ತಿಳಿಸುವುವುಗಳಾಗಿ ಕಡು ಮನೋಹರ ಗಳಾದ ವಿಗ್ರಹಗಳು ಗೋಡೆಗಳಲ್ಲಿ ಕೆತ್ತಲ್ಪಟ್ಟಿವೆ. ಹಚಾರವೆಂದರೆ ಪಂಗಣ ರಾಜಪಾಸಾದಾವರಣಗಳಿರುವುದರಿಂದ ಇದಕ್ಕೆ ಆಹೆಸರು ಬಂದಿರ ಬಹುದು. ಈ ದೇವಾಲಯವನ್ನು ಬಿಟ್ಟು ಇನ್ನೂ ಕೆಲವು ಅಡಿಗಳ ದೂರ ಮುಂದಕ್ಕೆ ಹೋದರೆ ಅಲ್ಲಿ ಒಂದು ಕಟ್ಟಡ ಕಾಣಬರುವುದು, ಇದನ್ನು ಅಲ್ಲಿನಜನರು “ ನೆಲಮಾಳಿಗೆ ” ಎಂದು ಹೇಳುವರು ಅದಕ್ಕೆ ಇದು ಎಡ ಪಾರ್ಶ್ವದಲ್ಲಿರುವುದು ಇದು ಭೂಮಟ್ಟಕ್ಕೆ ಸಮಾನವಾಗಿರುವುದರಿಂದ ಹತ್ತಿ ರಕ್ಕೆ ಹೋಗಿ ನೋಡಿದಹೊರತು ಪ್ರೇಕ್ಷಕರಿಗೆ ಇದು ಕಾಣಬಾರದು. ಇದು ಪೂರ್ತಿಯಾಗಿ ಭೂಮಿಯಲ್ಲಿ ಹೂಳಲ್ಪಟ್ಟಿರುವುದರಿಂದ ಅದರ ದ್ವಾರ ವನ್ನು ಇದುವರೆಗೂ ಕಂಡುಹಿಡಿಯಲಿಕ್ಕೆ ಆಗದೆ ಮೇಲುಭಾಗದಲ್ಲಿ ಒಂದು ಕಡೆ ಕೆಳಕ್ಕೆ ಇಳಿಯುವುದಕ್ಕಾಗಿ ಒಂದು ಕಡಂಗು ತೆಗೆದಿರುವರು,