ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧುನಿಕ ವೇಧಯಂತ್ರಗಳು ದೊಡ್ಡ ದೊಡ್ಡ ರಾವುಗನ್ನಡಿಗಳನ್ನು ಮಾಡುವುದೂ ಸುಲಭ. ಈಗ ಅಮೇರಿಕೆಯಲ್ಲಿ ಇಂತಹದೊಂದು ಪ್ರಚಂಡ ಯಂತ್ರವು ತಯಾರಾಗಿರುವುದು. ಅದರ ಕನ್ನ ಡಿಯ ವ್ಯಾಸವು ೨೦೦ ಇಂಚುಗಳು, ಮೌಂಟ್ -ಉಯಿಲ್ ಸನ್ ಎಂಬ ಗುಡ್ಡದ ಮೇಲಿನ ವೇಧಶಾಲೆಯಲ್ಲಿ ಇದನ್ನು ಇಟ್ಟಿರುವರು. ಸೂರ್ಯಕಾಂತದಲ್ಲಿ ಹೀಗೆ ಪ್ರಕಾಶಕಿರಣಗಳನ್ನು ಮಣಿಸುವ ಗುಣವಿದ್ದರೆ ಇನ್ನೊಂದು ತರಹದ ಕಾಜಿನ ತುಂಡುಗಳಲ್ಲಿ ಅವುಗಳನ್ನು ಒಡೆಯುವ ಗುಣವಿರುತ್ತದೆ. ಇವುಗಳು ಲೋಲಕಗಳೆಂದು ಕರೆಯಲ್ಪಡು ಇವೆ. ಇವುಗಳೊಳಗಿಂದ ಬಳಿಯ ಕಿರಣಗಳು ಹಾಯಲು ಎರಡನೆಯ ಬದಿಗೆ ಕಾಮನಬಿಲ್ಲೇ ಮಡಿದಂತೆ ಕಾಣುತ್ತದೆ. ಈ ಎಲ್ಲ ಬಣ್ಣಗಳು ಎಲ್ಲಿಂದ ಬಂದವು ? ಇವೆಲ್ಲ ಬಿಳಿಯ ಬಣ್ಣದ ಘಟಕಗಳಾಗಿರುತ್ತದೆ. ಉಪ್ಪು, ಕಾರ ಮುಂತಾದ ಪದಾರ್ಧಗಳಿಂದ ಪಲ್ಯಗಳು ಆಗುವಂತೆ ಊದಿ (Violet), ಕರಿನೀಲಿ (Indigo), ನೀಲಿ (Blue), ಹಸಿರು (Green), ಹಳದಿ (Yellow), ಕಿತ್ತಳೆ (Orange), ಕೆಂಪು (Red)-ಈ ಬಣ್ಣಗಳು ಕೂಡಿ ಬಿಳಿಯ ಬಣ್ಣವಾಗಿರುತ್ತದೆ. ಲೋಲಕಗಳಲ್ಲಿ ಹಾಯುವಾಗ ಬಿಳಿಯ ಬಣ್ಣವು ಒಡೆಯಲ್ಪಟ್ಟು ಅದರೊಳಗಿನ ಈ ಘಟಕಗಳೆಲ್ಲ ಕಾಣಹತ್ತುತ್ತವೆ. ಕಾಮನ ಬಿಲ್ಲ ಹೀಗೆಯೆ ಆಗುತ್ತದೆ. ಮಳೆಗಾಲದಲ್ಲಿ ಸೂರ್ಯನ ಕಿರಣಗಳು ನೀರಿನ ಕಣಗಳಿಂದ ಹೀಗೆ ಒಡೆಯಲ್ಪಡುವುದರಿಂದಲೆ ನಾವು ಎಲ್ಲ ತರಹದ ಬಣ್ಣ ಗಳನ್ನು ಕಾಣುತ್ತೇವೆ.

  • ಬಿಳಿಯದಾಗಿ ಕಾಣುವಷ್ಟು ಕಾಯ್ದೆ ಯಾವುದೊಂದು ಘನ ಪದಾರ್ಧದ ಕಿರಣಗಳು ಒಡೆಯಲ್ಪಟ್ಟರೂ ಇವೇ ಬಣ್ಣಗಳು ಕಾಣುವವು. ಆದುದರಿಂದ ಸೂರ್ಯನು ಹೀಗೆ ಅತಿಶಯವಾಗಿ ಕಾಯ್ದವನಿರಬೇಕೆಂದು ಸಿದ್ಧವಾಗುವುದು. ನಕ್ಷತ್ರಗಳದೂ ಇದೆ ಸ್ಥಿತಿ. ಸೂರ್ಯನ ಹೊರಮೈಯ ಉಷ್ಣತೆಯೆ ೬,೦೦೦ ಅಂಶವಿರುವುದು. ೧೦೦ ಅಂಶಕ್ಕೆ ನೀರು ಮರಳುವುದು. ೩೦೦೦ ಅಂಶಗಳಿಗೆ ಕಬ್ಬಿಣವು ಕರಗುವುದು. ಎಂದಬಳಿಕ ೬,೦೦೦ ಅಂಶ ಗಳಿಗೆ ಏನಾಗಲಿಕ್ಕಿಲ್ಲ? ಕೆಲವು ನಕ್ಷತ್ರಗಳ ಹೊರಮೈ ೨೫,೦೦೦ ಅಂಶ ಉಷ್ಣತೆಯುಳ್ಳುದಿರುವುದು. ಈ ಯಂತ್ರಕ್ಕೆ ಸ್ಪೆಕ್ಟ್ರಾಸೈಪ್ (Spectroscope) ಎನ್ನುವರು.