ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ೨೩ ಭಾಸ್ಕರಕವಿರಚಿತ ಸರಲ ವೃಷ್ಟಿಯನಾಕಿರಾತರು | ಸುರಿಯೆ ತಾಣಗಳನೆಡೆಯಲಿ | ಮುಂದು ಜೀವಂಧರನು ನಿಶಿತಾಸ್ತ್ರಗಳಲಾಖಳ | ಶಿರಗಳನು ಕತ್ತರಿಸಿ ಹೊಕ್ಕೊಡ | ವೆರಸಿ ಗೋಸಂಕುಲವ ನಿಮಿಷಾಂ | ತರಕೆ ತಿರುಹಿದನೊಂದುಟಿಯದಂತಾಜಿರಂಗದಲಿ || ೨೬ ಧರಣಿಪತಿ ಕೇಳಿಂತು ಜೀವಂ | ಧರನು ತುತುಗಳ ಮರಳಿಸಲು ಗೋ | ವರರು ಮುದದಲಿ ಗೋವುಗಳನವಜವ ನಾಮದಲಿ | ಕರೆದು ಹಟ್ಟಿಯ ಹುಗಿಸಿ ಜೀವಂ || ಧರನು ತನ್ನ ಯ ಮಿತ್ರರೈನೂ | ರ್ವರು ಸಹಿತ ಗೋಕುಲವ ನೋಡುತ್ತಿರ್ದನೊಲವಿನಲಿ || ೨೪ ಕಾಲೊಳವನಿಯನಣೆದು ಕೊಡಲಿ | ಶೈಲಗಳನೊಡೆಮಗುಚಿ ದೆಸೆಗಳ | ಮೂಲೆ ಬಿಡೆ ಗರ್ಜಿಸುತ ಮಾರ್ದನಿಗಗಿದು ನಂದಿನಿಯ || ಮೇಲಡರಿ ಬಾಲವನು ನೆಗಹಿ ಛ | ಡಾಳಿಸುತಲವೃಳಿಸಿ ಮಲೆಯುತ | ಲೀಲೆಯಲಿ ಬಹ ಗೂಳಿಯನು ಸುಕುಮಾರನೀಕ್ಷಿಸಿದ | ೨೫ - ಲೋಲಕರ್ಣವನೆತ್ತಿ ತಿತ್ತಿರಿ | ಗಾಳೆಗಳ ನಿಂದಾಲಿಸುತ ಕೊನೆ | ವಾಲದಿಂ ತೊಡೆದಂಗವನು ಕುಸಿದಳುಕಿ ಕೊರಲೆ || ಮೇಲನೀಕ್ಷಿಸಿ ವತ್ವಗಳನುಹತಿ | ಪಾಲಿಸುತ ಕುಗೂಡಿ ಗೋವನ | ಗಾಳಿಗೈತಹ ಗೋವುಗಳ ಸುಕುಮಾರನೀಕ್ಷಿಸಿದ || - ಕಟುವ ಕಾಣದೆ ಮಗುದ್ದು ಹೂಂಕೆ | ದಾಚಿ ಬಿಡದೀಕ್ಷಿಸುತ ಕೆಚ್ಚಲ | ಭರದಿ ಬಳುಕುತ ಹೊಕ್ಕಿಯನಿಲುಹಿದ ತೆಲದಿ ಮೊಲೆವಾ || ಬಿರಿವಿಡುತ ಪರವತ್ವಗಳಿಗೆ | ಬೃರಿಸಿ ಸೋಂಕುವ ಗೂಳಿಗಳಿಗೊಳ | ಸರಿಯುತಿರ್ದಾಸುರಭಿಗಳ ಸುಕುಮಾರನೀಕ್ಷಿಸಿದ ||. ೨೭. $೬.