ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೫೫ ಪುರದ ಪುಣ್ಯದ ಪುರುಷರೂಪಿಂ | ದುರಿದು ಹೋದುದು ಸಕಲಪುರಜನ | ಪರಿಜನದ ಸೌಭಾಗ್ಯವಿಂದಗಲಿತ್ತು ಕಲ್ಪಕುಜ || .ಧರೆಗೂ ಆಗಿನಿಂದಖಿಳಧರಣೀ | ಶ್ವರರ ಚೂಡಾರತ್ನ ವಿಂದೊಡೆ | ದುರುದುದು ಹಾಯೆಂದು ಗೋಳಿಟ್ಟಅಲಿತವಿಳಜನ || ೨ ಹರನ ಸಮನಮರೇಂದ್ರನೆಣೆ ಮುರ | ಹರನ ಪಾಟಿ ಜಯಂತನೊರೆ ಭಾ | ಸ್ಕರನ ಜೋಡು ಮೃಗಾಂಕನಿಭ ದಶರಥತನೂಭವನ | ಸರಿ ಪಿತಾಮಹನೀಡು ತಾನೆನಿ || ಪರಸ ನಿಮಿಷಕೆ ಕೆಟ್ಟನೆನೆ ಹುಲು | ನರರ ಸಂಸಾರವನು ಸುಡಲೆಂದುಲಿತಖಿಳಜನ | ಹೊಳೆವ ಮಣಿಮಯಹರ್ಮದೊಳು ಕೋ | ಮಳೆಯರೊಡನೆ ವಿಲೋಲಹಂಸಾ | ವಳಿಯ ತಲ್ಪದ ಮೇಲೆ ಪವಡಿಸಿದಾಗೃಫೋತ್ತಮನು || ಕಳನೊಳಗೆ ಭೂತಾಳಿ ಸುತ್ತಲು | ಬಳಸಿ ಬರೆ ಹರಳೊತ್ತೆ ಸುಡುಗಾ | ಡೊಳಗೆ ಮಲಗಿದನಕಟ ಹಾಯೆಂದಅಲಿಖಿಲಜನ | ವಿವಿಧತೃತ್ಯವ ನೋಡುವಗೆ | ಸವನಿಸಿತೆ ಮರುಳಾಟ ಮೃದುಗಾ | ನವನು ಕೇಳುವ ಕರ್ಣ ವಿಹಗಧನಿಗೆ ಸೊಗಯಿಸಿತೆ || ಯುವತಿಜನಸಂಸ್ಪರ್ಶತನುವಿ | ಬುವಿಗೆ ಬಯಸಿತೆ ಹಾಯೆನುತ ಜನ | ನಿವಹ ನೆರೆ ಮಲಗಿತ್ತು ತಾಜಾವಸಾನದಲಿ || ಸುದತಿಗೂಡಿಂದರಸ ಪೂರ್ವಾ || ಸ್ಥದಲಿ ಸೌಖ್ಯದೊಳಿರ್ದುಮಪರಾ | ಸ್ಥದಲಿ ತಾನಿಂತಾದ ನೋಡುತ್ತಿರಲು ಲೋಕದಲಿ || ವಿಧಿಯ ಮೀಾಡುವರಾರು ಕೆಡುವೀ || ಬದುಕಿಗೊಸುಗ ಲೋಭಮಾಯಾ | ಮದದೊಳೊಂದಿಹುದೇಕೆ ಜಗವೆಂದುಲಿತವಿಳಜನ |