ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಹವಿರಚಿತ ವರವಿಚಿತ್ರವಿತನಮಯಮಂ | ದಿರದೊಳಬಲೆಯರಂಘ್ರಗಳ ವಿ! ಸ್ವರದೊಳೊತ್ತಲು ಅಂಚೆವಾಸಿನ ಮೇಲೆ ಪವಡಿಸುವ | ಪುರುಷನೀನೆಣನೆತ್ತರೊಳು ಭೂ | ತರುಣಿಯನು ನೆರೆ ಮೆಚ್ಚಿ ಬಿಡದಾ | ಧರೆಯನಪ್ಪಿದೆಯೆಂದು ಮನದೊಳು ಮಲಗಿದಳು ರಮಣಿ || ೨೭ ಅಂಬುಜಾನನೆ ಭೂಮಿಪನ ಚಿ೦ } ತಾಂಬುಧಿಯೊಳೋಲಾಡುತಿರೆ ನೆತ್ತಿ | ತುಂಬಿದುದು ನವಮಾಸ ವರಶುಭಲಗ್ನ ಸಮಯದಲಿ || ಕಂಬುಕಂಧರೆ ಸೂರಗೆಣೆಯೆಂ | ದೆಂಬ ಸುಕುಮಾರಕನ ಪಡೆದುಅತಿ | ಹಂಬಲಿಸುತಿರ್ದಳು ಮಹೀಶನ ನೆನೆದು ಶೋಕದಲಿ || ೨ಳ ೨೮ - ಸಾರಚಂದ್ರೋಪಲದ ರಮ್ಯಾ | ಗಾರದಲಿ ಸುಕುಮಾರ ನೀನವ | ತಾರಿಸದೆ ಸುಡುಗಾಡಿನಲಿ ಬಂದುದಿಸುವರೆ ಕಂದ || ಚಾರುವುಣ್ಯಾತ್ಮ ಕರ ಬಸಿಲಿ | ಬಾರದತಿಪಾಪಾತಗೆ ಸುಕು | ಮಾರ ನೀನುದಿಸುವರೆ ಹೇಂತೆಂದಲಿದಳು ರಮಣಿ | ೯ ಬಾಲಕನೆ ನಾ ನಿನ್ನ ಜಠರಕೆ | ಹಾಲುಬೆಣ್ಣೆಯನೆಲ್ಲಿ ತರುವೆನು | ಗೋ೨ನೀಕ್ಷಿಸಲಾಯಿತನಾವಂದದಲಿ ನಾ ನಿನ್ನ || ಪಾಲಿಸುವೆನೆಲ್ಲಿರಿಸುವೆನು ಬಿಡಲು | ಗಾಳಿಗಳಿಗಾನೆಲ್ಲಿಗುಯ್ಯನು | ಪೇಟ ಕಂದಯೆನುತ್ತ ಮುಂಡಾಡಿದಳು ನಂದನನಾ | ೩೦ - ಸರಸಿಜಾಂಬಕಿಯಿಂತು ಮಲುಗು | ತಿರೆ ಕುಮಾರನ ಪುಣದೇವತೆ | ಯುರುತರದಿ ತದ್ದಾತ್ರೀವೇಷದಿ ಬರಲು ಕಂಡಬಲೆ || ಹರಣ ಬಂದಂತಿಲ್ಲಿಗೆಂತೆಲೆ | ತರುಣಿ ಬಂದೆಯೆನುತ್ತ ಶೋಕಿಸು | ತಿರಲು ದೇವತೆ ನುಡಿದಳಾಕೆಗೆ ದಾದಿಯಂದದಲಿ ||