ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೭೨ و ೭೩ ೭೩ ಧರ್ಮವೇ ಸ್ವಾಧ್ಯಾಯಜಪತಪ | ಧರ್ಮವೇ ಕೈವಲ್ಯಸಂಪದ | ಧರ್ಮವೇ ಸುಜ್ಞಾನಮೌನಧ್ಯಾನದಾನದಯ || ಧರ್ಮವೇ ನುತಹೋಮನೇನ ಸು | ಧರ್ಮವೇ ಸಗ್ಗ ಕ್ಕೆ ಕಾರಣ | ಧರ್ಮವೇ ತಾನಾದಿವಸ್ತು ಕುಮಾರ ಕೇಳೆಂದ || ಧರೆಗೆ ವಿಚಿತೇಂದ್ರಿಯನೆ ಸುಖಿ ಸ | ಚರಿತನೇ ದುರ್ಲಭನು ಪರಧನ | ಆಗದವನೇ ಶುಚಿಯಹಿಂಸನಜಾತನಭಿಮಾನಿ || ಗರುವನದಯನೆ ಪಾಪಿ ಕಾಮಾ | ತುರನತುಳವಯಯುತನು ಯೋಗೀ | ಶ್ವರನು ತಿಳಿಯೆ ಕೃತಘ್ನ ನಾರಕಿಯೆಂದನಾಮುನಿಪ || * ಸರಸಸುಖವಿಪದುನ್ನತಿಗೆ ಹೇ | ವರಿಸುವವನತಿಕಷ್ಟ ಕೋಮಲೆ || ಯರ ಕಟಾಕ್ಷದ ಹೊಯ್ತಿಗಳುಕದನೇ ಮಹಾಧೀರ ||' : ಪರಹಿತನೆ ಪುಣ್ಯಾತ್ಮ ಲೋಭಿಯೆ | ಧರೆಗೆ ಬಾಹಿರ ಜಾ ನಿಯೇ ನೆರೆ | ಮರುಳನವ ಪರನಿಂದಿತನೆ ನಿಂದಾತ್ಮನಮನಿಯಲಿ || ಧುರದೊಳೊಡೆಯನನೊಪ್ಪಗೊಟ್ಟೋಳ | ಸರಿವ ಭಂಡನು ಪಿಸುಣನೇ ರಿಪು | ವರರ ದಂಡಿಸುವವನೆ ಬಳನಾತ್ಮರತನೇ ಮುಕ್ತ | ಪರಿಣತನೆ ಸರ್ವಜ್ಞನತಿನಿ | ಷ್ಟು ರನೆ ರಾಕ್ಷಸನನ್ಯಧರ್ಮದಿ | ಚರಿಸುತಿಹನವ ಕುಲವಿಹೀನನು ಮಗನೆ ಕೇಳೆಂದ || ಚೋರ ಸರ್ವದ್ರೋಹಿ ಶಾಸ್ತ್ರವಿ | ದೂರನೇ ಪಶು ಪರಧನವನಪ | ಹಾರಿಸುವನೇ ಅಧಮ ಜೀವದಯಾಪರನ ಮುಕ್ತ || ಧಾರಿಣಿಯೊಳುಪಕಾರಿ ವಿನುತ ವಿ | ಚಾರಪರನುತ್ತಮನು ಸಾರೋ || ದಾರದಯೆಯಿಂ ಯುಕ್ತನೇ ಶುದ್ಧಾತ್ಮನವನೆಂದ || ೭೫