ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರನಿರಚಿತ ಧರಿಸಿದನು ಚೀನಾಂಬರವನಾ | ಭರಣಗಳ ತಾಳ್ಮೆಸೆವ ಪೂಗಳ | ತುಳುಬಿ ಸಾದು ಜವಾಜೆಗಂಧವ ಲೇಪನಂಗೆಯ್ಯು 11. ಬೆರಸಿ ಹಡಪದ ಚಾಲನೆಯ್ತರು | ತಿರಲು ಕಾಷ್ಠಾಂಗಾರ ಸುರಗಿಯ | ತಿರುಹುತಲಿ ನಟನೆಯಲ್ಲಿ ಗಣಿಕೆಯ ಮನೆಗೆ ನಡೆತಂದ || ೧೩ ಬಂದು ಕಾಷ್ಠಾಂಗಾರ ದೋರದಿ | ಹೊಂದಿಸಿಹ ಹೊಂಗಂಟೆಯನು ಸಾ || ನಂದದಲಿ ದನಿಗೆಯ್ಯ ಚೇಟಿಯರಾಗಳೆಯ್ತಂದು || ಇಂದುಮುಖಿಗೊತ್ತೆಯನು ಕೊಂಡೊಲ || ವಿಂದಲಾತನ ಕರೆಸಲವನಾ | ಮಂದಿರದ ರಚನೆಯ ವಿಳಾಸವ ಹೊಕ್ಕನಯಲಿ | ೧೪ - ಲಲನೆ ಕಳೆ ಕಪ್ಪರದ ಕಸವನು | ತಳಿ ಸುಗಂಧೋದಕವನಗಿಲ ಹೊಗೆ | ಗೊಳಿಸು ನಗದೊಲಿದಿಕ್ಕು ಮುತ್ತಿನ ರಂಗವಲ್ಲಿಯನು || ಬೆಳಗು ಮಣಿದೀಪವನು ತೊಡಿಗೆಯ | ನಳವಡಿಸಿಕೊಳ್ಳಂಬ ಚೇಟಿಯ | ರುಲುಹನಾಲಿಸುತೋವರಿಗೆ ಬರುತಿರ್ದನೊಲವಿನಲಿ | ೧೫ - ಗಿರಿಶನಟ್ಟಿದನೆತ್ತೆಗೆಂದೇ || ಸೆಳೆಯನೋಹಿಗೆ ಕೊಟ್ಟ ವಜ್ರವ | ಸುರಪ ಬಿಡಿಸಲು ಬಂದನಜ ಕುಂಡಲವ ಹರಿಮಣಿಯ || ವರುಣ ಹಾರವ ತಂದನೊತೆಗೆ | ಕರೆವೆನಾರುವನಕ್ಕೆ ಬೆಸಸೆ || ದಲಹುತಿಹ ದೂತಿಯ ನುಡಿಯನಾಲಿಸುತ ಬರುತಿರ್ದ | ೧೬ - ಲಲಿತಚಿತ್ರದ ರಂಗದೋವರಿ | ಯೋಳಗೆ ಕುಸುಮದ ಹರಹಿನಲಿ ಮೊಹಿತಿ | ವಲಘುಮಣಿಮಂಚವನು ಕಾಷ್ಠಾಂಗಾರ ಸಾರ್ದಿರಲು || ಲಲನೆಯರ ಮೃದುಗೀತ ಶುಕಕೋ | ಕಿಲಮರಾಳಾಲಾಪಗಳ [ಮನ] | ವೊಲಿದು ಕೇಳುತ್ತಿರಲು ರವಿಯಸ್ಕಾಗೆಯ್ತಂದ || ೭